Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅ.೧೩ರಿಂದ ೧೬ವರೆಗೆ ಮಹಿಳಾ ಮತ್ತು ಮಕ್ಕಳ ದಸರಾ

ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಅ.೧೩ರಿಂದ ೧೬ವರೆಗೆ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಅ.೧೩ರಂದು ಬೆಳಗ್ಗೆ ೬.೩೦ಕ್ಕೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಚಿತ್ತಾರ ಸ್ಪರ್ಧೆಯನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಬೆಳಗ್ಗೆ ೧೧ಕ್ಕೆ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾ ಭವ್ಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ….

Read More

ಭವಿಷ್ಯದ ದೃಷ್ಠಿಯಿಂದ ನರೇಂದ್ರಮೋದಿಯವರ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ; ಅರ್ಜುನ್‌ಪಾರ್ಥ

ಕೆ.ಆರ್.ನಗರ; ದೇಶದ ಅಭಿವೃದ್ದಿ ಮತ್ತು ಮುಂದಿನ ತಲೆಮಾರಿನ ಭವಿಷ್ಯದ ದೃಷ್ಠಿಯಿಂದ ನರೇಂದ್ರಮೋದಿಯವರ ನಾಯಕತ್ವವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಅರ್ಜುನ್‌ಪಾರ್ಥ ಹೇಳಿದರು.ಪಟ್ಟಣದ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಸಮಾವೇಶ, ಸೇವಾ ಜ್ಯೋತಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ೨೦೨೯ರಲ್ಲೂ ಮೋದಿಯವರೆ ಪ್ರಧಾನಿಯಾಗುವಂತೆ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು, ಅಭಿಮಾನಿಗಳು, ಹಿತೈಷಿಗಳು ಸಂಘಟನೆಗೆ ಒತ್ತುನೀಡುವಂತೆ ತಿಳಿಸಿದರು.ಮೋದಿಯವರು ಪ್ರಧಾನಿಯಾದ ನಂತರ ಅವರ ವಿರುದ್ದ ಹಲವಾರು ರೀತಿಯ ರಾಜಕೀಯ ವಿರೋಧ ಹಾಗೂ ಪ್ರತಿಭಟನೆಗಳು…

Read More

ಅನುದಾನದಲ್ಲಿ ವ್ಯತ್ಯಾಸವಿದ್ದರೆ 2028 ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಲ್ಲ; ವಿಪಕ್ಷಗಳಿಗೆ ಶಾಸಕ ಅನಿಲ್ ಚಿಕ್ಕಮಾದು ನೇರ ಸವಾಲು

ಎಚ್.ಡಿ.ಕೋಟೆ : ನನ್ನ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ  ಸರ್ಕಾರದಿಂದ ತಂದಿರುವ 2 ಸಾವಿರ ಕೋಟಿ ಅನುದಾನದಲ್ಲಿ 50    ಕೋಟಿ ರೂಪಾಯಿ ಕಡಿಮೆ ಆಗಿದ್ದರೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಇದು ನನ್ನ ಓಪನ್ ಚಾಲೆಂಜ್.. ಇದನ್ನು ವಿಪಕ್ಷಗಳ ನಾಯಕರು ಸ್ವೀಕರಿಸಲು ರೆಡಿ ಇದ್ದಾರಾ ಎಂದು   ಶಾಸಕ ಅನಿಲ್ ಚಿಕ್ಕಮಾದು  ನೇರ ಸವಾಲು ಹಾಕಿದ್ದಾರೆ.  ತಾಲೂಕಿನ  ನಾಗನಹಳ್ಳಿ ಗ್ರಾಂಪಂ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 11.70 ಕೋಟಿ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ…

