Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಬರ ಪರಿಹಾರವನ್ನು 2,500 ಸಾವಿರದಿಂದ 25,000ಕ್ಕೆ ಹೆಚ್ಚಳ ಮಾಡುವಂತೆ ಮನವಿ

ಮೈಸೂರು; ನಗರ ಬಿಜೆಪಿ ರೈತಮೋರ್ಚ ವತಿಯಿಂದ ಕೃಷಿ ಸಚಿವ ಚೆಲುವನಾರಾಯಣ ಸ್ವಾಮಿ ರವರನ್ನು ಭೇಟಿ ಮಾಡಿ ರೈತರಿಗೆ ಕೊಡುತ್ತಿರುವ ಬರ ಪರಿಹಾರವನ್ನು 2,500 ಸಾವಿರದಿಂದ 25,000ಕ್ಕೆ ಹೆಚ್ಚಳ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಸುರೇಶ್ ಬೆಲವತ್ತ, ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಸಾಗರ್ಬಿಜೆಪಿ ರಾಜ್ಯ ರೈತ ಮೋರ್ಚ ಕಾರ್ಯಕಾರಣಿ ಸದಸ್ಯರಾದ ಸವಿತಾ ಪುಟ್ಟೇಗೌಡ ರೈತ ಮೋರ್ಚ ಕಾರ್ಯದರ್ಶಿಗಳಾದ ಭಾಗ್ಯ ಸಿ. ಹಾಗೂ ರಮೇಶ್ ಉಪಸ್ಥಿತರಿದ್ದರು

Read More

ಮೈಸೂರು ತಾಲ್ಲೂಕು ಪದವೀಧರ ಶಿಕ್ಷಕರ ಸಂಘಕ್ಕೆ  ಪದಾಧಿಕಾರಿಗಳ ಆಯ್ಕೆ

ಮೈಸೂರು : ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ಜಿ.ಪಿ.ಟಿ.)ದ ಮೈಸೂರು ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ಮೆಲ್ಲಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಹೆಚ್.ಎಸ್. ಸುನಿಲ್ ಕುಮಾರ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಧಾನ ಜಾರ್ಯದರ್ಶಿಯಾಗಿ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂ. ಮಾದೇಶ್, ಖಜಾಂಚಿಯಾಗಿ ನಗರ್ತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ. ಅಶ್ವಿನಿ ಹಾಗೂ ತಾಲ್ಲೂಕಿನ ವಿವಿಧ ಶಾಲೆಗಳ ಶಿಕ್ಷಕರಾದ ಅಪ್ಸರ್ ಪಾಷ, ಎಚ್.ಎಸ್. ಮಧುರಾಣಿ, ನಾಗಶ್ರೀ, ಆಶಾ ತೇಜಸ್ವಿನಿ,…

Read More

ಅರಣ್ಯ ಸಂರಕ್ಷಣೆಯಲ್ಲಿ ಬುಡಕಟ್ಟು ಜನರ ಪಾತ್ರ ಬಹಳ ಮಹತ್ವವಾಗಿದೆ – ಡಿಸಿಎಫ್ ಸೀಮಾ 

ಎಚ್ . ಡಿ.ಕೋಟೆ : ಅರಣ್ಯ ಇಲಾಖೆ ಮತ್ತು ಬುಡಕಟ್ಟು ಜನಾಂಗದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡುವುದು  ಹಾಗೂ ಒಟ್ಟಾಗಿ ಸೇರಿಕೊಂಡು ಪರಿಸರ ಸಂರಕ್ಷಣೆ ಮಾಡುವುದೇ  ವನ್ಯಜೀವಿ ಸಪ್ತಾಹದ ಉದ್ದೇಶವಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ ಸೀಮಾ ಪಿ.ಎ, ಹೇಳಿದರು.  ತಾಲೂಕಿನ ಬಳ್ಳೆಯಲ್ಲಿ ವನ್ಯಜೀವಿ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಬುಡಕಟ್ಟು ಜಗತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಹಿಂದೆ ಬುಡಕಟ್ಟು ಹಾಗೂ ಅರಣ್ಯ ಇಲಾಖೆ ನಡುವೆ ದೊಡ್ಡ ಅಂತರವಿತ್ತು. ಕಳೆದ ಕೆಲ ವರ್ಷಗಳಿಂದ ವನ್ಯಜೀವಿ…

