
ಮೈಸೂರು: ಬಸವಾದಿ ಶರಣರ ಕಾಯಕ ತತ್ವ ಹಾಗೂ ಶಿಕ್ಷಣದಿಂದ ಮಾತ್ರ ಅಸಂಘಟಿತ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ ತಿಮ್ಮಯ್ಯ ಹೇಳಿದರು.
ಭಾನುವಾರ ನಗರದ ಕಲಾಮಂದಿರದ ಆವರಣದಲ್ಲಿರುವ ಕಿರುರಂಗಮAದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ನುಲಿಯ ಚಂದಯ್ಯ ಜಯಂತೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
೧೨ ನೆಯ ಶತಮಾನದಲ್ಲಿ ಬಸವಾದಿ ಶರಣರು ಕಾಯಕವೇ ಕೈಲಾಸ ಎಂಬ ತತ್ತ÷್ವವನ್ನು ಜಗತ್ತಿಗೆ ಸಾರಿದರು. ಅಂದು ತಾವು ಕಷ್ಟಪಟ್ಟು ದುಡಿದು, ಆ ಶ್ರಮದ ಫಲದಿಂದ ಸಮಾಜದ ಇತರರ ಒಳಿತಿಗಾಗಿ ನಿಸ್ವಾರ್ಥವಾಗಿ ಸೇವೆಯಲ್ಲಿದ್ದವರನ್ನು ನಾವು ಕಾಯಕ ಯೋಗಿಗಳು ಎಂದು ಕರೆಯುತ್ತೇವೆ. ನುಲೀಯ ಚಂದಯ್ಯನವರು ಕಾಯಕಕ್ಕೆ ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡಿದ್ದರು. ಆತ್ಮಪರವಾದ ಭಕ್ತಿಗಿಂತ ಸಮಾಜಮುಖಿಯಾದ ಕಾಯಕವೇ ಮಿಗಿಲಾದದ್ದು ಎಂಬುದನ್ನು ತಮ್ಮ ಜೀವನದ ಮೂಲಕವೇ ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಶರಣರ ಕಾಯಕ ತತ್ತ÷್ವವು ಕೇವಲ ಹೊಟ್ಟೆಪಾಡಿಗಾಗಿ ದುಡಿಯುವುದಲ್ಲ, ಬದಲಾಗಿ ಸ್ವಾವಲಂಬನೆ ಮತ್ತು ಸಾಮಾಜಿಕ ಸಮಾನತೆಯ ಸಂಕೇತ. ಪ್ರತಿಯೊಬ್ಬರೂ ತಮ್ಮ ಶ್ರಮದ ಒಂದು ಪಾಲನ್ನು ಸಮಾಜದ ಹಿತಕ್ಕಾಗಿ ನೀಡುವ ದಾಸೋಹ ಸಂಸ್ಕöÈತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ಅಸಂಘಟಿತವಾಗಿರುವ ನಮ್ಮ ಸಮಾಜದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಜೀವಿಸಬೇಕಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಸಂಘಟನೆ ಅತ್ಯಂತ ಅಗತ್ಯ. ಎಲ್ಲರೂ ವಿದ್ಯಾವಂತರಾಗಬೇಕು, ಸುಸಂಘಟಿತರಾಗಬೇಕು ಎಂದು ಹೇಳಿದರು. ನುಲಿಯ ಚಂದಯ್ಯನವರ ಕಾಲದ ಕರಕುಶಲತೆ ಮತ್ತು ಶ್ರಮದ ಗೌರವ ಇಂದಿನ ಯುವಜನತೆಗೆ ಪ್ರೇರಣೆಯಾಗಬೇಕು. ತಂತ್ರಜ್ಞಾನ ಎಷ್ಟೇ ಬೆಳೆದರೂ ಶ್ರಮದ ಮೌಲ್ಯ ಕಡಿಮೆಯಾಗಬಾರದು. ಮಹಿಳೆಯರು ಮತ್ತು ಯುವಕರು ಸ್ವಾವಲಂಬಿ ಉದ್ಯೋಗ ಹಾಗೂ ಶಿಕ್ಷಣದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು.
ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯ ನಿವೃತ್ತ ಪ್ರಾಧ್ಯಾಪಕ ಕೆ. ಹೆಚ್ ಸತ್ಯನಾರಾಯಣ ಮಾತನಾಡಿ, ನುಲಿಯ ಚಂದಯ್ಯನವರು ಕೇವಲ ಮಾತುಗಳಲ್ಲಿ ಕಾಯಕವನ್ನು ಪ್ರತಿಪಾದಿಸಲಿಲ್ಲ ತಮ್ಮ ಪ್ರತ್ಯಕ್ಷ ಜೀವನದಲ್ಲೇ ಕಾಯಕದ ಪವಿತ್ರತೆಯನ್ನು ಮೆರೆದವರು. ಗುರು, ಲಿಂಗ, ಜಂಗಮ ಯಾರೇ ಆದರೂ ಕಾಯಕ ಮಾಡಿಯೇ ಜೀವಿಸಬೇಕು ಎಂಬ ಸಾರ್ವಕಾಲಿಕ ಸತ್ಯವನ್ನು ಜಗತ್ತಿಗೆ ಸಾರಿದರು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಶ್ರಮದ ಗೌರವ ಕಡಿಮೆಯಾಗುತ್ತಿದೆ. ಶ್ರಮವಿಲ್ಲದೆ ಶ್ರೇಯಸ್ಸು ಬೇಕು ಎಂಬ ಮನೋಭಾವ ಬೆಳೆಯುತ್ತಿದೆ. ಆದರೆ ೧೨ನೇ ಶತಮಾನದಲ್ಲೇ ಚಂದಯ್ಯನವರು ಸತ್ಯ ಶುದ್ಧ ಕಾಯಕದ ಮೂಲಕ ಬದುಕು ನಡೆಸಿ ದಾಸೋಹ ತತ್ವಕ್ಕೆ ಹೊಸ ಭಾಷ್ಯ ಬರೆದರು ಎಂದು ತಿಳಿಸಿದರು.
ಪರರ ಹಂಗಿನಲ್ಲಿ ಬದುಕದೆ ಸ್ವಂತ ದುಡಿಮೆಯಿಂದ ಬಂದ ಆದಾಯದಲ್ಲೇ ತೃಪ್ತಿಪಟ್ಟು ದಾಸೋಹ ನಡೆಸುವುದು ನಿಜವಾದ ಧರ್ಮ ಎಂದು ತೋರಿಸಿಕೊಟ್ಟರು. ನಾವು ನುಲಿಯ ಚಂದಯ್ಯನವರ ಜಯಂತಿಯನ್ನು ಕೇವಲ ಒಂದು ದಿನದ ಆಚರಣೆಯಾಗಿ ಮಾಡದೇ ಅವರ ಕಾಯಕ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಹೇಳಿದರು.
ಇದೇ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಅಂಜನ್ ಕುಮಾರ್ ಹಾಗೂ ಶ್ರೀರಂಗಪಟ್ಟಣ ಸರ್ಕಲ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಎಸ್ ಎಸ್ ಎಲ್ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನುಲಿಯ ಚಂದಯ್ಯ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಟಿ.ಶೇಷಾದ್ರಿ, ಕಾರ್ಯದರ್ಶಿ ನಟರಾಜ್, ಅಖಿಲ ಕರ್ನಾಟಕ ಕೋರವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಉಪಾಧ್ಯಕ್ಷ ವೆಂಕಟಾಚಲ, ಮೈಸೂರು ಜಿಲ್ಲಾ ಕೊರಮ-ಕೊರಚ ಮಹಾಸಂಘದ ಅಧ್ಯಕ್ಷ ಡಿ.ಎನ್.ಮುತ್ತುರಾಜ್, ಕಾರ್ಯಾಧ್ಯಕ್ಷ ನಾಗರಾಜ್ ಹೆಚ್.ಡಿ.ಕೋಟೆ, ಮುಖಂಡ ತೊಂಡಾಳ್ ನಾಗರಾಜ್ ಮತ್ತಿತತರು ಉಪಸ್ಥಿತರಿದ್ದರು.