Read More

ಗಜಪಡೆಯ ಮಾವುತ , ಕಾವಾಡಿ ಕುಟುಂಬದ ಮಹಿಳೆಯರಿಗೆ ಬಾಗಿನ ವಿತರಣೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಮಾವುತ ಹಾಗೂ ಕಾವಾಡಿ ಕುಟುಂಬದ ಮಹಿಳೆಯರಿಗೆ ಅರಮನೆ ಆವರಣದಲ್ಲಿ ಶ್ರೀ ದುರ್ಗಾ ಫೌಂಡೇಶನ್ ಹಾಗೂ ಮೇಕ್ ಸೊಸೈಟಿ ಸ್ಮೆöÊಲ್ ಫೌಂಡೇಶನ್ ವತಿಯಿಂದ ಬಾಗಿನ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕುಂಕುಮ, ಅರಿಶಿನ, ಬಳೆ, ಹೂವು ಸೇರಿದಂತೆ ಸಾಂಪ್ರದಾಯಿಕ ಬಾಗಿನವನ್ನು ವಿತರಿಸಿ ಗೌರವಿಸಲಾಯಿತು. ದಸರಾ ಮಹೋತ್ಸವದಲ್ಲಿ ಗಜಪಡೆಯೊಂದಿಗೆ ಆಗಮಿಸಿರುವ ಮಾವುತ ಹಾಗೂ ಕಾವಾಡಿ ಕುಟುಂಬಗಳ ಸೇವೆಯನ್ನು ಸ್ಮರಿಸಿ, ಅವರ ಕುಟುಂಬದ ಮಹಿಳೆಯರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು…

Read More

ಏಷ್ಯನ್ ಗೇಮ್ಸ್ ನಲ್ಲಿ ಮೈಸೂರಿನ ರಿಷಿತಾಗೆ ಕಂಚು ಪದಕ

ಮೈಸೂರು; ಮೈಸೂರಿನ ರಿಷಿತಾ ಅವರು ಮಲೇಷ್ಯಾದಲ್ಲಿ ನಡೆಯುತ್ತಿತುವ ಪ್ಯಾನ್ ಡೆಫ್ ಏಷ್ಯನ್ ಗೇಮ್ಸ್ನಲ್ಲಿ ೪*೧೦೦ ಮೀಟರ್ ರಿಲೇಯಲ್ಲಿ ಟೀಮ್ ಇಂಡಿಯಾ ಪರ ಕಂಚಿನ ಪದಕ ಗೆದ್ದು ಸಾಂಸ್ಕöÈತಿಕ ನಗರಿ ಮೈಸೂರಿಗೆ ಕೀರ್ತಿ ತಂದಿದ್ದಾರೆ. ಕಂಚಿನ ಪದಕ ವಿಜೇತೆ ರಿಷಿತಾ ಮೈಸೂರಿನ ಜೆ.ಪಿ. ನಗರ ನಿವಾಸಿಯಾಗಿದ್ದು,“ವರ್ಷಗಳ ಕಾಲದ ಕಠಿಣ ಪರಿಶ್ರಮ, ತ್ಯಾಗ, ಕಣ್ಣೀರು ಮತ್ತು ಅಚಲವಾದ ದೃಢ ನಿಶ್ಚಯದಿಂದ ಅಂತಿಮವಾಗಿ ನಮಗೆ ಈ ಹೆಮ್ಮೆಯ ಕ್ಷಣ ತಂದುಕೊಟ್ಟಿದೆ,” ಎಂದು ರಿಷಿತಾ ತರಬೇತುದಾರ ರಾದೇಶ್ ಅಭಿಮಾನದ ಮೆಚ್ಚುಗೆ ಸೂಚಿಸಿದ್ದಾರೆ.ಇವರ ಪರಿಶ್ರಮ,…

Read More

ನಾಲಾ ಏರಿ ಮಣ್ಣನ್ನು ಬಳಸಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ

ನಂಜನಗೂಡು; ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೈತರ ಜಮೀನಿಗೆ ಹರಿಯುವ ನಾಲಾ ನೀರನ್ನು ಅಕ್ರಮವಾಗಿ ಬಳಸುವ ಜೊತೆಗೆ ರಾಜಧನ ಪಾವತಿಸದೆ ಅನಧಿಕೃತವಾಗಿ ಸಾವಿರಾರು ಟನ್ ನಾಲಾ ಏರಿ ಮಣ್ಣನ್ನು ಬಳಸಿಕೊಂಡಿರುವ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ನೇತೃತ್ವದಲ್ಲಿ ನಂಜನಗೂಡು ನಗರದ ನೀರಾವರಿ ಇಲಾಖೆ ಕಚೇರಿ ಮುಂಭಾಗ ಜಮಾವಣೆಗೊಂಡ ರೈತರು ಗುತ್ತಿಗೆದಾರ ಹಾಗೂ…

Read More

ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ವಿರುದ್ಧ ಶಿಸ್ತು ಕ್ರಮ : ಮಾಜಿ ಶಾಸಕ ಕೆ. ಮಹದೇವ್

