Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕುಸ್ತಿಪಟುಗಳನ್ನು ಜೋಡಿ ಕಟ್ಟುವ ಮೂಲಕ ದಸರಾ ಕುಸ್ತಿಗೆ ಚಾಲನೆ
*ಅ.೧೧ ರಿಂದ ೧೭ ರವರೆಗೆ ದಸರಾ ಕುಸ್ತಿ ಪಂದ್ಯಾವಳಿ
ಮೈಸೂರು: ನಾಡ ಹಬ್ಬ ಮೈಸೂರು ದಸರಾದ ಜಂಬೂಸವಾರಿಯಷ್ಟೇ ದಸರಾ ಕುಸ್ತಿಯೂ ಪ್ರಸಿದ್ಧಿ ಪಡೆದಿದೆ. ಇದು ನಮ್ಮ ನೆಲದ ದೇಶೀಯ ಕ್ರೀಡೆ ಎಂದು ನಗರಾಭಿವೃದ್ಧಿ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು
ಭಾನುವಾರ ನಗರದ ಡಿ.ದೇವರಾಜ್ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ದಸರಾ ಮಾಹೋತ್ಸವದ ಪ್ರಮುಖ ಆಕರ್ಷಣೆಯಲ್ಲಿ ಒಂದಾದ ನಾಡಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಕುಸ್ತಿ ಪಂದ್ಯಾವಳಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದಸರಾ ಕುಸ್ತಿ ಪಂದ್ಯಾವಳಿಯು ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ನಮ್ಮ ಸರಕಾರ ಈ ಪಂದ್ಯಾವಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದರು.
ದಸರಾದಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಯನ್ನು ದೇಶ ವಿದೇಶಗಳಿಂದಲೂ ವೀಕ್ಷಣೆ ಮಾಡಲು ಬರುತ್ತಾರೆ, ಅಷ್ಟು ಹೆಸರುವಾಸಿ ಪಡೆದಿದೆ. ಈ ೭ ದಿನಗಳು ನಡೆಯುವ ಪಂದ್ಯಾವಳಿಗಳಿಗೆ ಭಾಗವಹಿಸುವ ರಾಜ್ಯದ ಎಲ್ಲಾ ಕುಸ್ತಿಪಟುಗಳಿಗೆ ಕುಸ್ತಿ ಸಮಿತಿ ವತಿಯಿಂದ ಉತ್ತಮ ವ್ಯವಸ್ಥೆ ಮಾಡಲಾಗಿದೆ, ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.ಅ.೧೧ ರಿಂದ ೧೭ ರವರೆಗೆ ಪಂದ್ಯ: ಈ ಬಾರಿ ದಸರಾ ಮಹೋತ್ಸವದ ಹಿನ್ನಲೆ ಅಕ್ಟೋಬರ್ ೧೧ ರಿಂದ ೧೭ ರವರೆಗೆ ಡಿ.ದೇವರಾಜ್ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಲಿವೆ. ಅಕ್ಟೋಬರ್ ೧೧ ರಂದು ಸಂಜೆ ೪ ಗಂಟೆಗೆ ಉದ್ಘಾಟನೆ ನಡೆಯಲಿದೆ.
ಈ ಬಾರಿ ನಾಡಕುಸ್ತಿ, ಪಾಯಿಂಟ್ ಕುಸ್ತಿ ಹಾಗೂ ಪಂಜಕುಸ್ತಿ ಪಂದ್ಯಾವಳಿ ಎಂಬ ಮೂರು ರೀತಿಯ ಕುಸ್ತಿ ಪಂದ್ಯಾವಳಿಗಳು ನಡೆಲಿವೆ.
ಕಾರ್ಯಕ್ರಮದಲ್ಲಿ ಶಾಸಕ ಟಿ.ಎಸ್ ಶ್ರೀವತ್ಸ, ಜಿಲ್ಲಾ ಪೋಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾ ಪೋಲೀಸ್ ಅಧೀಕ್ಷಕರು ಹಾಗೂ ಕುಸ್ತಿ ಉಪಸಮಿತಿಯ ಉಪ ವಿಶೇಷಾಧಕಾರಿ ಎಲ್.ನಾಗೇಶ್, ಕುಸ್ತಿ ಉಪಸಮಿತಿಯ ಕಾರ್ಯದರ್ಶಿ ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಧರ್ಮೇಂದ್ರ ಹಾಗೂ ಪೈಲ್ವಾನ್ ಗಳು ಹಾಜರಿದ್ದರು.