
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಎನ್‌ಇಬಿ ಸ್ಪೋರ್ಟ್್ಸ ವತಿಯಿಂದ ಭಾನುವಾರ ಮೈಸೂರಿನಲ್ಲಿ ವಿಶ್ವದ ಅತಿದೊಡ್ಡ ಎಲ್’ಎಟ್ಯಾಪ್’ ಸೈಕ್ಲಿಂಗ್ ರೇಸ್ ಸ್ಫರ್ಧೆಯನ್ನು ನಡೆಸಲಾಯಿತು. ನಗರದ ಡಾ.ರಾಜ್ ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಉದ್ಯಾನವನಗಳ ಮಧ್ಯ ರಸ್ತೆಯಲ್ಲಿ ಸ್ಪರ್ಧೆಗೆ ಚಾಲನೆಗೊಂಡು ಯಶಸ್ವಿಯಾಗಿ ನಡೆಯಿತು.
ಸೈಕ್ಲಿಂಗ್ ಸ್ಪರ್ಧೆಗೆ ಸಂಸದರಾದ ಯದುವೀರ್ ಕೃಷ್ಣರಾಜ ಚಾಮರಾಜ ಒಡೆಯರ್ ಹಾಗೂ ತೆಜಸ್ವಿ ಸೂರ್ಯ ಅವರು ಚಾಲನೆ ನೀಡಿದರು. ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಮೈಸೂರಿನಲ್ಲಿ ಸೈಕ್ಲಿಂಗ್ ಸ್ಪರ್ಧೆಯನ್ನು ಮೊದಲ ಬಾರಿಗೆ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಎಲ್ಲಾ ಸ್ಪರ್ಧಿಗಳು ಸೈಕ್ಲಿಂಗ್ ಸ್ಪರ್ಧೆಯನ್ನು ಆನಂದಿಸಿ ಹಾಗೂ ಸುರಕ್ಷಿತವಾಗಿ ಸೈಕಲ್ ಸವಾರಿ ಮಾಡಿ ಎಂದು ಶುಭ ಕೋರಿದರು. ಅಲ್ಲದೇ ಸ್ವತಃ ಅವರು ೫೦ ಕಿ.ಮೀ ಸೈಕ್ಲಿಂಗ್ ರೇಸ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವುದು ವಿಶೇಷವಾಗಿತ್ತು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸಾಂಸ್ಕöÈತಿಕ ಮತ್ತು ಐತಿಹಾಸಿಕ ನಗರಿ ಮೈಸೂರಿನಲ್ಲಿ ದಸರಾ ಸಂದರ್ಭದಲ್ಲಿ ಉತ್ತಮವಾಗಿ ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಿರುವುದು ಎಲ್ಲರಿಗೂ ಸ್ಪೂರ್ತಿ ನೀಡುತ್ತದೆ. ಮೈಸೂರಿನ ಪರಿಸರ ಇಂತಹ ಸ್ಪರ್ಧೆಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲಾಧಿಕಾರಿ ಲಕ್ಷಿ÷್ಮಕಾಂತ್ ರೆಡ್ಡಿ ಜಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್, ಡಿಸಿಪಿ ಕೆ.ಎಸ್.ಸುಂದರ್ ರಾಜ್ ಸೇರಿದಂತೆ ಇತರರು ಇದ್ದರು
ಟೂರ್ ದಿ ಫ್ರಾನ್ಸ್ ಸ್ಪರ್ಧೆಯಿಂದ ಪ್ರೇರೇಪಿತಗೊಂಡು, ಯುವ ಸಮುದಾಯದಗಳಿಗೆ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುವ ಜೊತೆಗೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವ ಆಶಯದೊಂದಿಗೆ ಮೈಸೂರಿನಲ್ಲಿ ವಿಶ್ವ ದರ್ಜೆಯ ಇಂಡಿಯನ್ ಪ್ರೀಮಿಯರ್ ಇವೆಂಟ್ ಎಲ್-ಎತಾಪ್ ‘ ಸೈಕ್ಲಥಾನ್ ಸ್ಪರ್ಧೆ ಆಯೋಜಿಸಲಾಗಿದೆ.
೧೦೦ ಕಿ.ಮೀ ದಾ ರೇಸ್,೫೦ ಕಿ.ಮೀ ದಾ ರೈಡ್, ೨೦ ಕಿ.ಮೀ – ಫ್ಯಾಮಿಲಿ ರೈಡ್ ,೧ ಕಿ.ಮೀ – ಮಕ್ಕಳ ಫನ್ ರೇಸ್ ನಂಥಹ ೪ ವಿಭಾಗಗಳಲ್ಲಿ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು.
ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಮೆರಿಕ, ಆಸ್ಟೆçÃಲಿಯಾ, ಮೆಕ್ಸಿಕೊ, ಶ್ರೀಲಂಕಾ ಮತ್ತು ಫ್ರಾನ್ಸ್ ಸೇರಿದಂತೆ ಐದು ದೇಶಗಳ ಹಾಗೂ ಭಾರತದ ವಿವಿಧ ೧೨ ರಾಜ್ಯಗಳ ಸುಮಾರು ೧,೫೦೦ಕ್ಕೂ ಹೆಚ್ಚು ಸೈಕ್ಲಿಸ್ಟ್ ಕ್ರೀಡಾಪಟುಗಳು ಪಾಲ್ಗೊಂಡಿದ್ದರು ಎಂದು ಆಯೋಜಕರು ಮಾಹಿತಿ ನೀಡಿದರು.