Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಸೂರು ಭಾಗಕ್ಕೆ ‘ನಾಲ್ವಡಿ ಕರ್ನಾಟಕ’ ಎಂದು ಹೊಸದಾಗಿ ನಾಮಕರಣ ಮಾಡಿ; ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ


ಮೈಸೂರು: ಮೈಸೂರು ಭಾಗವನ್ನು ‘ಹಳೆಯ ಮೈಸೂರು’ ಎಂದು ಕರೆಯುವುದಕ್ಕೆ ತಿಲಾಂಜಲಿ ಇಟ್ಟು, ‘ನಾಲ್ವಡಿ ಕರ್ನಾಟಕ’ ಅಥವಾ ನಾಲ್ವಡಿ ಮೈಸೂರು ಎಂದು ನಾಮಕರಣ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಆಗ್ರಹಿಸಿದರು.
ಶುಕ್ರವಾರ ನಗರದ ಚಾಮರಾಜಪ್ಮರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮರಾಜ್ಯದ ಕಲ್ಪನೆಯನ್ನೂ ಮೀರಿ ಮೈಸೂರು ಸಂಸ್ಥಾನವನ್ನು ಕಟ್ಟಿ ಅಭಿವೃದ್ಧಿಪಡಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಈ ರಾಜಮನೆತನದ ಆಳರಸರೆಲ್ಲರೂ ಸರ್ವಕಾಲಕ್ಕೂ ಪ್ರಾತಃಸ್ಮರಣೀಯರು. ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಾರಿಯ ದಸರಾ ಮಹೋತ್ಸವದಲ್ಲೇ ಮೈಸೂರು ಭಾಗಕ್ಕೆ ‘ನಾಲ್ವಡಿ ಕರ್ನಾಟಕ’ ಎಂದು ಹೊಸದಾಗಿ ನಾಮಕರಣ ಮಾಡಿ ಘೋಷಣೆ ಹೊರಬೀಳುವಂತೆ ಕ್ರಮ ಕೈಗೊಳ್ಳಬೇಕು. ಇದೊಂದು ಐತಿಹಾಸಿಕವಾದ ಘೋಷಣೆ ಆಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಲಿದ್ದೇನೆ’ ಎಂದರು.
ಮೈಸೂರು ಅರಮನೆಯ ಆಡಳಿತ ಮಂಡಳಿಯನ್ನು ಕೂಡಲೇ ರದ್ದುಪಡಿಸಬೇಕು. ಅರಮನೆ ಒಳಗೆ ಪಾಳೇಗಾರರು ಸೇರಿಕೊಂಡು ದರ್ಬಾರ್ ಮಾಡುತ್ತಿದ್ದಾರೆ. ಅರಮನೆಯ ಪಾರಂಪರಿಕ ಸುರಕ್ಷತೆಗಾಗಿ ಪ್ರತ್ಯೇಕ ನಿರ್ವಹಣಾ ಮಂಡಳಿ ರಚಿಸಿ ಅರಮನೆಯನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು.
