
ಮೈಸೂರು: ವಿಶ್ವ ಪ್ರಸಿದ್ಧ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿಶೇಷವಾಗಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆದ ಕಂಬಳ ಆಯೋಜನೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,
ಈ ಬಾರಿಯ ದಸರಾ ಉತ್ಸವಕ್ಕೆ ಹೊಸ ರೂಪ ಮತ್ತು ಸ್ಪರ್ಶ ನೀಡುವ ಉದ್ದೇಶದಿಂದ ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಮೈಸೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಕಂಬಳ ಕೂಟವನ್ನು ಅ/ ೧೮ ರಂದು ಆಯೋಜಿಸಲು ಉದ್ದೇಶಿಸಲಾಗಿದೆ. ಕಂಬಳ ಆಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಪುತ್ತೂರಿನ ಶಾಸಕ ಅಶೋಕ್ ರೈ ಅವರಿಗೆ ವಹಿಸಲಾಗಿದ್ದು, ಜಿಲ್ಲಾಡಳಿತವು ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕAಬಳದ ಸಂಘಟಕರು ಇದನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ, ಸಂಪ್ರದಾಯ ಹಾಗೂ ಕ್ರೀಡೆಯನ್ನು ಜೀವಂತವಾಗಿಡಲು ಆಯೋಜಿಸುತ್ತಿದ್ದಾರೆ. ಈ ದೇಶೀಯ ಕ್ರೀಡೆಯನ್ನು ಉಳಿಸಿ ಬೆಳೆಸಲು ಸರ್ಕಾರ ಮತ್ತು ಜಿಲ್ಲಾಡಳಿತ ಬೆಂಬಲ ನೀಡಲಿದೆ. ದಸರಾ ವೀಕ್ಷಣೆಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದರಿಂದ, ಕಂಬಳವನ್ನು ಇಲ್ಲಿ ಪ್ರದರ್ಶಿಸುವುದರಿಂದ ಈ ಜಾನಪದ ಕ್ರೀಡೆಗೆ ಅಂತರರಾಷ್ಟಿçÃಯ ಮಟ್ಟದಲ್ಲಿ ಖ್ಯಾತಿ ಮತ್ತು ಪ್ರಚಾರ ಸಿಗಲಿದೆ ಎಂದರು.
ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಂಬಳ ಸ್ಪರ್ಧೆಗಾಗಿ ೧೪೫ ಮೀಟರ್ ಉದ್ದzಟ್ರಾ÷್ಯಕ್ ಸಿದ್ಧಪಡಿಸಲಾಗುತ್ತಿದೆ. ಈ ಕೂಟದಲ್ಲಿ ಹಿಂದೆ ಉತ್ತಮ ದಾಖಲೆ ಬರೆದಿರುವ ಹಿರಿಯ ದರ್ಜೆಯ ಸುಮಾರು ೧೫೦ ರಿಂದ ೧೬೦ ಜೋಡಿ ಕೋಣಗಳು ಭಾಗವಹಿಸಲಿವೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೃಹತ್ ಪ್ರಚಾರ ಫಲಕಗಳನ್ನು ಹಾಕಲಾಗುವುದು ಎಂದರು.
ಕAಬಳವು ಯಾವುದೇ ವಾಣಿಜ್ಯ ಉದ್ದೇಶ ಹೊಂದಿಲ್ಲ, ಇದು ಕರಾವಳಿ ಜನರ ಗೌರವ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಒಂದು ಜೋಡಿ ಕೋಣವನ್ನು ಕರೆತರಲು ಯಜಮಾನರಿಗೆ ಸುಮಾರು ೨ ಲಕ್ಷ ರೂಪಾಯಿ ಖರ್ಚಾಗುತ್ತದೆ. ವಿಜೇತರಿಗೆ ೧೬ ಗ್ರಾಂ ಹಾಗೂ ೮ ಗ್ರಾಂ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಂಬಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೆ ಸಂಪೂರ್ಣ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ೮,೦೦೦ ಜನರು ಕುಳಿತು ವೀಕ್ಷಿಸಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. ವಿದೇಶಿ ಪ್ರವಾಸಿಗರಿಗಾಗಿ ವಿಶೇಷ ಕೌಂಟರ್ ಹಾಗೂ ಪಾಸ್ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ಕಂಬಳದ ಜೊತೆಗೆ ಕರಾವಳಿ ಭಾಗದ ಪ್ರಸಿದ್ಧ ಖಾದ್ಯಗಳಾದ ಕೋಳಿ ರೊಟ್ಟಿ, ಪುಂಡಿ, ನೀರ್ ದೋಸೆ ಮುಂತಾದ ಆಹಾರ ಪದಾರ್ಥಗಳ ಮಳಿಗೆಗಳು ಮತ್ತು ಸಾಂಸ್ಕöÈತಿಕ ಪ್ರದರ್ಶನ ಇರಲಿದೆ. ಅ. ೧೮ ರ ಸಾಯಂಕಾಲ ೬:೩೦ಕ್ಕೆ ಕಂಬಳ ಕ್ರೀಡಾಕೂಟಕ್ಕೆ ಅಧಿಕೃತ ಉದ್ಘಾಟನೆ ಸಿಗಲಿದ್ದು, ಅಕ್ಟೋಬರ್ ೧೯ ರ ಸಾಯಂಕಾಲದವರೆಗೆ ನಿರಂತರವಾಗಿ ನಡೆದು ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಸನಿಲ್, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಹಾಗೂ ಕಂಬಳ ಸಮಿತಿಯ ಇತರ ಪದಾಧಿಕಾರಿಗಳು, ಆಯೋಜಕರು ಮತ್ತು ಕೋಣಗಳ ಯಜಮಾನರು ವೇದಿಕೆಯಲ್ಲಿ ಉಪಸ್ಥಿತರಿದ್ದರು.