Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಎರಡು ದಿನಗಳ ಚಿತ್ರ ಸಂತೆ ಚಾಲನೆ; ನೋಡುಗರ ಕಣ್ಮನ ಸೆಳೆಯುತ್ತಿವೆ ತರಾವರಿ ಚಿತ್ರಗಳು


ಮೈಸೂರು: ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಹಿನ್ನಲೆಯಲ್ಲಿ ನಗರದ ಮಾನಸಗಂಗೋತ್ರಿಯ ಕ್ಲಾಕ್ ಟವರ್ ಮುಂಭಾಗ
ಎರಡು ದಿನಗಳ ಕಾಲ ಆಯೋಜಿಸಲಾಗಿರುವ ಚಿತ್ರಸಂತೆ ನೋಡುಗರ ಕಣ್ಮನ ಸೆಳೆಯುತ್ತಿದೆ. ಕಲಾವಿದೆ ಪಲ್ಲವಿ ಜವಳೇಕರ್ (ಸ್ಟಾಲ್ ಸಂಖ್ಯೆ ೨೪) ಅವರು ಶ್ರೀರಂಗಪಟ್ಟಣ, ಸಂತ ಫಿಲೋಮಿನಾ ಚರ್ಚ್, ರೈಲ್ವೆ ನಿಲ್ದಾಣ ಹಾಗೂ ಜಗನ್ಮೋಹನ ಅರಮನೆ ಸೇರಿದಂತೆ ಮೈಸೂರಿನ ಐತಿಹಾಸಿಕ ಸ್ಥಳಗಳ ಸುಂದರ ಪೋಸ್ಟ್ಕಾರ್ಡ್ಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ, ಕಾಫಿ ಸ್ಟೇನ್ ಬಳಸಿ ತಯಾರಿಸಿದ ವಿಶೇಷ ಬುಕ್‌ಮಾರ್ಕ್ಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಲಾ ಸಂತೆಗೊAದು ಹೊಸ ಮೆರುಗು ತಂದಿವೆ.
ಈ ಬಾರಿಯ ಚಿತ್ರಸಂತೆಯಲ್ಲಿ ಕಸ್ಟಮೈಸ್ಡ್ ಬುಕ್‌ಮಾರ್ಕ್ಗಳು, ಪೋಸ್ಟ್ಕಾರ್ಡ್ಗಳು ಹಾಗೂ ಮಿನಿ ಕ್ಯಾನ್ವಾಸ್ ಇಲಸ್ಟೆçÃಷನ್‌ಗಳ ತಾಣಗಳು ಹಾಗೂ ವಿವಿಧ ರೀತಿಯ ವೈವಿದ್ಯಮಯ ಚಿತ್ರಣಗಳ ಮಾರಾಟ ಚಿತ್ರ ಸಂತೆಯಲ್ಲಿ ವಿಶೇಷವಾಗಿ ಜನಪ್ರಿಯತೆ ಗಳಿಸಿವೆ.
ಚಿತ್ರಸಂತೆಗೆ ನಗರಾಭಿವೃದ್ಧಿ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ಚಿತ್ರ ಬಿಡಿಸುವ ಮೂಲಕ ಚಿತ್ರಸಂತೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಸಾಂಪ್ರದಾಯಿಕ ಕ್ಯಾಲೆಂಡರ್ ಪ್ರಕಾರ ದಸರಾ ಹಬ್ಬಕ್ಕೆ ಇನ್ನು ದಿನಗಳಿದ್ದರೂ, ಮೈಸೂರಿನಲ್ಲಿ ಒಂದು ತಿಂಗಳ ಮುಂಚಿತವಾಗಿಯೇ ದಸರಾ ಸಂಭ್ರಮ ವಾತಾವರಣ ಪ್ರಾರಂಭವಾಗಿದೆ, ಪ್ರತಿಯೊಬ್ಬ ಕಲಾ ವಿದರಿಗೆ ಹಾಗೂ ಕಲಾ ಆಸಕ್ತರಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿಕೊಳ್ಳಲು ಅವಕಾಶ ಸಿಗಬೇಕು ಎಂದು ಹೇಳಿದರು.
ಮೈಸೂರು ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ಎಲ್ಲಾ ಪ್ರಕಾರದ ಕಲೆಗಳಿಗೆ ತವರು ಮನೆಯಾಗಿದೆ. ಇಂತಹ ವಿವಿಧ ಕಲಾ ಪ್ರಕಾರಗಳಲ್ಲಿ ಮುಖ್ಯವಾದ ಚಿತ್ರಕಲೆಗೆ ದಸರಾ ಸಮಯದಲ್ಲಿ ಸೂಕ್ತ ಪ್ರೋತ್ಸಾಹ ನೀಡಲು ಈ ಚಿತ್ರಸಂತೆ ಪ್ರಮುಖ ವೇದಿಕೆಯಾಗಿದೆ ಎಂದರು.
