Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯುವಕ ಯುವತಿಯರಲ್ಲಿ ಸಂಸತ್‌ನ ಅಧಿವೇಶನದ ಬಗ್ಗೆ ಅರಿವು ಮೂಡಿಸಬೇಕು; ಶಾಸಕ ಡಿ.ರವಿಶಂಕರ್


ಕೆ.ಆರ್.ನಗರ;
ಭವಿಷ್ಯದ ಪ್ರಜೆಗಳಾದ ಇಂದಿನ ಯುವಕ ಯುವತಿಯರಲ್ಲಿ ಸಂಸತ್‌ನ ಅಧಿವೇಶನದ ಬಗ್ಗೆ ಅರಿವು ಮೂಡಿಸುವ ಸಲುವಾಗ ಯುವಸಂಸತ್ ಸಭೆ ನಡೆಸಲಾಗುತ್ತಿದ್ದು ಇದರಿಂದ ಎಲ್ಲರಲ್ಲೂ ಅಧಿವೇಶನದ ಬಗ್ಗೆ ತಿಳಿಯಲು ಸಹಕಾರಿಯಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಸಭೆಯಲ್ಲಿ ಪಾಲ್ಗೊಂಡಿರುವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ನೀವೆಲ್ಲರೂ ಭವಿಷ್ಯದಲ್ಲಿ ಉತ್ತಮ ರಾಜಕಾರಿಣಿಯಾಗಿ, ಅಧಿಕಾರಿಯಾಗಿ, ಪ್ರಜೆಯಾಗಿ ಬದುಕು ರೂಪಸಿಕೊಳ್ಳುವ ಸಂದರ್ಭದಲ್ಲಿ ಸಂಸತ್‌ಸಭೆಯ ಬಗ್ಗೆ ಮಾಹಿತಿ ತಿಳಿಯುವುದು ತೀರಾ ಅವಶ್ಯಕವಾಗಿದೆ ಎಂದರು.
ಸAಸತ್ ಅಧಿವೇಶನದಲ್ಲಿ ನಡೆಯುವ ಅಭಿವೃದ್ದಿಯ ಚರ್ಚೆ, ಪರ, ವಿರೋಧದ ಚರ್ಚೆ, ಅಧಿವೇಶದ ಒಳಾಂಗಣದಲ್ಲಿ ನಡೆಯುವ ಸನ್ನಿವೇಶ, ಪ್ರಶ್ನೊತ್ತರ, ಶೂನ್ಯವೇಳೆಯ ಚರ್ಚೆ, ತುರ್ತು ಘಟನೆ ಸಂಧರ್ಭದಲ್ಲಿ ಜಾರಿಗೊಳಿಸುವ ಕಾನೂನುಗಳು, ವಿಧೇಯಕ ಮಂಡನೆ, ಬಿಲ್‌ಪಾಸ್, ಚುಕ್ಕಿಪ್ರಶ್ನೆ ಸೇರಿದಂತೆ ಎಲ್ಲವನ್ನು ಈಗಿನಿಂದಲೆ ತಿಳಿದು ಭವಿಷ್ಯದಲ್ಲಿ ಇಂದಿನ ಧ್ವನಿ ಗಟ್ಟಿಯಾಗಿ ಉಳಿದು ಬೆಳೆಯುವಂತಾಗಲಿ ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಹೆಚ್.ಎಸ್.ಶಂಕರಮೂರ್ತಿ ಮತ್ತಿತರರು ಮಾತನಾಡಿದರು.
ತಾ.ಪಂ.ಇಒ ವಿ.ಪಿ.ಕುಲದೀಪ್, ಸಾಲಿಗ್ರಾಮ ತಾ.ಪಂ.ಇಒ ರವಿ, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಸಿ.ಎಂ.ಅಣ್ಣಯ್ಯ, ತಾಲೂಕು ನೌಕರರ ಸಂಘದ ಅಧ್ಯಕ್ಷ ಉಮೇಶ್, ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ತಿಮ್ಮಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಎಂ.ಎಸ್.ಮಹದೇವ್, ವಕ್ತಾರ ಸೈಯ್ಯದ್‌ಜಾಬೀರ್, ನಗರಾಭಿವೃದ್ದಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಜಾನಪದ ಪರಿಷತ್ ಖಜಾಂಚಿ ರಾಜಯ್ಯ, ನಿವೃತ್ತ ಶಿಕ್ಷಕ ರಾಮಕೃಷ್ಣ, ಶಾಂತಿರಾಜಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಸ್ವಾಮಿ ಹಾಗೂ ಕೆ.ಅರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ವಿವಿಧ ಕಾಲೇಜಿನ ಅಧ್ಯಾಪಕ ವರ್ಗದವರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಪೋಟೋ-1-ಕೆ.ಆರ್.ನಗರ ಪಟ್ಟಣದ ಪಿಎಲ್‌ಡಿಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ” ಕಾರ್ಯಕ್ರಮವನ್ನು ಶಾಸಕ ಡಿ.ರವಿಶಂಕರ್ ಉದ್ಘಾಟಿಸಿದರು.
