Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೂರ್ನಾಲ್ಕು ತಿಂಗಳಲ್ಲಿ ವಾಲ್ಮೀಕಿ ಭವನ ಉದ್ಘಾಟನೆ; ಶಾಸಕ ಅನಿಲ್ ಚಿಕ್ಕಮಾದು 

ಎಚ್ ಡಿ ಕೋಟೆ :  ಪಟ್ಟಣದಲ್ಲಿ 8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ವಾಲ್ಮೀಕಿ ಭವನ ಕಾಮಗಾರಿ ಶೇ 90ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ಪೂರ್ಣಗೊಂಡು , ಉದ್ಘಾಟನೆಯಾಗಲಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. 

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನವೆಂಬರ್ ೨ ರಂದು ಸರಗೂರಿನಲ್ಲಿ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದ್ದು, ಎಲ್ಲರೂ ಭಾಗಿಯಾಗಬೇಕೆಂದು ಮನವಿ ಮಾಡಿದರು.  ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಜೀವನ ಮತ್ತು ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಿವೆ. ವಾಲ್ಮೀಕಿ ಜಯಂತಿಯನ್ನು ದೇಶದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಆಚರಿಸಲಾಗುತ್ತಿದೆ ಎಂದರು. ಮಹರ್ಷಿ ವಾಲ್ಮೀಕಿ ಅವರು ತೋರಿಸಿಕೊಟ್ಟ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆದಾಗ ಮಾತ್ರ ರಾಮರಾಜ್ಯದ ಕಲ್ಪನೆ ಸಾಕಾರಗೊಳ್ಳಲು ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಶಿಕ್ಷಕ ಚನ್ನನಾಯಕ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸಿದ ಮಹಾನ್ ಋಷಿಯಾಗಿದ್ದು, ಅವರನ್ನು ಆದಿಕವಿ ಎಂದು ಗೌರವಿಸಲಾಗುತ್ತದೆ. ರಾಮಾಯಣದ ಮೂಲಕ ಶ್ರೀರಾಮನ ಆದರ್ಶ ಜೀವನ, ಸತ್ಯ, ಧರ್ಮ, ತ್ಯಾಗ, ಪ್ರೀತಿ ಹಾಗೂ ಕರ್ತವ್ಯದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ ಎಂದರು. ವಾಲ್ಮೀಕಿ ಅವರ ಜೀವನ ಬದಲಾವಣೆ ಮತ್ತು ಸಾಧನೆಗೆ ಉತ್ತಮ ಉದಾಹರಣೆಯಾಗಿದೆ. ಮನುಷ್ಯ ತನ್ನ ಜೀವನದಲ್ಲಿ ಒಳ್ಳೆಯತನವನ್ನು ಅಳವಡಿಸಿಕೊಂಡರೆ ಮಹಾನ್ ವ್ಯಕ್ತಿಯಾಗಬಹುದು ಎಂಬ ಸಂದೇಶವನ್ನು ಅವರ ಬದುಕು ಸಾರುತ್ತದೆ. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸತ್ಯದ ಹಾದಿಯಲ್ಲಿ ನಡೆದು ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆಯನ್ನು ಬೆಳೆಸಬೇಕು ಎಂದು ಹೇಳಿದರು.

ಇದಕ್ಕೂ ಮುನ್ನ ಪಟ್ಟಣದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಿವಿಧ ಕಲಾ ತಂಡಗಳೊಂದಿಗೆ ವಾಲ್ಮೀಕಿ ಪ್ರತಿಮೆಯನ್ನು ಬೆಳ್ಳಿರಥದಲ್ಲಿರಿಸಿ ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ನಡೆಸಲಾಯಿತು.

ತಹಶೀಲ್ದಾರ್ ಶ್ರೀನಿವಾಸ್, ಪದ್ಮಶ್ರೀ ಪುರಸ್ಕೃತ ಸೋಮಣ್ಣ, ದೊಡ್ಡನಾಯಕ, ಬಿ.ವಿ. ಬಸವರಾಜು, ಮರಿದೇವಯ್ಯ, ನಾಗರಾಜು, ಬೈಪಾಸ್ ಮಂಜುನಾಥ್, ಜಿನ್ನಹಳ್ಳಿ ರಾಜನಾಯಕ, ಜಿಯಾರ ಸೋಮೇಶ್, ಶಂಭುಲಿಂಗನಾಯಕ, ಮೈಮುಲ್ ಈರೇಗೌಡ, ರಾಜು ವಿಶ್ವಕರ್ಮ, ಭಾಗ್ಯಲಕ್ಷ್ಮಿ , ಅಶೋಕ್,  ನಿಂಗರಾಜು, ಅಶೋಕ್, ಚೌಡಳ್ಳಿ ಜವರಯ್ಯ, ಅಂಕನಾಯಕ, ಚಾಮರಾಜು, ಚಲುವರಾಜು, ಕೆಂಡಗಣ್ಣಸ್ವಾಮಿ, ಕಾಳಕಲ್ಕರ್, ಸ್ವಾಮಿ, ವೀರೇಗೌಡ, ಉಡ ನಾಗರಾಜು, ಸೌಮ್ಯ, ಮಂಜುನಾಥ್, ರಾಜು, ಮಲ್ಲೇಶ್, ಮೇಟಿಕುಪ್ಪೆ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಸುರೇಶ್,ಟಿ.ಎಲ್ ಸ್ವಾಮಿ, ವೀರೇಗೌಡ  ಈ  ಟಿ.ಎಚ್.ಒ. ರವಿಕುಮಾರ್, ಇನ್‌ಸ್ಪೆಕ್ಟರ್ ಗಂಗಾಧರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಹೇಶ್ ಹಾಗೂ ವ್ಯವಸ್ಥಾಪಕ ನಾಗರಾಜು ಇದ್ದರು.