೨೦೨೩ರಲ್ಲೂ ಚಿತ್ರಸಂತೆಯನ್ನು ಯಶಸ್ವಿಯಾಗಿ ಸಂಘಟಿಸಲಾಗಿತ್ತು. ಕೇವಲ ವಾಣಿಜ್ಯ ವಸ್ತುಗಳ ಮಾರಾಟದ ಬದಲು ಸದಾಭಿರುಚಿಯ ಮಾರುಕಟ್ಟೆ ನಿರ್ಮಿಸಿ, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಆಶಯದೊಂದಿಗೆ ಈ ಬಾರಿಯೂ ವಿನೂತನವಾಗಿ ಯೋಜನೆ ರೂಪಿಸಲಾಗಿದೆ ಎಂದರು.
ವಿವಿಧ ರಾಜ್ಯಗಳಿಂದ ಮತ್ತು ಪ್ರದೇಶಗಳಿಂದ ನೂರಾರು ಕಲಾವಿದರು ಆಗಮಿಸಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೈಸೂರಿನ ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಲಾಕೃತಿಗಳನ್ನು ಖರೀದಿಸುವ ಮೂಲಕ ಕಲಾವಿದರಿಗೆ ಆರ್ಥಿಕ ಹಾಗೂ ನೈತಿಕ ಪ್ರೋತ್ಸಾಹ ನೀಡಬೇಕೆಂದು ಹೇಳಿದರು. ಶಾಸಕ ಕೆ.ಹರೀಶ್‌ಗೌಡ ಮಾತನಾಡಿ,
ಮೈಸೂರು ಕಲಾವಿದರ ನಗರವಾಗಿದ್ದು, ಈ ಬಾರಿಯ ಚಿತ್ರಸಂತೆಯಲ್ಲಿ ೨೦೨೩ನೇ ಸಾಲಿಗಿಂತಲೂ ಹೆಚ್ಚಿನ ಸಂಖ್ಯೆಯ ಸ್ಟಾಲ್‌ಗಳನ್ನು ತೆರೆಯಲಾಗಿದೆ ಹಾಗೂ ಹೆಚ್ಚಿನ ಸಂಖ್ಯೆಯ ಚಿತ್ರಕಲಾವಿದರು ಭಾಗವಹಿಸಿದ್ದಾರೆ. ಸ್ವತಃ ಸಚಿವ ಯತೀಂದ್ರ ಸಿದ್ದರಾಮಯ್ಯನವರು ಚಿತ್ರಸಂತೆಯನ್ನು ವೀಕ್ಷಿಸಿ, ಕಲಾಕೃತಿಗಳನ್ನು ಖರೀದಿ ಮಾಡುವ ಮೂಲಕ ಪ್ರೋತ್ಸಾಹಿಸಿದ್ದಾರೆ. ದಸರಾ ಕಾರ್ಯಕ್ರಮಗಳು ಮತ್ತು ಜಂಬೂಸವಾರಿ ಮೆರವಣಿಗೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಉಸ್ತುವಾರಿ ಸಚಿವರಿಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.
ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ. ಕೆ ಸವಿತಾ. ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು.
ಗಣ್ಯರು ಮಕ್ಕಳ ದಸರಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ತನ್ವೀರ್ ಸೇಠ್, ಟಿ.ಎಸ್. ಶ್ರೀವತ್ಸ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎನ್. ರಂಗಸ್ವಾಮಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಜಿಲ್ಲಾಧಿಕಾರಿ ಜಿ. ಲಕ್ಷಿಂಕಾAತರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್,ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಮತ್ತಿತರರು ಉಪಸ್ಥಿತರಿದ್ದರು
ಬಳಿಕ ವಿವಿಧ ಕಲಾವಿದರು ತಮ್ಮ ಕಲಾಕೃತಿಗಳನ್ನು ಅನಾವರಣಗೊಳಿಸಲು ತೆರೆಯಲಾಗಿದ್ದ
೮೮ ಮಳಿಗೆಯಲ್ಲಿ ಕಲಾಕುಂಜಗಳನ್ನು ಸಚಿವರು ಶಾಸಕರು ಹಾಗೂ ಗಣ್ಯರು ವೀಕ್ಷಿಸಿ ಪ್ರಶಂಸೆ ವ್ಯಕ್ತ ಪಡಿಸಿದರು.