Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

15 ದಿನಗಳ ಕಾಲ ನಡೆದ ದಸರಾ ಆಹಾರ ಮೇಳದಲ್ಲಿ 216 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ


ಮೈಸೂರು; ಈ ಬಾರಿ ನಡೆದ ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ನಗರದ ಮಹಾರಾಜ ಕಾಲ್ಭೆಜ್ ಮೈದಾನದಲ್ಲಿ 15 ದಿನಗಳ ಆಯೋಜಿಸಲಾಗಿದ್ದ ದಸರಾ ಆಹಾರ ಮೇಳದಲ್ಲಿ ಬರೋ ಬರೀ 216 ಮೆಟ್ರಿಕ್ ತ್ಯಾಜ್ಯ ಉತ್ಪತ್ತಿಯಾಗಿದ್ದು, ಅದನ್ನು ಮೈಸೂರು ಮಹಾನಗರಪಾಲಿಕೆ ವಿಲೇವಾರಿ ಮಾಡಿದೆ ಎಂದು ಆಯುಕ್ತೆ ಎಂ.ಕೆ.ಸವಿತಾ ತಿಳಿಸಿದ್ದಾರೆ.
ದಸರಾ-2026 ರ ಅಂಗವಾಗಿ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಅ.11 ರಿಂದ 25 ರವರೆಗೆ ಒಟ್ಟಾರೆ ಹದಿನೈದು ದಿನಗಳ ಕಾಲ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ವಿವಿಧ ರೀತಿಯ ತಿನಿಸುಗಳನ್ನು ಸೇವಿಸುವ ಅವಕಾಶ ಕಲ್ಪಿಸಲಾಗಿತ್ತು.
ಪ್ರತಿನಿತ್ಯ ಸುಮಾರು 70-80 ಸಾವಿರ ಜನರು ಆಗಮಿಸುತ್ತಿದ್ದರು. ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯವೆಂದು ವಿಂಗಡಿಸಿ ಅಂದೇ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿತ್ತು.
ಇದಕ್ಕಾಗಿ 11 ಆಟೋ ಟಿಪ್ಪರ್ ಗಳು, 4 ಕಾಂಪ್ಯಾಕ್ಟರ್ ಗಳು ಮತ್ತು 40 ಸಂಖ್ಯೆಯ ಮಾನವ ಸಂಪನ್ಮೂಲವನ್ನು ನಿತ್ಯ ಮೂರು ಪಾಳಿಗಳಲ್ಲಿ ನಿಯೋಜಿಸಿ ಸ್ವಚ್ಛತೆಯನ್ನು ನಿರ್ವಹಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟಾರೆ ಉತ್ಪತ್ತಿಯಾದ ತ್ಯಾಜ್ಯದ ವಿವರ ಇಂತಿದೆ
ಹಸಿ ಕಸ : 181830
ಒಣ ಕಸ :27895
ಖಾಲಿ ನೀರಿನ ಬಾಟಲ್ ಗಳು :6325
ಒಟ್ಟು: 216050
216.05 ಮೆಟ್ರಿಕ್ ಟನ್