
*ಏನೇ ಸಮಸ್ಯೆಗಳಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸರ್ಕಾರ ಸಿದ್ಧವಿದೆ.
ಮೈಸೂರು: ವಿಶ್ವ ಪ್ರಸಿದ್ದ ಮೈಸೂರಿನ ಅಂಬಾವಿಲಾಸ ಅರಮನೆ ಬೋರ್ಡ್ ರಾಜ್ಯ ಸರ್ಕಾರದ್ದು, ಅರಮನೆಯ ಬಹುಪಾಲು ಜಾಗವೂ ಸರ್ಕಾರದ್ದು. ಆದರೆ ರಾಜಮನೆತನದವರ ವಾಸಕ್ಕೆಂದು ಒಂದಿಷ್ಟು ಜಾಗ ಕೊಟ್ಟಿದ್ದೇವೆ. ರಾಜಮಾತೆ ಪ್ರಮೋದಾದೇವಿ ಅವರು ಹೇಳುವ ಎಲ್ಲಾ ಸಲಹೆಗಳನ್ನು ಕೇಳಲು ಸರ್ಕಾರಕ್ಕೆ ಸಾಧ್ಯವಿಲ್ಲ” ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತೀಕ್ಷ÷್ಣವಾಗಿ ಹೇಳಿದರು.
ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ಬಿಡುಗಡೆ ಮಾಡಿರುವ ನಾಲ್ಕು ಪ್ಮಟಗಳ ಪತ್ರಿಕಾ ಹೇಳಿಕೆಗೆ ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,
ಚಿನ್ನದ ಅಂಬಾರಿ ಸಂಪೂರ್ಣವಾಗಿ ಅರಮನೆಯ ಆಸ್ತಿ, ದಸರಾ ಸಂದರ್ಭದಲ್ಲಿ ನಾವು ಹಣಕೊಟ್ಟು ತೆಗೆದುಕೊಳ್ಳುತ್ತೇವೆ. ರಾಜಮನೆತನಕ್ಕೆ ನೀಡಬೇಕಾದ ಎಲ್ಲಾ ಗೌರವಗಳನ್ನು ನೀಡಿ, ಅವರ ಸಹಕಾರ ಪಡೆದೇ ದಸರಾವನ್ನು ನಡೆಸುತ್ತಿದ್ದೇವೆ. ಈ ಬಾರಿ ದಸರಾ ಸಮಯದಲ್ಲಾದ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರೆ, ಪ್ರಮೋದಾದೇವಿಯವರ ಜೊತೆ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
“ರಾಜಮನೆತನದವರು ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆಯುವ ಬದಲು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ದಸರಾ ಆರಂಭಕ್ಕೂ ಮುನ್ನ ನಾವೇ ಖುದ್ದಾಗಿ ಅರಮನೆಗೆ ತೆರಳಿ, ಅವರಿಗೆ ಗೌರವಪೂರ್ವಕ ಆಹ್ವಾನ ನೀಡಿದ್ದೆವು ಮತ್ತು ನಿರಂತರ ಸಂಪರ್ಕದಲ್ಲಿದ್ದೆವು. ವಿಜಯದಶಮಿಯ ಜಟ್ಟಿ ಕಾಳಗದ ಸಣ್ಣ ಘಟನೆಯನ್ನು ಹೊರತುಪಡಿಸಿದರೆ, ಬೇರೆ ಯಾವುದೇ ತೊಂದರೆ ಆಗಿಲ್ಲ. ಅವರಿಗೆ ಏನಾದರೂ ಕುಂದುಕೊರತೆಗಳಿದ್ದರೆ, ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದಿತ್ತು, ನಾವೇ ಖುದ್ದಾಗಿ ಬಂದು ಬಗೆಹರಿಸುತ್ತಿದ್ದೆವು. ಆದರೂ ಅವರು ಪತ್ರ ಬರೆದಿದ್ದಾರೆ. ಈಗ ಕೂಡ ಸರ್ಕಾರ ಅದಕ್ಕೆ ಸ್ಪಷ್ಟ ಉತ್ತರ ಕೊಡಲಿದೆ. ಏಳು ದಿನ ದಸರಾ ಬೇಡ, ಎರಡು ದಿನ ಅರಮನೆ ಮುಕ್ತವಾಗಿಡಿ ಎಂಬ ವಿಚಾರದ ಕುರಿತು ಸರ್ಕಾರದಿಂದ ಅಧಿಕೃತ ಉತ್ತರ ನೀಡಲಾಗುವುದು. ಈ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ. ಪ್ರಮೋದಾದೇವಿಯವರ ಜೊತೆ ಮಾತನಾಡಲು ಸಿದ್ಧರಿದ್ದೇವೆ. ಅವರು ಕರೆದರೆ ಹೋಗಿ ಮಾತನಾಡುತ್ತೇವೆ. ಪ್ರತಿ ವರ್ಷ ಇಂತಹ ತೊಂದರೆ ಉಂಟಾಗುತ್ತವೆ. ಜನ ಸೇರುವಾಗ ಏನು ಮಾಡಲು ಆಗಲ್ಲ ಎಂದು ಹೇಳಿದರು.
