Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಓಟದ ಅಂಗಳದಲ್ಲಿ ಸದ್ವಿದ್ಯಾ ವಿದ್ಯಾರ್ಥಿಗಳ ಚಿನ್ನದ ಬೇಟೆ!


100, 200 ಮೀಟರ್ ಓಟದಲ್ಲಿ ಗೌತಮ್‌ಗೆ ಬಂಗಾರದ ಪದಕ; ವೈಯಕ್ತಿಕ ಚಾಂಪಿಯನ್‌ಷಿಪ್ ಕಿರೀಟ
4 * 100 ಮೀಟರ್ ರಿಲೇ ಓಟದಲ್ಲೂ ಸದ್ವಿದ್ಯಾ ತಂಡಕ್ಕೆ ಚಿನ್ನದ ಸಂಭ್ರಮ

ಮೈಸೂರು: ಕ್ರೀಡಾ ಕ್ಷೇತ್ರದಲ್ಲಿ ಪರಿಶ್ರಮ, ಶಿಸ್ತು ಹಾಗೂ ಛಲದೊಂದಿಗೆ ಮುನ್ನಡೆಯುತ್ತಿರುವ ಮೈಸೂರಿನ ವಿಜಯನಗರದ ಸದ್ವಿದ್ಯಾ ಸೆಮಿ ರೆಸಿಡೆನ್ಷಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು, ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಓಟದ ಸ್ಪರ್ಧೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಿದ್ದಾರೆ. ವಿಶೇಷವಾಗಿ 4 * 100 ಮೀಟರ್ ರಿಲೇ ಓಟದಲ್ಲಿ ತಂಡವು ಚಿನ್ನದ ಪದಕ ಗೆದ್ದಿರುವುದು ಹಾಗೂ ಗೌತಮ್ ಜಯಕುಮಾರ್ ಡಿ. ಅವರು ಎರಡು ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಷಿಪ್ ಪ್ರಶಸ್ತಿ ಗಳಿಸಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತಷ್ಟು ಮೆರುಗು ನೀಡಿದೆ.
ರಿಲೇ ಓಟದಲ್ಲಿ ತಂಡದ ಸಂಘಟಿತ ಪ್ರದರ್ಶನ;
4 * 100 ಮೀಟರ್ ರಿಲೇ ಓಟದಲ್ಲಿ ಗೌತಮ್ ಜಯಕುಮಾರ್ ಡಿ., ವಿಘ್ನೇಶ್ ವಿ., ದಿವಿತ್ ತೇಜಸ್ ಎ. ಹಾಗೂ ಪ್ರೀತಮ್ ಎಸ್. ಅವರನ್ನೊಳಗೊಂಡ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ರಿಲೇ ಓಟದಲ್ಲಿ ಪ್ರತಿಯೊಬ್ಬ ಕ್ರೀಡಾಪಟುವಿನ ವೇಗ, ಸಮಯಪ್ರಜ್ಞೆ ಹಾಗೂ ತಂಡದ ಸಮನ್ವಯ ಪ್ರಮುಖವಾಗಿದ್ದು, ಸದ್ವಿದ್ಯಾ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ತಂಡದ ನಾಲ್ವರು ಕ್ರೀಡಾಪಟುಗಳ ಸಂಘಟಿತ ಪ್ರಯತ್ನವು ಈ ಗೆಲುವಿಗೆ ಪ್ರಮುಖವಾಗಿದೆ. ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿನ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಇತರ ವಿದ್ಯಾರ್ಥಿಗಳಿಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಲಿದೆ.
ಎರಡು ಸ್ಪರ್ಧೆಗಳಲ್ಲಿ ಗೌತಮ್‌ಗೆ ಚಿನ್ನ ;
ಕಾಲೇಜಿನ ವಿದ್ಯಾರ್ಥಿ ಗೌತಮ್ ಜಯಕುಮಾರ್ ಡಿ. ಅವರು ವೈಯಕ್ತಿಕ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 100 ಮೀಟರ್ ಹಾಗೂ 200 ಮೀಟರ್ ಓಟಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡೂ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಈ ಮೂಲಕ ಕ್ರೀಡಾಕೂಟದ ವೈಯಕ್ತಿಕ ಚಾಂಪಿಯನ್‌ಷಿಪ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಗೌತಮ್ ಅವರು ಎರಡೂ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿರುವುದು ಅವರ ಕ್ರೀಡಾ ಸಾಮರ್ಥ್ಯವನ್ನು ಪ್ರತಿಬಿಂಬಿಸಿದೆ. ಒಂದೇ ಕ್ರೀಡಾಕೂಟದಲ್ಲಿ ಎರಡು ವೈಯಕ್ತಿಕ ಚಿನ್ನದ ಪದಕಗಳನ್ನು ಗೆದ್ದು ವೈಯಕ್ತಿಕ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದಿರುವುದು ಕಾಲೇಜಿನ ಕ್ರೀಡಾ ಸಾಧನೆಗೆ ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ.
ಆಡಳಿತ ಮಂಡಳಿಯಿAದ ಅಭಿನಂದನೆ; ವಿದ್ಯಾರ್ಥಿಗಳ ಈ ಸಾಧನೆಗೆ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೋರುತ್ತಿರುವ ಆಸಕ್ತಿ, ಶಿಸ್ತು ಹಾಗೂ ಸಾಧನೆಯ ಮನೋಭಾವವನ್ನು ಶ್ಲಾಘಿಸಿರುವ ಅವರು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಯಶಸ್ಸು ಗಳಿಸಿ ಕಾಲೇಜಿಗೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

ಚಿತ್ರ ವಿವರಣೆ: ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸದ್ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಗಣ್ಯರು. ನಿಂತಿರುವವರು (ಎಡದಿಂದ): ಗೌತಮ್ ಜಯಕುಮಾರ್ ಡಿ., ವಿಘ್ನೇಶ್ ವಿ., ದಿವಿತ್ ತೇಜಸ್ ಎ. ಹಾಗೂ ಪ್ರೀತಮ್ ಎಸ್. ಕುಳಿತಿರುವವರು (ಎಡದಿಂದ): ದೈಹಿಕ ಶಿಕ್ಷಣ ನಿರ್ದೇಶಕ ಎನ್.ಡಿ. ಜಗನ್ನಾಥ್, ಕಾವೇರಿ ಚಾರಿಟಬಲ್ ಟ್ರಸ್ಟ್ನ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್, ಉಪಾಧ್ಯಕ್ಷ ಎಸ್. ಬಾಲಾಜಿ ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ. ಜಿ.ಆರ್. ಕವಿತಾ.