ಮರದ ಅರಮನೆ ಸುಟ್ಟು ಹೋದ ಬಳಿಕ ಮಹಾರಾಜರು ಎಷ್ಟು ಕಷ್ಟಪಟ್ಟು ಈ ಅರಮನೆಯನ್ನು ಕಟ್ಟಿದ್ದಾರೆ. ನಮಗೆ ಮತ್ತೊಮ್ಮೆ ಅರಮನೆ ಕಟ್ಟುವ ಯೋಗ್ಯತೆ ಇದೆಯಾ? ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡಿದರೆ ಅರಮನೆ ಉಳಿಯುತ್ತದೆಯೇ? ಎಂದು ಪ್ರಶ್ನಿಸಿದರಲ್ಲದೆ, ಅರಮನೆ ವೀಕ್ಷಕರ ಪ್ರವೇಶವನ್ನು ರದ್ದು ಮಾಡಿ, ದಿನಕ್ಕೆ ಇಷ್ಟೇ ಜನ, ಇಷ್ಟೇ ಸಮಯ ಎಂದು ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಅರಮನೆಯನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಪಾರಂಪರಿಕ ಕಟ್ಟಡಗಳ ಪ್ರಾಧಿಕಾರ ರಚಿಸಿ:
ರಾಜ್ಯದಲ್ಲಿ ಬರಗಾಲದ ನಡುವೆಯೂ ನಾಡ ಹಬ್ಬ ಮೈಸೂರು ದಸರಾ ಪರಂಪರೆಯನ್ನು ಅದ್ದೂರಿಯಾಗಿ ಮುಂದುವರಿಸುತ್ತಿರುವುದು, ವಿಭಿನ್ನ ದೃಷ್ಟಿಕೋನದಲ್ಲಿ ಆಯೋಜಿಸುತ್ತಿರುವುದು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಲ್ಲಿಗೇ ಬಂದು ಸಭೆ ಮಾಡಿದ್ದು ಸ್ವಾಗತಾರ್ಹ. ಆದರೂ ಹಲವು ಲೋಷದೋಷಗಳು ಕಂಡುಬರುತ್ತಿವೆ’ ಎಂದರು.
ಅಂಬಾವಿಲಾಸ ಅರಮನೆಯೂ ಸೇರಿದಂತೆ ಮೈಸೂರಿನ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮತ್ತು ಸಂರಕ್ಷಣಾ ಪ್ರಾಧಿಕಾರ ಎಂದು ಹೊಸದಾಗಿ ರಚಿಸಬೇಕು. ಕಾರ್ಯದರ್ಶಿ ದರ್ಜೆಯ ಅಧಿಕಾರಿಗೆ ಮೇಲುಸ್ತುವಾರಿ ಕೊಡಬೇಕು. ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ದಸರಾ ವೇಳೆ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಕಳೆದ ಬಾರಿ ಅಲೆಮಾರಿ ಕುಟುಂಬದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆ ದಸರೆಗೆ ದೊಡ್ಡ ಮಸಿ ಬಳಿಯಿತು. ದುರಂತವೆAದರೆ, ಅದರ ತನಿಖೆ ಸರಿಯಾಗಿ ನಡೆಯಲೇ ಇಲ್ಲ. ಯಾರ ಮೇಲೂ ಜವಾಬ್ದಾರಿ ಹೊರಿಸಲಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ವಿಚಾರಣಾ ಕೇಂದ್ರಗಳನ್ನು ತೆರೆಯಬೇಕು. ತೀವ್ರ ವಿಚಕ್ಷಣೆ ವಹಿಸಬೇಕು. ಹೋಟೆಲ್, ಆಹಾರ ಮೇಳ ಮೊದಲಾದ ಕಡೆಗಳಲ್ಲಿ ಶುಚಿತ್ರ ಇರುವಂತೆ ಹಾಗೂ ಗುಣಮಟ್ಟದ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಮಾರುವೇಷದ ಕಾರ್ಯಾಚರಣೆ (ಸ್ಟಿಂಗ್ ಆಪರೇಷನ್) ಕಾರ್ಖಾನೆ ಇರುವುದೇ ಕಾಂಗ್ರೆಸ್‌ನಲ್ಲಿ’ ಬಣಗಳಿರುವುದೂ ಅಲ್ಲೇ. ಕೆಪಿಸಿಸಿ ಅಧ್ಯಕ್ಷರು-ಸರ್ಕಾರದ ಸಂಬAಧ ಹೇಗಿದೆ ಎಂಬುದನ್ನು ಆ ಪಕ್ಷದವರೇ ಹೇಳುತ್ತಿದ್ದಾರೆ’ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರ ಜಿಲ್ಲಾ ಘಟಕದ ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಜಿಲ್ಲಾ ಕಾರ್ಯದರ್ಶಿ ದಯಾನಂದ ಪಟೇಲ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಸತೀಶ್‌ಕುಮಾರ್, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಯಾದವ್ ಇದ್ದರು.