ಪಿರಿಯಾಪಟ್ಟಣ : ಪಕ್ಷದ ನಿಯಮವನ್ನು ಮೀರಿ ಪಕ್ಷದ ಚಿಹ್ನೆ ಬಳಸಿ ಪ್ರತಿಭಟನೆ ಯಾತ್ರೆ ಮಾಡಿರುವ ಪಿಎಂ ಪ್ರಸನ್ನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಶಾಸಕ ಕೆ. ಮಹದೇವ್ ಹೇಳಿದರು.  ಪಟ್ಟಣದ ಕಾರ್ಯನಿರ್ವತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷವು ಉತ್ತಮ ಸಂಘಟನೆಯ ಮೂಲಕ ತನ್ನದೇ ಆದ ಆಡಳಿತವನ್ನು ಸಿದ್ಧಾಂತವನ್ನು ಹೊಂದಿದೆ. ಆದರೆ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನರವರು ಪಕ್ಷದ ಸಿದ್ಧಾಂತವನ್ನು ಗಾಳಿಗೆ ತೂರಿ ಪ್ರತಿಭಟನೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು….

Read More

ಯಾವುದೇ ಕಾರ್ಮಿಕರಿಗೆ ತೊಂದರೆಯಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ : ಸಿ. ಶಂಕರ್ ಅಂಕನ ಶೆಟ್ಟಿಪುರ

ಪಿರಿಯಾಪಟ್ಟಣ : ಸಫಾಯಿ ಕರ್ಮಚಾರಿ ಆಯೋಗವು ಕಟ್ಟುನಿಟ್ಟಿನ ಕಾನೂನನ್ನು ಒಳಗೊಂಡಿದೆ ಎಂದು ಸಫಾಯಿ ಕರ್ಮಚಾರಿ  ಆಯೋಗದ ರಾಜ್ಯ ಸಮಿತಿ ಸದಸ್ಯ ಸಿ. ಶಂಕರ್ ಅಂಕನ ಶೆಟ್ಟಿಪುರ ತಿಳಿಸಿದರು.  ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಯೋಗವು ಯಾವುದೇ ಕಾರ್ಮಿಕರಿಗೂ ತೊಂದರೆ ಯಾದಲ್ಲಿ ಅಧಿಕಾರಿಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಮಿಕರು ಕೂಡ ತಮಗೆ ದೊರಕುವ ಸವಲತ್ತುಗಳ ಬಗ್ಗೆ ಪ್ರತಿನಿತ್ಯ ಅರಿವನ್ನು  ಹೊಂದಬೇಕು. ಸರ್ಕಾರವು ಕಾರ್ಮಿಕರ ಪರವಾಗಿದ್ದು ಅವರ ಹಿತವನ್ನು…

Read More

ಅ. ೨೬ ರಂದು ಅರ್ಥಪೂರ್ಣವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ; ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ

ಮೈಸೂರು: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಅ. ೨೬ ರಂದು ನಗರದ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ತಿಳಿಸಿದರು.ಗುರುವಾರ ನಗರದ ಅಪರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿವಿಧ ಜಯಂತಿಗಳನ್ನು ಅರ್ಥಪೂರ್ಣವಾಗಿ ಹಾಗೂ ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಅವರ ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳ ಆಚರಣೆ ಮಾಡಲಾಗುತ್ತಿದೆ…

Read More

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಯುವಜನರಿಗಾಗಿ ಉಚಿತ ೩ ತಿಂಗಳ ಕೌಶಲ್ಯ ತರಬೇತಿ ಕಾರ್ಯಕ್ರಮ

ಮೈಸೂರು; ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಬಜಾಜ್ ಆಟೋ ಫೌಂಡೇಶನ್‌ನಿAದ ನಿರುದ್ಯೋಗಿ ಯುವಜನರಿಗಾಗಿ ಉಚಿತ ೩-ತಿಂಗಳ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಬಿ. ಇಳಂಗೋವನ್ ತಿಳಿಸಿದರು.ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ , ಪುಣೆಯ ಬಜಾಜ್ ಆಟೋ ಫೌಂಡೇಶನ್ ಸಹಯೋಗದೊಂದಿಗೆ ಮೈಸೂರಿನ ಜೆಎಸ್‌ಎಸ್ ತಾಂತ್ರಿಕ ಸಂಸ್ಥೆಗಳ ಆವರಣದಲ್ಲಿ ಸರ್ವಿಸ್…

Read More