Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅ.11 ರಿಂದ 14ರವೆಗೆ ದಸರಾ ಕ್ರೀಡಾಕೂಟ ಸಿಎಂ ಕಪ್

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟನೆಮೈಸೂರು : ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.11 ರಿಂದ 14ರವೆಗೆ ದಸರಾ ಕ್ರೀಡಾಕೂಟ ಸಿಎಂ ಕಪ್ ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.ಶುಕ್ರವಾರ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 11 ರಂದು ಸಂಜೆ 4.30 ಗಂಟೆಗೆ ದಸರಾ ಕ್ರೀಡಾಕೂಟವನ್ನು ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಕ್ರೀಡಾಕೂಟದಲ್ಲಿ…

Read More

ಯುವಕ ಯುವತಿಯರಲ್ಲಿ ಸಂಸತ್‌ನ ಅಧಿವೇಶನದ ಬಗ್ಗೆ ಅರಿವು ಮೂಡಿಸಬೇಕು; ಶಾಸಕ ಡಿ.ರವಿಶಂಕರ್

ಕೆ.ಆರ್.ನಗರ;ಭವಿಷ್ಯದ ಪ್ರಜೆಗಳಾದ ಇಂದಿನ ಯುವಕ ಯುವತಿಯರಲ್ಲಿ ಸಂಸತ್‌ನ ಅಧಿವೇಶನದ ಬಗ್ಗೆ ಅರಿವು ಮೂಡಿಸುವ ಸಲುವಾಗ ಯುವಸಂಸತ್ ಸಭೆ ನಡೆಸಲಾಗುತ್ತಿದ್ದು ಇದರಿಂದ ಎಲ್ಲರಲ್ಲೂ ಅಧಿವೇಶನದ ಬಗ್ಗೆ ತಿಳಿಯಲು ಸಹಕಾರಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸಭೆಯಲ್ಲಿ ಪಾಲ್ಗೊಂಡಿರುವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ನೀವೆಲ್ಲರೂ ಭವಿಷ್ಯದಲ್ಲಿ ಉತ್ತಮ ರಾಜಕಾರಿಣಿಯಾಗಿ, ಅಧಿಕಾರಿಯಾಗಿ, ಪ್ರಜೆಯಾಗಿ ಬದುಕು ರೂಪಸಿಕೊಳ್ಳುವ…

Read More

ಸಾರಿಗೆ ಬಸ್ ಅಪಘಾತ – ಮೂವರು ಸಾವು 

ಎಚ್.ಡಿ.ಕೋಟೆ : ಅತಿವೇಗವಾಗಿ ಚಲಿಸುತ್ತಿದ್ದ ಸಾರಿಗೆ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ನಿಂತಿದ್ದ ಪಾದಚಾರಿಗಳಿಗೂ ಗುದ್ದಿದ  ಪರಿಣಾಮ ಬೈಕ್ ಸವಾರ  ಸೇರಿದಂತೆ ಮೂವರು ಮೃತಪಟ್ಟು ಓರ್ವ  ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆಯ  ಪುರ  ಬಳಿ ಸಂಭವಿಸಿದೆ. ಮೃತರನ್ನು ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ಮಾವಿಯ ಮಾವಿಯ ಷರೀಪ್ ಮತ್ತು ವಿಜಾಪುರ ಭಾಗದ ಸಚಿನ್, ಗೋವಿಂದ  ರಾಥೋಡ್  ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ…

Read More

ಪಕ್ಷದಲ್ಲಿ ಅಶಿಸ್ತು ಕಾರಣ ಕೇಳಿ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನರಿಗೆ ನೋಟಿಸ್ 

ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ : ಮಾಜಿ ಶಾಸಕ ಕೆ. ಮಹದೇವ್ ಪಿರಿಯಾಪಟ್ಟಣ : ಪಕ್ಷದ ಯಾವುದೇ ಪೂರ್ವನುಮತಿ ಪಡೆಯದೇ ಜೆಡಿಎಸ್ ಪಕ್ಷದ ಹೆಸರು ಹಾಗೂ ಕಾರ್ಯಕರ್ತರನ್ನು ಬಳಸಿಕೊಂಡು ರಾಜಕೀಯ ಪಾದಯಾತ್ರೆ ಆಯೋಜಿಸಿದ ಮೈಮುಲ್ ಮಾಜಿ ಅಧ್ಯಕ್ಷ ಪಿಎಂ ಪ್ರಸನ್ನ ರವರಿಗೆ ಜೆಡಿಎಸ್ ಪಕ್ಷದ ಶಿಸ್ತುಪಾಲನ ಸಮಿತಿಯ ವತಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಮಾಜಿ ಶಾಸಕ ಕೆ. ಮಹದೇವ್ ತಿಳಿಸಿದರು. ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಟ್ಟದಪುರದಿಂದ ಪಿರಿಯಾಪಟ್ಟಣದವರಿಗೆ…

Read More

ಚಾಮರಾಯನಕೋಟೆಯಲ್ಲಿ ಸ್ವರ್ಣಗೌರಿ ಆರಾಧನೆ

ಪಿರಿಯಾಪಟ್ಟಣ : ತಾಲೂಕಿನ ಚಾಮರಾಯನಕೋಟೆ ಗ್ರಾಮದಲ್ಲಿ ಶ್ರೀ ವಿಶ್ವಕರ್ಮ ಸಮುದಾಯದ ಗೌರಿ ಕುಟುಂಬದವರು ಪ್ರತಿಷ್ಠಾಪಿಸಲಾಗಿದ್ದ ಸ್ವರ್ಣಗೌರಿ ದೇವಿ ಮತ್ತು ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಗುರುವಾರ ವಿಜೃಂಭಣೆಯಿಂದ ಸಾವಿರರ ಭಕ್ತರ ಸಮ್ಮುಖದಲ್ಲಿ ನಡೆಯಿತು. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಸುಮಾರು 27 ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದು ಇಲ್ಲಿನ ವಿಶೇಷ ಆಚರಣೆಯಾಗಿದೆ. ಮಹಾಲಯ ಅಮಾವಾಸ್ಯೆಗೆ ಮೂರು ದಿನಗಳು ಬಾಕಿ ಇರುವಾಗ ದೇವಿಯ ವಿಗ್ರಹವನ್ನು ವಿಸರ್ಜಿಸುವ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಗ್ರಾಮದ ಶಿಲ್ಪಿಗಳಾದ ಸಿ.ಟಿ….

Read More

ಸಮಾಜದ ಪ್ರಗತಿಗೆ ನೆರವಾಗುತ್ತಿರುವ ಪತ್ರಕರ್ತರ ಸೇವೆ ಅಮೂಲ್ಯವಾದುದು ; ಶಾಸಕ ದರ್ಶನ್‌ ಧ್ರುವನಾರಾಯಣ

ನಂಜನಗೂಡು; ಸಮಾಜದಲ್ಲಿ ಕಂಡು ಬರುವ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಜನರ ಸಮಸ್ಯೆಗಳಿಗೆ ದ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪ್ರಗತಿಗೆ ನೆರವಾಗುತ್ತಿರುವ ಪತ್ರಕರ್ತರ ಸೇವೆ ಅಮೂಲ್ಯವಾದುದು ಎಂದು ಶಾಸಕ ದರ್ಶನ್‌ ಧ್ರುವನಾರಾಯಣ ಹೇಳಿದರು.     ಅವರು ಶುಕ್ರವಾರ ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ತಾಲೂಕು ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜೆಎಸ್‌ಎಸ್‌ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಗಾಟನೆ ನೆರವೇರಿಸಿ ಮಾತನಾಡಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಪತ್ರಿಕಾ ರಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಸತ್ಯ,ನಿಷ್ಟೆ…

Read More

ದಸರಾ ಉದ್ಘಾಟನೆಯಂದು ಚಾಮುಂಡಿಬೆಟ್ಟಕ್ಕೆ ಭಕ್ತರು ಬರಲು ಅವಕಾಶ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು; ನಗರದ ಚಾಮುಂಡಿ ಬೆಟ್ಟದಲ್ಲಿ ಅ. 11 ರಂದು ನಡೆಯಲಿರುವ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 9 ಗಂಟೆಯಿ0ದ ಮಧ್ಯಾಹ್ನ 1 ಗಂಟೆಯವರೆಗೆ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಭಂಧ ಹೇರಲು ಹೊರಟಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಶುಕ್ರವಾರ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಅಡಿ ನಿರ್ಮಾಣ ಮಾಡುತ್ತಿದ್ದ ಕ್ಯೂ ಮಂಟಪದ ಸ್ಥಳದಲ್ಲೇ, ಈಗ ದಸರಾ…

Read More

ಫಿರಂಗಿಗಳಿ0ದ ಸಿಡಿಯುತ್ತಿದ್ದ ಸಿಡಿಮದ್ದಿಗೆ ಬೆದರದೆ ನಿಂತ ಗಜಪಡೆ.

ಮೈಸೂರು; ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲೆಂದು ಬಂದಿರುವ ಗಜಪಡೆಗೆ ಎರಡನೇ ಬಾರಿ ಕುಶಾಲತೋಪು ಸಿಡಿಸುವ ತಾಲೀಮುನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು.ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಎರಡನೇ ಬಾರಿಗೆ ನಗರ ಸಶಸ್ತç ಮೀಸಲು ಪಡೆಯಿಂದ ಕುಶಾಲತೋಪು ಸಿಡಿ ಮದ್ದು ಸಿಡಿಸುವಿಕೆ ನಡೆಯಿತು.7ಪಿರಂಗಿ ಗಾಡಿಗಳನ್ನು ಸಾಲಾಗಿ ನಿಲ್ಲಿಸಿ, ಅವುಗಳಿಗೆ ಮದ್ದು ತುಂಬಿ, ಬೆಂಕಿ ಕೊಡುವ ಮೂಲಕ 21ಭಾರೀ ಸಿಡಿ ಮದ್ದಿನ ತಾಲೀಮು ನಡೆಸಲಾಯಿತು.ಸಾಲಾಗಿ ನಿಂತಿದ್ದ ಅಶ್ವದಳದ 45 ಕುದುರೆಗಳು ಗಜಪಡೆಯ ಆನೆಗಳಾದಅಭಿಮನ್ಯು, ಧನಂಜಯ,…

Read More

ನ್ಯಾಯಾಂಗ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಸಹಯೋಗದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ ಕುಮಾರ್ ಅವರಿಂದ ಸ್ವಚ್ಛತಾ ಲಾಂಛನ’ ಅನಾವರಣ ಮೈಸೂರು: ಮೈಸೂರು ನಗರದ ನ್ಯಾಯಾಂಗ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ಹಳೆಯ ನ್ಯಾಯಾಲಯ ಸಂಕೀರ್ಣ ಮತ್ತು ಜಯನಗರದ ಮಳಲವಾಡಿಯಲ್ಲಿರುವ ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಯಂತ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಮೈಸೂರು ಮಹಾನಗರ ಪಾಲಿಕೆಯ…

Read More

ದಸರಾ ಬಂದೋ ಬಸ್ತ್ಗಾಗಿ 6 ಸಾವಿರ ಪೊಲೀಸರ ನಿಯೋಜನೆ; ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್

ಮೈಸೂರು: ಈ ಬಾರಿ ಅದ್ಧೂರಿಯಾಗಿ ಜರುಗಲಿರುವ ನಾಡ ಹಬ್ಬ ಮೈಸೂರು ದಸರಾ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಆರು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದರು.ಶುಕ್ರವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ನಾಡ ಹಬ್ಬ ಮೈಸೂರು ದಸರಾ ಬಂದೋ ಬಸ್ತ್ ಕೆಲಸಕ್ಕಾಗಿ 5,161 ಸಿವಿಲ್ ಹಾಗೂ ಸಂಚಾರಿ ಪೊಲೀಸರು, 33 ಕೆಎಸ್‌ಆರ್‌ಪಿ ತುಕಡಿ, 25 ಡಿಎಆರ್ ತುಕಡಿ, 1500 ಹೋಮ್…

Read More