ಕೆ.ಆರ್.ನಗರ
“ರಾಜ್ಯದಲ್ಲಿ ಬರಗಾಲವಿದ್ದು ಕುಡಿಯುವನೀರಿಲ್ಲ, ದನಕರುಗಳಿಗೆ ಮೇವಿಲ್ಲ, ಸರಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿ ಚಿಕಿತ್ಸೆಇಲ್ಲ, ರೈತರ ಸಾಲ ಮನ್ನಾಮಾಡಬೇಕು, ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡಲಾಗುತ್ತಿಲ್ಲ, ಈ ಬಗ್ಗೆ ಉತ್ತರಕೊಡಿ ಇಲ್ಲವೆ ರಾಜೀನಾಮೆ ನೀಡಿ ಮನೆಗೆ ನಡೆಯಿರಿ. “
ಇದು ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಅಂತರರಾಷ್ಟಿçÃಯ ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ” ಕಾರ್ಯಕ್ರಮದ ಸಭೆಯಲ್ಲಿ ಪಾಲ್ಗೊಂಡು ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಾದ ನಡೆಸಿಕೊಟ್ಟ ಯುವ ಸಂಸತ್ ಅಧಿವೇಶನದಲ್ಲಿ ಆಡಳಿತ ಪಕ್ಷದ ಸಚಿವರಿಗೆ ವಿರೋಧಪಕ್ಷದ ಶಾಸಕರು ಏರಿದ ಧ್ವನಿಯಲ್ಲಿ ಪ್ರಶ್ನೆಯ ಪ್ರಶ್ನೆಯ ಸುರಿಮಳೆಗೈದು ನಡೆಸಿದ ಪರಿ.
ಸಭೆಯಲ್ಲಿ ಆಡಳಿತ ಪಕ್ಷದ ಸಚಿವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಒಂದು ಕೆಜಿ ಕೂದಲಿಗೆ 5500 ರೂಪಾಯಿ ಆದರೆ ಇಡೀ ವರ್ಷ ಕಷ್ಟಪಟ್ಟು ರೈತ ಬೆಳೆದ ಕಬ್ಬಿಗೆ ಬರೀ 2500 ರೂಪಾಯಿ ಇದು ಯಾವ ನ್ಯಾಯ ಹೇಳಿ ಎಂದು ಕಬ್ಬಿಗೆ ನಿಗಧಿತ ಬೆಲೆ ನೀಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ದನಕರುಗಳಿಗೆ ಕುಡಿಯಲು ನೀರಿಲ್ಲ, ಮೇವಿಲ್ಲ, ಸಮರ್ಪಕವಾದ ಬರ ನಿರ್ವಹಣೆ ಮಾಡಲಾಗುತ್ತಿಲ್ಲ ಕೂಡಲೆ ರಾಜ್ಯದ ಎಲ್ಲೆಡೆ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿ ಮೇವುಬ್ಯಾಂಕ್ ತೆರೆಯಬೇಕು ಎಂದು ಆಗ್ರಹಿಸಿದರು.
ರಾಜ್ಯದ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿ ವಿತರಣೆ ಮಾಡಲಾಗುತ್ತಿಲ್ಲ ಎಲ್ಲದಕ್ಕೂ ಹೊರಗಡೆ ಚೀಟಿ ಬರೆಯುತ್ತಿದ್ಧಾರೆ ಉತ್ತಮ ಚಿಕಿತ್ಸೆ ಜನತೆಗೆ ದೊರೆಯುತ್ತಿಲ್ಲ ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ವಿರೋಧಪಕ್ಷದ ಶಾಸಕರು ಆಡಳಿತದ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು. ಈ ಸಂಧರ್ಭದಲ್ಲಿ ಆಡಳಿತ ಮತ್ತು ವಿರೋಧಪಕ್ಷದವರು ಏರಿದ ಧ್ವನಿಯಲ್ಲಿ ಒಬ್ಬರಿಗೊಬ್ಬರು ಮಾತನಾಡುತ್ತಾ ಕೈಕೈ ಮಿಲಾಯಿಸುವ ಹಂತ ತಲುಪುವ ವೇಳೆಗೆ ಸಭಾಧ್ಯಕ್ಷರು ಎರಡು ಕಡೆಯವರನ್ನು ಸಮಾಧಾನಪಡಿಸಿ ಅಧಿವೇಶನವನ್ನು ಮುಂದೂಡಿದ ಘಟನೆ ನಡೆಯಿತು.
ಮಧ್ಯಾಹ್ನದವರೆಗೆ ನಡೆದ ಸಭೆಯಲ್ಲಿ ಕೃಷಿ, ಕಂದಾಯ, ತೋಟಗಾರಿಕೆ, ಅಬಕಾರಿ, ಪಶುಸಂಗೋಪನೆ ಹಾಗೂ ಇನ್ನಿತರ ಇಲಾಖೆಗಳಿಗೆ ಸಂಬAಧಪಟ್ಟAತೆ ಕೇಳಿದ ಪ್ರಶ್ನೆಗೆ ಆಡಳಿತದ ಪಕ್ಷದ ಸಚಿವರು ಉತ್ತರ ನೀಡಿದರು.
ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಡೆಸಿಕೊಟ್ಟ ಯುವ ಸಂಸತ್ ಅಧಿವೇಶನದ ಸನ್ನಿವೇಶವನ್ನು ಕುಳಿತು ವೀಕ್ಷಿಸಿದ ಶಾಸಕ ಡಿ.ರವಿಶಂಕರ್ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಕಾರ್ಯಕ್ರಮಗಳು ನಮ್ಮ ಯುವಜನತೆ ತಿಳಿದು ಅರಿವು ಮೂಡಲು ಸಹಕಾರಿಯಾಗಿದೆ ಎಂದರು.
ಪೋಟೋ-2-ಕೆ.ಆರ್.ನಗರ ಪಟ್ಟಣದ ಪಿಎಲ್‌ಡಿಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ”ಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು.
ಪೋಟೋ-3-ಕೆ.ಆರ್.ನಗರ ಪಟ್ಟಣದ ಪಿಎಲ್‌ಡಿಬ್ಯಾಂಕ್ ರೈತಸಮುದಾಯಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ “ಯುವ ಸಂಸತ್ ಸಭೆ”ಯಲ್ಲಿ ಸಭೆ ನಡೆಸಿಕೊಟ್ಟ ಸಭಾಧ್ಯಕ್ಷರು.
ಕೆ.ಆರ್.ನಗರ
ಜನತೆ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಒಂದೆಡೆ ಸೇರಿ ಒಗ್ಗೂಡಲು ವಿವಿಧ ಧಾರ್ಮಿಕ ಉತ್ಸವಗಳು ಸಹಕಾರಿಯಾಗಿವೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಪುರಸಭಾ ಬಯಲುರಂಗಮAದಿರ ಮೈದಾನದಲ್ಲಿ ಪುರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗಣೇಶ, ಮಹದೇಶ್ವರ, ಆಂಜನೇಯಸ್ವಾಮಿ ಉತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಜನತೆಯಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಧಾರ್ಮಿಕ ಒಗ್ಗಟ್ಟಿನೊಂದಿಗೆ ಸಮಾಜದ ಒಗ್ಗೂಡಿವಿಕೆ ಗ್ರಾಮದ ಪಟ್ಟಣದ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದರು.
ಇAತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣಬಹುದಾಗಿದ್ದು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಕಲೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ವಿಶ್ವನಾಥ್, ನವನಗರ ಅರ್ಬನ್‌ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಮೂಳೆ ತಜ್ಞ ಡಾ||ಗೌತಮ್, ಗಡ್ಡಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ತಮ್ಮನಾಯಕ್, ಅಸ್ಲಾಂ, ಅಡಗನಹಳ್ಳಿನಾಗೇಂದ್ರ, ಮೈಕ್‌ಕಿಟ್ಟಿ, ಮಂಜುನಾಥ್, ಯೋಗೇಶ್, ಪ್ರಸನ್ನರಾವ್, ಬಾಂಬೆರಾಜು, ಕೆಂಚಿಮAಜು, ರೋಟರಿ ಕಾರ್ಯದರ್ಶಿ ಅಶೋಕ್ ಮತ್ತಿತರರು ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಸ್ವತಃ ಶಾಸಕರು ಮತ್ತು ಮುಖಂಡರು ಸಾಲುಪಂಕ್ತಿಯಲ್ಲಿ ಕುಳಿತ ಭಕ್ತಾಧಿಗಳಿಗೆ ಉಣಬಡಿಸಿದರು.
ಪೋಟೋ-4-ಕೆ.ಆರ್.ನಗರ ಪಟ್ಟಣದ ಪುರಸಭಾ ಬಯಲುರಂಗಮAದಿರ ಮೈದಾನದಲ್ಲಿ ಪುರಸಭೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು.
ಕೆ.ಆರ್.ನಗರ
ಸೆಸ್ಕಾಂನ ಗುತ್ತಿಗೆದಾರರ ಬಳಿ ಲೇಬರ್ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕನೋರ್ವ ವಿದ್ಯುತ್‌ಶಾಕ್‌ನಿಂದ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ಸಾಲಿಗ್ರಾಮ ತಾಲೂಕು ಹೊಸೂರು ಬಳಿ ನಡೆದಿದೆ.
ಘಟನೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಪಿ.ಜಿ.ಪಾಳ್ಯದ ರಾಚಪ್ಪಾಜಿ ಎಂಬುವರ ಮಗ ಮದನ್(24) ಎಂಬುವರೆ ಮೃತಪಟ್ಟವರಾಗಿದ್ದಾರೆ. ಮದನ್ ಸೇರಿದಂತೆ ಒಟ್ಟು ಆರುಮಂದಿ ವಿದ್ಯುತ್ ಗುತ್ತಿಗೆದಾರರೊಬ್ಬರ ಬಳಿ ವಿದ್ಯುತ್ ಕೆಲಸ ಮಾಡುತ್ತಿದ್ದರು. ಹೆಚ್.ಡಿ.ಕೋಟೆಯ ಬೀರೇಶ್ ಎಂಬುವರ ಬಳಿ ಈ ಆರುಮಂದಿ ