
ಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಅ.೧೩ರಿಂದ ೧೬ವರೆಗೆ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಅ.೧೩ರಂದು ಬೆಳಗ್ಗೆ ೬.೩೦ಕ್ಕೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಚಿತ್ತಾರ ಸ್ಪರ್ಧೆಯನ್ನು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಟಿ.ಎಸ್.ಶ್ರೀವತ್ಸ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಬೆಳಗ್ಗೆ ೧೧ಕ್ಕೆ ಜೆ.ಕೆ.ಮೈದಾನದಲ್ಲಿ ಮಹಿಳಾ ದಸರಾ ಭವ್ಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ಶಾಸಕ ಕೆ.ಹರೀಶ್ ಅಧ್ಯಕ್ಷತೆವಹಿಸಲಿದ್ದಾರೆ. ಬೆಳಗ್ಗೆ ೧೧.೩೦. ಮಹಿಳಾ ದಸರಾ ಮಳಿಗೆಗಳ ಉದ್ಘಾಟನೆಯನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಪದ್ಮಾವತಿ ನೆರವೇರಿಸಲಿದ್ದಾರೆ.
ಅ.೧೪ರಂದು ಬೆಳಗ್ಗೆ ೧೦.೩೦ರಿಂದ ಜಿ-ಸ್ಕಾ÷್ವಡ್ ಮೈಸೂರು ತಂಡದವರಿAದ ಪಂಚ ಗ್ಯಾರಂಟಿ ಬಗ್ಗೆ ಕಿರುನಾಟಕ ಪ್ರದರ್ಶನ, ಬೆಳಗ್ಗೆ ೧೧ ರಿಂದ ತಾಯಿ ಮಗು-ಫ್ಯಾಷನ್ ಶೋ ಸ್ಪರ್ಧೆ(೬ ವರ್ಷದೊಳಗಿನ ಮಕ್ಕಳೊಂದಿಗೆ), ಮಧ್ಯಾಹ್ನ ೨.೩೦ ರಿಂದ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಹಾಗೂ ಮಹಿಳೆಯರಿಂದ ಕೇಶಾಲಂಕಾರ ಸ್ಪರ್ಧೆ, ೩ ರಿಂದ ಸಾಂಸ್ಕöÈತಿಕ ನೃತ್ಯ ಮತ್ತು ಸಮೂಹ ನೃತ್ಯ ನಡೆಯಲಿದೆ.
ಅ.೧೫ ರಂದು ಬೆಳಗ್ಗೆ ೧೦ ರಿಂದ ರಾಜ್ಯದ ಹಾಗೂ ಜಿಲ್ಲೆಯ ಪರಂಪರೆಯನ್ನು ಬಿಂಬಿಸುವ ವೇಷಭೂಷಣ ಧರಿಸಿ (ಕರ್ನಾಟಕ ಸಿಂಚನ, ವೈವಿದ್ಯತೆಯ ದರ್ಶನ) ವಾಕಥಾನ್(ಕಂಸಾಳೆಯೊAದಿಗೆ) ಹಾಗೂ ೧೧.೩೦ ರಿಂದ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ.೧೬ ರಂದು ಬೆಳಗ್ಗೆ ೧೦ ರಿಂದ ಸಾಂಸ್ಕöÈತಿಕ ನೃತ್ಯ ಮತ್ತು ಸಮೂಹ ನೃತ್ಯ, ೧೦.೩೦ ರಿಂದ ಹಿರಿಯ ಮಹಿಳಾ ನಾಗರೀಕರಿಗೆ ಆಟೋಟ ಸ್ಪರ್ಧೆ, ೧೧ ರಿಂದ ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರ ಮಹಿಳಾ ಸಬಲೀಕರಣದ ಚಿಂತನೆಗಳ ಕುರಿತು ಡಾ.ಪದ್ಮ ಶೇಖರ್ ರವರಿಂದ ಸಂವಾದ, ೧೧.೩೦ ರಿಂದ ಲಿಂಗತ್ವ ಅಲ್ಪಸಂಖ್ಯಾತರಿAದ ಕಾರ್ಯಕ್ರಮಗಳು ಸಮೂಹ ನೃತ್ಯ, ೩.೩೦ ರಿಂದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ತಿಳಿಸಿದ್ದಾರೆ.