Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬರ ಪರಿಹಾರವನ್ನು 2,500 ಸಾವಿರದಿಂದ 25,000ಕ್ಕೆ ಹೆಚ್ಚಳ ಮಾಡುವಂತೆ ಮನವಿ

ಮೈಸೂರು; ನಗರ ಬಿಜೆಪಿ ರೈತಮೋರ್ಚ ವತಿಯಿಂದ ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ರವರನ್ನು ಭೇಟಿ ಮಾಡಿ ರೈತರಿಗೆ ಕೊಡುತ್ತಿರುವ ಬರ ಪರಿಹಾರವನ್ನು 2,500 ಸಾವಿರದಿಂದ 25,000ಕ್ಕೆ ಹೆಚ್ಚಳ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಸುರೇಶ್ ಬೆಲವತ್ತ, ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಸಾಗರ್
ಬಿಜೆಪಿ ರಾಜ್ಯ ರೈತ ಮೋರ್ಚ ಕಾರ್ಯಕಾರಣಿ ಸದಸ್ಯರಾದ ಸವಿತಾ ಪುಟ್ಟೇಗೌಡ ರೈತ ಮೋರ್ಚ ಕಾರ್ಯದರ್ಶಿಗಳಾದ ಭಾಗ್ಯ ಸಿ. ಹಾಗೂ ರಮೇಶ್ ಉಪಸ್ಥಿತರಿದ್ದರು