Read More

ಮತ್ತೊಂದು ದಿನಕ್ಕೆ ವಿಸ್ತರಣೆಗೊಂಡ ಮೈಸೂರು ಚಿತ್ರ ಸಂತೆ

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ದಸರಾ ಚಿತ್ರಸಂತೆ ಸಮಿತಿಯಿಂದ ಆಯೋಜಿಸಿದ್ದ ನಗರದ ಮಾನಸಗಂಗೋತ್ರಿಯಲ್ಲಿರುವ ಕ್ಲಾಕ್ ಟವರ್ ಮುಂಭಾಗದಿAದ ಕುವೆಂಪು ಪುತ್ಥಳಿ ಗೇಟ್ ಸಮೀಪದವರೆಗೆ ಆಯೋಜಿಸಲಾಗಿದ್ದ ಮೈಸೂರು ಚಿತ್ರ ಸಚಿತೆಯನ್ನು ಮತ್ತೊಂದು ದಿನಕ್ಕೆ ವಿಸ್ತರಿಸಲಾಗಿದೆ. ಎರಡು ದಿನಗಳ ಕಾಲ ಅಂದರೆ ಅ.೨ ಮತ್ತು ೩ ರಂದು ಆಯೋಜಿಸಲಾಗಿದ್ದ ಚಿತ್ರ ಸಂತೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಮತ್ತೊಂದು ದಿನಕ್ಕೆ ಅಂದರೆ ಅ.೪ರ ಭಾನುವಾರದ ತನಕ ವಿಸ್ತರಿಸಲಾಗಿದೆ. ಹಾಗಾಗಿ ರಜಾ ದಿನವಾದ ಭಾನುವಾರ ಚಿತ್ರ…

Read More

ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಿ: ಸಚಿವ ಚಲುವರಾಯಸ್ವಾಮಿ

ಮೈಸೂರು: ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಿ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.ಶನಿವಾರ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಸರ್ ಎಂ.ವಿ. ಸಭಾಂಗಣದಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ವತಿಯಿಂದ ಆಯೋಜಿಸಿದ್ದ ೪೧ನೇ ನ್ಯಾಷನಲ್ ಕನ್ವೆನ್ಷನ್ ಆಫ್ ಸಿವಿಲ್ ಇಂಜಿನಿಯರಿAಗ್’ ( ರಾಷ್ಟಿçÃಯ ಸಮಾವೇಶ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರ್ ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಹೀಗಾಗಿ ಸುಭದ್ರ ಭವಿಷ್ಯ ನಿರ್ಮಾಣದಲ್ಲಿ…

Read More

ಕಂಬಳ ನಡೆಯುವ ಸ್ಥಳದಲ್ಲಿ ಪ್ರತಿಭಟನಾ ಸಭೆ ಮಾಡ್ತೀವಿ; ಪರಿಸರಕ್ಕಾಗಿ ನಾವು ಸಂಘಟನೆ

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಮಾಡಿರುವುದನ್ನು ವಿರೋಧಿಸಿ ಅ ೬ರಂದು ಕಂಬಳ ನಡೆಯುವ ಸ್ಥಳದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ತಿಳಿಸಿದರು.ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ನಾಡ ಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಇದಕ್ಕೆ ಕೆಲ ಸಂಘಟನೆಗಳು, ಪರಿಸರವಾದಿಗಳು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಕಂಬಳ…

