Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಿ: ಸಚಿವ ಚಲುವರಾಯಸ್ವಾಮಿ


ಮೈಸೂರು: ಸಮಾಜದ ಒಳಿತಿಗೆ ತಂತ್ರಜ್ಞಾನ ಬಳಕೆಯಾಗಲಿ; ನವೀನತೆಯ ಮೂಲಕ ಸುಸ್ಥಿರ ಕರ್ನಾಟಕ ನಿರ್ಮಿಸಿ ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಶನಿವಾರ ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಸರ್ ಎಂ.ವಿ. ಸಭಾಂಗಣದಲ್ಲಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ವತಿಯಿಂದ ಆಯೋಜಿಸಿದ್ದ ೪೧ನೇ ನ್ಯಾಷನಲ್ ಕನ್ವೆನ್ಷನ್ ಆಫ್ ಸಿವಿಲ್ ಇಂಜಿನಿಯರಿAಗ್' ( ರಾಷ್ಟಿçÃಯ ಸಮಾವೇಶ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರ್ ಎಂದರೆ ಕೇವಲ ಕಟ್ಟಡ ಕಟ್ಟುವ ವ್ಯಕ್ತಿಯಲ್ಲ, ದೇಶದ ಭವಿಷ್ಯ ಕಟ್ಟುವ ಶಿಲ್ಪಿ. ಹೀಗಾಗಿ ಸುಭದ್ರ ಭವಿಷ್ಯ ನಿರ್ಮಾಣದಲ್ಲಿ ಇಂಜಿನಿಯರ್‌ಗಳ ಸಮರ್ಪಣಾ ಮನೋಭಾವ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು. ಜ್ಞಾನವನ್ನು ಗಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮಾಜದ ಹಿತಕ್ಕಾಗಿ ಸದ್ಬಳಕೆ ಮಾಡಿಕೊಳ್ಳುವುದು ಅಷ್ಟೇ ಪ್ರಮುಖ. ನಾವು ನಿತ್ಯವೂ ಸಂಚರಿಸುವ ರಸ್ತೆ, ಸೇತುವೆ, ಮನೆ ಬಾಗಿಲಿಗೆ ಬರುವ ನೀರು, ವಿದ್ಯುತ್ ಹಾಗೂ ಅಂಗೈಯಲ್ಲಿರುವ ಮೊಬೈಲ್ ಪ್ರಪಂಚ ಇವೆಲ್ಲವೂ ನಿತ್ಯಜೀವನದ ಸಹಜ ಭಾಗವೆನಿಸಬಹುದು. ಆದರೆ, ಈ ಪ್ರತಿಯೊಂದು ಸೌಲಭ್ಯದ ಹಿಂದೆಯೂ ಸಾವಿರಾರು ಇಂಜಿನಿಯರ್‌ಗಳ ಜ್ಞಾನ, ಕಠಿಣ ಪರಿಶ್ರಮ, ಯೋಜನೆ ಹಾಗೂ ಹೊಣೆಗಾರಿಕೆ ಅಡಗಿದೆ ಎಂದರು. ಜಗತ್ತು ಪ್ರಸ್ತುತ ತೀವ್ರ ಗತಿಯಲ್ಲಿ ಬದಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ (ಎಐ), ರೊಬೊಟಿಕ್ಸ್, ಸೆಮಿಕಂಡಕ್ಟರ್, ಹಸಿರು ಇಂಧನ, ಎಲೆಕ್ಟಿçಕ್ ವಾಹನಗಳು ಹಾಗೂ ಬಾಹ್ಯಾಕಾಶ ತಂತ್ರಜ್ಞಾನಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತಿವೆ. ಈ ನೂತನ ತಾಂತ್ರಿಕ ಯುಗದಲ್ಲಿ ಕರ್ನಾಟಕದ ಪಾತ್ರ ಅಗ್ರಗಣ್ಯವಾಗಿದೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಗಳಲ್ಲಿ ಅಪಾರ ಪ್ರತಿಭೆ, ಹೊಸ ಆಲೋಚನೆ ಹಾಗೂ ಕನಸುಗಳಿವೆ. ಅವುಗಳಿಗೆ ಆಧುನಿಕ ತಂತ್ರಜ್ಞಾನದ ಬಲ ತುಂಬುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಅಭಿವೃದ್ಧಿ ಎಂದರೆ ಕೇವಲ ಬೃಹತ್ ಯೋಜನೆಗಳಷ್ಟೇ ಅಲ್ಲ; ರೈತನ ಜಮೀನಿಗೆ ಸಕಾಲದಲ್ಲಿ ನೀರು ಒದಗಿಸುವುದು, ವಿದ್ಯಾರ್ಥಿಗೆ ಗುಣಮಟ್ಟದ ಡಿಜಿಟಲ್ ಶಿಕ್ಷಣ ನೀಡುವುದು, ಗ್ರಾಮಕ್ಕೆ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸುವುದು ಹಾಗೂ ಯುವಜನತೆಗೆ ಕೌಶಲ ಆಧಾರಿತ ಉದ್ಯೋಗಾವಕಾಶ ಕಲ್ಪಿಸುವುದೇ ನೈಜ ಪ್ರಗತಿ. ಇಂತಹ ಪ್ರತಿಯೊಂದು ಜನಪರ ಅಭಿವೃದ್ಧಿಯ ಹೆಜ್ಜೆಯಲ್ಲೂ ಇಂಜಿನಿಯರ್‌ಗಳ ಕೊಡುಗೆ ಅನನ್ಯವಾಗಿದೆ ಎಂದರು. ನಮ್ಮ ತಂತ್ರಜ್ಞಾನವು ಕೇವಲ ಸ್ಮಾರ್ಟ್’ ಆಗಿರದೆ `ಸುಸ್ಥಿರ’ವಾಗಿರಬೇಕು. ಯುವಜನರು ಕೇವಲ ಉದ್ಯೋಗ ಅರಸದೆ ಉದ್ಯೋಗ ಸೃಷ್ಟಿಕರ್ತರಾಗಬೇಕು, ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತ ಪರಿಹಾರ ಕಂಡುಕೊಳ್ಳುವತ್ತ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಸದಾ ಆದರ್ಶಪ್ರಾಯ. ತಂತ್ರಜ್ಞಾನವೇ ಇಲ್ಲದ ಆ ಕಾಲದಲ್ಲೇ ಅವರು ನಿರ್ಮಿಸಿದ ಅದ್ಭುತ ಯೋಜನೆಗಳನ್ನು ಇಂದಿಗೂ ಯಾರೂ ಮೀರಿಸಲು ಸಾಧ್ಯವಾಗಿಲ್ಲ. ಪ್ರಸ್ತುತ ಲಭ್ಯವಿರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಷ್ಟು ಕ್ರಾಂತಿಕಾರಿ ಕಾರ್ಯಗಳು ಸಾಕಾರಗೊಳ್ಳಬೇಕಿದೆ. ಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ಮೂಲಕ ಜನಸೇವೆ ಮಾಡುತ್ತಾ ಬಲಿಷ್ಠ, ಆಧುನಿಕ ಹಾಗೂ ಸುಸ್ಥಿರ ಕರ್ನಾಟಕವನ್ನು ಒಟ್ಟಾಗಿ ಕಟ್ಟೋಣ ಎಂದು ತಿಳಿಸಿದರು.
ಈ ವೇಳೆ ದೇಶಕ್ಕೆ ಕೊಡುಗೆ ನೀಡಿದ ಹಿರಿಯ ಇಂಜಿನಿಯರ್‌ಗಳಿಗೆ ಸನ್ಮಾನಿಸಿ, ಅಭಿನಂದಿಸಿದರು. ಇಂಜಿನಿಯರ್ ಮನೀಶ್ ಪಾಂಡೆ ಅವರಿಗೆ “ಎಂಗ್ ಇಂಜಿನಿಯರ್” ಅವಾರ್ಡ್ ನೀಡಿ ಸನ್ಮಾನಿಸಿದರು.
ವೇದಿಕೆ ಕಾರ್ಯಕ್ರಮದ ಬಳಿಕ “ಸುಸ್ಥಿತ ಭಾರತ ನಿರ್ಮಾಣಕ್ಕೆ ಸಿವಿಲ್ ಇಂಜಿನಿಯರ್ ಗಳ ಕೊಡುಗೆ – ೨೦೪೭” ರ ವಿಷಯ ಕುರಿತು ಎಂಜಿನಿಯರ್ ಗಳೊಂದಿಗೆ ಸಚಿವರು ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ಸಿವಿಡಿಬಿ ಚೇರ್ಮೆನ್ ಪಿ. ಸೂರ್ಯಪ್ರಕಾಶ್, ಸಂಸ್ಥೆಯ ಪದಾಧಿಕಾರಿಗಳಾದ ಸೀತಾರಾಮ್, ನಾಗರಾಜ್, ಎಚ್. ಎಸ್. ಸುರೇಶ್ ಬಾಬು, ನಂಜಯ್ಯ, ನಿವೃತ್ತ ಮುಖ್ಯ ಇಂಜಿನಿಯರ್ ಮಹದೇವ್ , ಆಖಿಲ ಭಾರತ ಇಂಜಿನಿಯರ್ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಬಿ.ಸಿಂಗ್, ಸೇರಿದಂತೆ ಇತರರಿದ್ದರು.