Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಏಷ್ಯನ್ ಗೇಮ್ಸ್ ನಲ್ಲಿ ಮೈಸೂರಿನ ರಿಷಿತಾಗೆ ಕಂಚು ಪದಕ


ಮೈಸೂರು; ಮೈಸೂರಿನ ರಿಷಿತಾ ಅವರು ಮಲೇಷ್ಯಾದಲ್ಲಿ ನಡೆಯುತ್ತಿತುವ ಪ್ಯಾನ್ ಡೆಫ್ ಏಷ್ಯನ್ ಗೇಮ್ಸ್ನಲ್ಲಿ ೪*೧೦೦ ಮೀಟರ್ ರಿಲೇಯಲ್ಲಿ ಟೀಮ್ ಇಂಡಿಯಾ ಪರ ಕಂಚಿನ ಪದಕ ಗೆದ್ದು ಸಾಂಸ್ಕöÈತಿಕ ನಗರಿ ಮೈಸೂರಿಗೆ ಕೀರ್ತಿ ತಂದಿದ್ದಾರೆ. ಕಂಚಿನ ಪದಕ ವಿಜೇತೆ ರಿಷಿತಾ ಮೈಸೂರಿನ ಜೆ.ಪಿ. ನಗರ ನಿವಾಸಿಯಾಗಿದ್ದು,
“ವರ್ಷಗಳ ಕಾಲದ ಕಠಿಣ ಪರಿಶ್ರಮ, ತ್ಯಾಗ, ಕಣ್ಣೀರು ಮತ್ತು ಅಚಲವಾದ ದೃಢ ನಿಶ್ಚಯದಿಂದ ಅಂತಿಮವಾಗಿ ನಮಗೆ ಈ ಹೆಮ್ಮೆಯ ಕ್ಷಣ ತಂದುಕೊಟ್ಟಿದೆ,” ಎಂದು ರಿಷಿತಾ ತರಬೇತುದಾರ ರಾದೇಶ್ ಅಭಿಮಾನದ ಮೆಚ್ಚುಗೆ ಸೂಚಿಸಿದ್ದಾರೆ.
ಇವರ ಪರಿಶ್ರಮ, ಸಮರ್ಪಣೆ ಹಾಗೂ ಛಲ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.