Read More

ಖೋ.ಖೋ.ಆಟ ವಿದ್ಯಾರ್ಥಿನಿಯರ ಸಾಧನೆ

ಚಾಮರಾಜನಗರ ; ದಸರಾ ಮೈಸೂರು ವಿಭಾಗ ಮಟ್ಟದ ಮಹಿಳೆಯರ ಖೋ- ಖೋ ಪಂದ್ಯಾವಳಿಯಲ್ಲಿ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಕುರುಬೂರಿನ ಮಹಿಳಾ ಖೋ- ಖೋ ತಂಡವು ಫೈನಲ್ ಅಲ್ಲಿ ಆಳ್ವಾಸ್ ಮೂಡಬಿದಿರೆ ಮಹಿಳಾ ತಂಡವನ್ನು 8-5 ಅಂಕ ಮತ್ತು ಇನ್ನಿಂಗ್ಸ್ ನಿಂದ ಪರಾಭವ ಗೊಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಇತ್ತೀಚಿಗೆ ನಡೆದ ವಿಶ್ವದ ಗಮನ ಸೆಳೆದ ಖೋ ಖೋ ಆಟದಲ್ಲಿ ಭಾಗವಹಿಸಿ ವಿಶ್ವ ಕಪ್ ಗಳಿಸಲು ಮುಖ್ಯ ಕ್ರೀಡಾಪಟು ಚೈತ್ರ. ಕುರುಬೂರು ಆಟಗಾರರು ದೈಹಿಕ ನಿರ್ದೇಶಕರಾದ…

Read More

ಮೊದಲ ಹಂತದಲ್ಲಿ ೫ ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ; ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಮೈಸೂರು: ನಿವೇಶನರಹಿತರು ಅರ್ಜಿಗಳನ್ನು ನೀಡುತ್ತಿದ್ದು, ಜಿಲ್ಲಾಧಿಕಾರಿಗಳು ಸರ್ಕಾರಿ ಜಮೀನುಗಳನ್ನು ಗುರುತಿಸಬೇಕು. ಅದಿಲ್ಲದಿದ್ದರೆ ಖಾಸಗಿ ಜಮೀನು ಅಥವಾ ಹೊಸ ಬಡಾವಣೆಗಳನ್ನು ನಿರ್ಮಾಣ ಮಾಡಿ ಎಂದು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಸೂರು ಕೊಡಬೇಕೆಂದು ೫ ಲಕ್ಷ ಬಡವರಿಗೆ ನಿವೇಶನ ನೀಡಲು ತೀರ್ಮಾನ ಮಾಡಲಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶನಿವಾರ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಸೇವೆ ಇಲಾಖೆಯ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಇಡೀ ಸರ್ಕಾರ ನಿಮ್ಮ…

Read More

ರಾಜ್ಯದ ಬರ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇನೆ, ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಪರಿಹಾರವನ್ನು ಕೊಡುವ ವಿಶ್ವಾಸ ಇದೆ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಮೈಸೂರು: ರಾಜ್ಯದ ಬರ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಪರಿಹಾರವನ್ನು ಕೊಡುವ ವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಶನಿವಾರ ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ೧೨೫ ವರ್ಷಗಳಲ್ಲೇ ಈ ರೀತಿಯ ಬರ ಪರಿಸ್ಥಿತಿ ರಾಜ್ಯದಲ್ಲಿ ಇರಲಿಲ್ಲ. ರಾಜ್ಯದ ಪರಿಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತಂದಿದ್ದೇವೆ. ಕೇಂದ್ರದಿAದ ಮೂರು ತಂಡಗಳು ಪ್ರವಾಸ ಮಾಡುತ್ತವೆ. ಹೆಚ್ಚಿನ ಪರಿಹಾರವನ್ನು ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ನೀಡಬಹುದೆಂದು ನಿರೀಕ್ಷಿಸುತ್ತಿದ್ದೇವೆ. ನಾವು ಅವಸರದ…

Read More