೧೯೭೧ ರಿಂದಲೂ ಮೈಸೂರು ದಸರಾ ನಾಡಹಬ್ಬ;
ಮೈಸೂರು ದಸರಾ ಕೇವಲ ಸರ್ಕಾರದ ಹಬ್ಬವಲ್ಲ, ಇದು ಜನರ ಹಬ್ಬ. ಪ್ರಜಾಪ್ರಭುತ್ವ ಬಂದ ನಂತರ ೧೯೭೧-೭೨ ರಿಂದ ಸರ್ಕಾರವೇ ಅಧಿಕೃತವಾಗಿ ನಾಡಹಬ್ಬವನ್ನಾಗಿ ದಸರಾವನ್ನು ಅತ್ಯಂತ ವಿಜೃಂಭಣೆಯಿAದ ನಡೆಸಿಕೊಂಡು ಬರುತ್ತಿದೆ. ಅರಮನೆ ಮಂಡಳಿ ಮತ್ತು ಆವರಣ ಸರ್ಕಾರದ ಅಧೀನದಲ್ಲಿದ್ದರೂ, ರಾಜಮನೆತನದ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಸರ್ಕಾರ ಯಾವುದೇ ಅಡ್ಡಿ ಮಾಡಿಲ್ಲ, ಬದಲಾಗಿ ಸಂಪೂರ್ಣ ಸಹಕಾರ ನೀಡಿದೆ” ಎಂದು ಹೇಳಿದರು.
ಅರಮನೆ ಸರ್ಕಾರದ್ದು, ಪ್ಯಾಲೇಸ್ ಬೋರ್ಡ್ ಸರ್ಕಾರದ್ದು, ಜಾಗ ಸರ್ಕಾರದ್ದು. ರಾಜಮನೆತನಕ್ಕೆ ಏನು ಗೌರವ ಕೊಡಬೇಕೋ, ಅವರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೋ ಎಲ್ಲವನ್ನೂ ಹಿಂದಿನಿAದಲೂ ಮಾಡಿಕೊಂಡು ಬಂದಿದ್ದೇವೆ. ಈಗಲೂ ಕೂಡ ಮುಂದುವರಿಸಿಕೊAಡು ಬಂದಿದ್ದೇವೆ. ಸಮಸ್ಯೆಗಳಿದ್ದರೆ ಸರ್ಕಾರಕ್ಕೆ ನೇರವಾಗಿ ಹೇಳಲಿ, ಖಂಡಿತವಾಗಿಯೂ ಅದನ್ನು ಬಗೆಹರಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು.
ಬಹಿಷ್ಕಾರದ ಮಟ್ಟಕ್ಕೆ ಹೋಗುವ ಅಗತ್ಯವಿಲ್ಲ;
ಮುಂದಿನ ದಿನಗಳಲ್ಲಿ ಅಂಬಾರಿ ಅಥವಾ ಅರಮನೆ ಆವರಣವನ್ನು ಬಿಟ್ಟುಕೊಡುವುದಿಲ್ಲ, ಬಹಿಷ್ಕಾರ ಹಾಕುತ್ತೇವೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, “ಅಂತಹ ವಿಪರೀತ ಹಂತಕ್ಕೆ ಹೋಗುವ ಯಾವುದೇ ಅಗತ್ಯವಿಲ್ಲ. ಅವರೇನಾದರೂ ಕಠಿಣ ಹೆಜ್ಜೆ ಇಟ್ಟರೆ, ಅದನ್ನು ಎದುರಿಸಲು ಸರ್ಕಾರ ಸಿದ್ಧವಿದೆ. ಆದರೆ ಸರ್ಕಾರ ಎಂದಿಗೂ ರಾಜಮನೆತನಕ್ಕೆ ಅನ್ಯಾಯ ಮಾಡಿಲ್ಲ. ಯಾವುದೇ ಗೊಂದಲಗಳಿದ್ದರೂ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬಹುದು. ಮುಖ್ಯಮಂತ್ರಿಗಳೇ ಅವರೊಂದಿಗೆ ಮಾತನಾಡಲಿದ್ದಾರೆ ಅಥವಾ ಅಧಿಕೃತವಾಗಿ ಸರ್ಕಾರದ ವತಿಯಿಂದ ಉತ್ತರ ನೀಡಲಾಗುವುದು” ಎಂದು ತಿಳಿಸಿದರು.
