Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ರೈತರಿಗೆ ಸೂಕ್ತಪರಿಹಾರ ನೀಡದ ಕೆ.ಆರ್.ನಗರ ಪುರಸಭೆಯ ಪೀಠೋಪಕರಣ ಜಪ್ತಿ


ಕೆ.ಆರ್.ನಗರ ; ಒಳಚರಂಡಿ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಜಮೀನು ನೀಡಿದ್ದ ರೈತರಿಗೆ ಸೂಕ್ತಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾನ್ಯಾಯಾಲಯ ಆದೇಶದ ಮೇರೆಗೆ ಕೆ.ಆರ್.ನಗರ ಪುರಸಭೆಯ ಚರಾಸ್ಥಿಯನ್ನು ಜಪ್ತಿ ಮಾಡಲಾಯಿತು.
ಬುಧವಾರ ಬೆಳಿಗ್ಗೆ ರೈತರೊಡಗೂಡಿ ವಕೀಲರು ಮತ್ತು ಕೋರ್ಟ್ ಅಮೀನುದಾರರು ಪುರಸಭೆಗೆ ಆಗಮಿಸಿ, ಜಪ್ತಿ ಆದೇಶದೊಂದಿಗೆ ಕಂಪ್ಯೂಟರ್, ವ್ಹೀಲ್‌ಚೇರ್, ಚೇರ್ ಸೇರಿದಂತೆ ಹಲವರು ವಸ್ತುಗಳನ್ನು ಪುರಸಭೆಯಿಂದ ಹೊರತೆಗೆದು ಲಾರಿಗೆ ತುಂಬಿದರು.
ಈ ಹಿಂದೆ ಎರಡು ಜಪ್ತಿ ಆದೇಶದೊಂದಿಗೆ ಬಂದರೂ ಪುರಸಭೆ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ಕಾರಣ ಜಪ್ತಿಯನ್ನು ಮಂದೂಡಲಾಗಿತ್ತು. ಅಂತೆಯೆ ಬುಧವಾರ ಆಗಮಿಸಿದ ರೈತರ ಪರ ವಕೀಲರು ಮತ್ತು ನ್ಯಾಯಾಲಯದ ಸಿಬ್ಬಂದಿ ಪುರಸಭೆ ಚರಾಸ್ಥಿಯನ್ನು ಜಪ್ತಿ ಮಾಡಿದರು.
೨೦೦೯ರಲ್ಲಿ ಪಟ್ಟಣದ ಮಧುವನಹಳ್ಳಿ ಮತ್ತು ಕಾಳೇನಹಳ್ಳಿ ವ್ಯಾಪ್ತಿಯಲ್ಲಿ ಪುರಸಭೆ ವತಿಯಿಂದ ನಿರ್ಮಾಣ ಮಾಡಲಾಗಿರುವ ಒಳಚರಂಡಿ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ೩೦ಕ್ಕೂ ಹೆಚ್ಚು ರೈತರಿಂದ ಸುಮಾರು ೭ಎಕರೆ ೧೪ಗುಂಟೆ ಜಮೀನನ್ನು ವಶಕ್ಕೆ ಪಡೆದು ಅಂದು ತಲಾ ಒಂದು ಗುಂಟೆಗೆ ೧೩ಸಾವಿರ ರೂಪಾಯಿಗಳಂತೆೆ ಸುಮಾರು ೮೦ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗಿತ್ತು.
ಜಮೀನು ಕಳೆದುಕೊಂಡ ರೈತರು ತಮಗೆನೀಡಿರುವ ಪರಿಹಾರ ಸಾಲದೆಂದು ಕೋರ್ಟ್ ಮೆಟ್ಟಿಲೇರಿ ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿದ್ದರು. ವಾದ ಆಲಿಸಿದ ಕೋರ್ಟ್ ಕಳೆದ೨ವರ್ಷಗಳ ಹಿಂದೆಯೆ ಸೂಕ್ತಪರಿಹಾರ ನೀಡುವಂತೆ ತೀರ್ಪನೀಡಿ ಆದೇಶ ಹೊರಡಿಸಿತ್ತು. ಆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ಪುರಸಭೆಆಡಳಿತ ವಿಫಲಗೊಂಡಕಾರಣ ವಕೀಲ ವಿ.ಎಸ್.ಧನಂಜಯ ರೈತÀಪರ ವಕಾಲತ್ತುವಹಿಸಿ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು. ಈ ಸಂಧರ್ಭದಲ್ಲಿ ವಾದಆಲಿಸಿದ ಜಿಲ್ಲಾನ್ಯಾಯಾಲಯ ಪುರಸಭೆ ಆಸ್ತಿಜಪ್ತಿ ಮಾಡಲು ಆದೇಶ ಹೊರಡಿಸಿತ್ತು.
ಅಂತೆಯೆ ಸೋಮವಾರ ವಕೀಲ ವಿ.ಎಸ್.ಧನಂಜಯ ಕೋರ್ಟ್ ಅಮೀನ್‌ರೊಡಗೂಡಿ ಪುರಸಭೆ ಜಪ್ತಿಗೆ ಮುಂದಾದಾಗ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಮಧ್ಯಪ್ರವೇಶ ಮಾಡಿ ಜಪ್ತಿ ಮಾಡುವುದು ಬೇಡ ಎಂದು ಮನವಿಮಾಡಿ ಜು.೩೧ರವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ವಕೀಲ ವಿ.ಎಸ್.ಧನಂಜಯ ಭೂಮಿ ಕಳೆದುಕೊಂಡ ರೈತರು ಹಾಜರಿದ್ದರು.