
ಎಚ್.ಡಿ.ಕೋಟೆ : ನನ್ನ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ತಂದಿರುವ 2 ಸಾವಿರ ಕೋಟಿ ಅನುದಾನದಲ್ಲಿ 50 ಕೋಟಿ ರೂಪಾಯಿ ಕಡಿಮೆ ಆಗಿದ್ದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ಓಪನ್ ಚಾಲೆಂಜ್.. ಇದನ್ನು ವಿಪಕ್ಷಗಳ ನಾಯಕರು ಸ್ವೀಕರಿಸಲು ರೆಡಿ ಇದ್ದಾರಾ ಎಂದು ಶಾಸಕ ಅನಿಲ್ ಚಿಕ್ಕಮಾದು ನೇರ ಸವಾಲು ಹಾಕಿದ್ದಾರೆ.
ತಾಲೂಕಿನ ನಾಗನಹಳ್ಳಿ ಗ್ರಾಂಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 11.70 ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ನಾನು ಕ್ಷೇತ್ರದಲ್ಲಿಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಪ್ರತಿ ಗ್ರಾಮಕ್ಕೂ 5 ಲಕ್ಷದಿಂದ 50 ಕೋಟಿ ವರೆಗೂ ಕೆಲಸ ಮಾಡಿದ್ದೇನೆ. ನನಗೆ ಕೊಡುವ ಅನುದಾನದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ , ಸಿಸಿ ರಸ್ತೆ, ಬಸವ ಭವನ, ಅಂಬೇಡ್ಕರ್ ಭವನಕ್ಕೆ ಹಣಕಾಸು ನೆರವು ನೀಡಿದ್ದೇನೆ. ಅಂದಾಜು ೫೦೦ ರಿಂದ ೬೦೦ ದೇವಸ್ಥಾನಗಳಿಗೆ ಅನುದಾನ ಕೊಟ್ಟಿದ್ದೀನಿ.
ನಾಟಕ, ಆರ್ಕೆಸ್ಟ್ರಾ ಅನ್ನದಾನ, ಜಾತ್ರೆ, ವಿವಿಧ ಸಮಾರಂಭಗಳಿಗೆ ಹಣ ಕೊಟ್ಟಿದ್ದೀನಿ.ಇವತ್ತು ಯಾವ ಗ್ರಾಮದವರೂ ಕೂಡ ನೀನು ಕೆಲಸ ಮಾಡಿಲ್ಲ, ನಮ್ಮೂರಿಗೆ ಬರಬೇಡಿ ಅಂತ ಹೇಳಲು ಸಾಧ್ಯವೇ ಇಲ್ಲ. ಕಳೆದ ೪೦ ವರ್ಷಗಳಿಂದ ಆಗದೆ ಇರುವ ಕೆಲಸಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ಹೀಗಾಗಿಯೇ ನಮ್ಮ ಕುಟುಂಬಕ್ಕೆ ಮೂರು ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಟೀಕೆ ಟಿಪ್ಪಣಿಗಳಿಗೆ ಹೆದರಲ್ಲ
ನಾನು ಮಾಜಿ ಸಂಸದ ದೃವನಾರಾಯಣ್ ಶಿಷ್ಯ. ಸಾಮಾಜಿಕ ಜಾಲತಾಣದಲ್ಲಿ ಬರುವ ಟೀಕೆ ಟಿಪ್ಪಣಿಗಳಿಗೆ ನಾನು ಹೆದರಲ್ಲ, ಅಪಪ್ರಚಾರಕ್ಕೆ ಕಿವಿಗೊಡುವುದಿಲ್ಲ. ಯಾರೇ ಏನೇ, ಅಪಪ್ರಚಾರ ಮಾಡಿದರೂ ಕ್ಷೇತ್ರದಲ್ಲಿ ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶ್ರೀನಿವಾಸ್, ಕಾರ್ಯನಿರ್ವಾಣಾಧಿಕಾರಿ ರವಿಚಂದ್ರ, ತಾಲೂಕು ಆರೋಗ್ಯಧಿಕಾರಿ ರವಿಕುಮಾರ್, ಎಇಇ ರಮೇಶ್, ಇಂಜಿನಿಯರ್ ಸುಪ್ರಿತ್, ಸಹಾಯಕ ಅಭಿಯಂತರ ಗೋವಿಂದನಾಯಕ, ಮುಖಂಡರಾದ ನಾಗನಹಳ್ಳಿ ಪ್ರದೀಪ್, ಮೊತ್ತ ಶಿವಮಲ್ಲಪ್ಪ, ಪರಶಿವಮೂರ್ತಿ, ಸುರೇಶ್, ಜೀವಿಕ ಬಸವರಾಜು, ವನಸಿರಿ ಶಂಕರ್, ಸ್ವಾಮಿ, ಪ್ರದೀಪ್, ಮರಿಯಯ್ಯ, ಟಿ.ಎಲ್.ಸ್ವಾಮಿ, ಕರಿಯಪ್ಪ, ಮಹದೇವಪ್ಪ, ಸುರೇಶ್ ನಾಯಕ, ಕರಿಯ, ಶಿವಮಲ್ಲಯ್ಯ, ಪುಟ್ಟೇ ಗೌಡ, ಪಿಡಿಓ ನಾಗರಾಜು, ರಾಜಸ್ವ ನಿರೀಕ್ಷಕ ವಿಶ್ವನಾಥ್, ಗ್ರಾಮ ಆಡಳಿತಾಧಿಕಾರಿ ಗಿರೀಶ್, ಸೋಮಣ್ಣ, ಗಾನವಿ, ಸಾನ್ವಿ, ರಚಿತ, ಭೂಮಿಕಾ, ಸಿದ್ದರಾಮೇಗೌಡ, ಮಣಿಕಂಠ ಸೇರಿದಂತೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.