
ಮೈಸೂರು: ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಆಯೋಜಿಸಿರುವ “ಕ್ರಿಯಾಯೋಗ ಯಶಸ್ವಿ ಹಾಗೂ ಆನಂದಮಯ ಜೀವನಕ್ಕೆ ಸಾಧನ” ಎಂಬ ಮೂರು ದಿನಗಳ ಕ್ರಿಯಾಯೋಗ ಕಾರ್ಯಾಗಾರಕ್ಕೆ ಮೈಸೂರಿನ ಗೋವಿಂದ ರಾವ್ ಮೆಮೋರಿಯಲ್ ಹಾಲ್ನಲ್ಲಿ ಚಾಲನೆ ನೀಡಲಾಯಿತು.
ಸೊಸೈಟಿಯ ಚೆನ್ನೆöÊ ಶಾಖೆಯ ಮುಖ್ಯಸ್ಥರಾದ ಸ್ವಾಮಿ ಶುದ್ಧಾನಂದ ಗಿರಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, “ಸತ್-ಚಿತ್-ಆನಂದವನ್ನು ಅನುಭವಿಸುವುದೇ ಬದುಕಿನ ನಿಜವಾದ ಉದ್ದೇಶ. ಅದನ್ನು ಪಡೆಯಲು ಕ್ರಿಯಾಯೋಗವೇ ಅತ್ಯುತ್ತಮ ಮಾರ್ಗ. ಸಾವಿರಾರು ವರ್ಷಗಳ ಹಿಂದೆ ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಕ್ರಿಯಾಯೋಗವೇ ಇದಾಗಿದೆ” ಎಂದು ತಿಳಿಸಿದರು.
ಹಿಮಾಲಯದ ಅಮರ ಸಂತ ಮಹಾವತಾರ ಬಾಬಾಜಿ ಅವರು ಪರಮಹಂಸ ಯೋಗಾನಂದರ ಮೂಲಕ ಆಧುನಿಕ ಮಾನವನಿಗೆ ಈ ಕ್ರಿಯಾಯೋಗವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಇಂದು ಜಗತ್ತು ಕಲಿಯುಗದಲ್ಲಿಲ್ಲ, ಬದಲಾಗಿ ಏರುತ್ತಿರುವ ದ್ವಾಪರ ಯುಗದಲ್ಲಿದೆ ಎಂದು ಹೇಳಿದರು. ಮಾನವನ ತ್ವರಿತ ಬೌದ್ಧಿಕ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಯೊಂದಿಗೆ, ಆಂತರಿಕ ಅಶಾಂತಿಯನ್ನು ಶಮನಗೊಳಿಸಲು ಮಾನವ ವೈಜ್ಞಾನಿಕ ಯೋಗ ವಿಧಾನಗಳನ್ನು ಹುಡುಕುತ್ತಾನೆ. ಇದಕ್ಕೆ ಕ್ರಿಯಾಯೋಗವೇ ಅತ್ಯುತ್ತಮ ಸಾಧನ ಎಂದು ತಿಳಿಸಿದರು.
“ನಮ್ಮ ಅಂತರAಗದ ಜೀವನ ಉತ್ಸಾಹಭರಿತವಾಗಿದ್ದರೆ ಮಾತ್ರ ನಮ್ಮ ಬಹಿರಂಗದ ಜೀವನ ವಿಜಯಶಾಲಿಯಾಗಲು ಸಾಧ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ದಕ್ಷಿಣೇಶ್ವರ ಶಾಖೆಯ ಮುಖ್ಯಸ್ಥರಾದ ಸ್ವಾಮಿ ಶ್ರೇಯಾನಂದ ಹಾಗೂ ಆಂಧ್ರಪ್ರದೇಶ ಶಾಖೆಯ ಬ್ರಹ್ಮಚಾರಿ ಶ್ರೀ ರಾಘವಾನಂದ ಉಪಸ್ಥಿತರಿದ್ದರು.