ಖಂಡಿತವಾಗಿಯೂ ರಾಜಮನೆತನ-ಸರ್ಕಾರದ ನಡುವೆ ಸಮನ್ವಯತೆ ಅಗತ್ಯ. ಹೈಕೋರ್ಟ್ಗೆ ಹೋಗುತ್ತೇವೆ. ಅಂಬಾರಿ ಕೊಡಲ್ಲ ಎಂಬAತಹ ಅವಕಾಶಕ್ಕೆ ಮುಂದಾದರೆ, ಹೋಗಲಿ. ಸರ್ಕಾರ ಅಗತ್ಯಕ್ರಮ ತೆಗೆದುಕೊಳ್ಳುತ್ತದೆ. ಆದರೆ ಅದರ ಅವಶ್ಯಕತೆಯೇ ಉದ್ಭವಿಸಲ್ಲ. ನಾವು ಮಾತುಕತೆ ಮೂಲಕ ಮುಂದುವರಿದಿದ್ದೇವೆ ಎಂದರು.
ಸರ್ಕಾರ ದಸರಾ ನಡೆಸಲು ಅವಕಾಶ ಮಾಡಿಕೊಡಬೇಕು. ಅದೇ ರೀತಿ ರಾಜಮನೆತನ ದಸರಾ ನಡೆಸಲು ನಾವು ಅವಕಾಶ ಮಾಡಿಕೊಡಬೇಕು. ಅವರು ಧಾರ್ಮಿಕ ಕಾರ್ಯ ನಡೆಸಲು ಸ್ವತಂತ್ರರು, ಖಾಸಗಿ ದಸರಾ ನಡೆಸಲು ಅವಕಾಶವಿದೆ. ಹೀಗಾಗಿ ಸಮನ್ವಯತೆ ಎಂಬುದು ಮುಖ್ಯವಾಗಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾದರೆ ಸಮಸ್ಯೆ ಬಗೆಹರಿಸಲು ಸರ್ಕಾರ ಸಿದ್ಧ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಿಂದ ತೊಂದರೆ ಉಂಟಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಟ್ಟಿಗಳು-ಪೊಲೀಸರ ನಡುವೆ ಸಮನ್ವಯದ ಕೊರತೆ ಉಂಟಾಗಿದೆ. ಅಂಬಾರಿ ಕಟ್ಟುವ ವಿಚಾರದಲ್ಲಿಯೂ ಬೇರೆಯವರು ಬಂದ ವಿಚಾರ, ಪೊಲೀಸರು ಬಿಡದಿದ್ದರೂ ಒಂದಿಬ್ಬರು ಹೋಗಿರಬಹುದು. ಈ ಸಮಸ್ಯೆಗಳನ್ನು ಕುಳಿತು ಬಗೆಹರಿಸಬಹುದು. ಪೊಲೀಸರಿಂದಾದ ತೊಂದರೆ ಕುರಿತ ಸಲಹೆಗಳನ್ನು ಬಗೆಹರಿಸಲು ನಾವು ಸಿದ್ಧ ಎಂದು ಹೇಳಿದರು.
೭ ದಿನ ದಸರಾ ಮಾಡಲು ಸಾಧ್ಯವಿಲ್ಲ: ರಾಜ್ಯ ಸರ್ಕಾರ ೭ ದಿನ ದಸರಾ ಆಚರಿಸುವಂತೆ ಪ್ರಮೋದಾದೇವಿ ನೀಡಿರುವ ಸಲಹೆ ಬಗ್ಗೆ ಪ್ರತಿಕ್ರಿಯಿಸಿ, ಅವರು ಹೇಳಿದಂತೆ ಮಾಡಲು ಸಾಧ್ಯವಿಲ್ಲ. ಈ ಕುರಿತು ಸರ್ಕಾರ ಕೂಡ ಒಪುö್ಪವುದಿಲ್ಲ, ಸರ್ಕಾರದ ತೀರ್ಮಾನದಂತೆ ದಸರಾ ಮಹೋತ್ಸವ ನಡೆಯಲಿದೆ. ಅಂತಿಮ ತೀರ್ಮಾನ ಸರ್ಕಾರ ತೆಗೆದುಕೊಳ್ಳಲಿದೆ ಎಂದರು.
ಜೆಟ್ಟಿಗಳ ವಿಚಾರದಲ್ಲಿ ಪೊಲೀಸರ ಹಸ್ತಕ್ಷೇಪ ಕುರಿತು ಮಾತನಾಡಿ, ಎಸಿಪಿ, ಡಿಸಿಪಿಗಳ ಹಸ್ತಕ್ಷೇಪಕ್ಕೆ ಪೊಲೀಸರ ವರ್ಶನ್ ಬೇರೆ ಇದೆ. ಪೊಲೀಸ್ ಕಮಿಷನರ್ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇವೆ. ಆ ಬಳಿಕ ಸೂಕ್ತ ಉತ್ತರ ಕೊಡುತ್ತೇವೆ ಎಂದು ಹೇಳಿದರು.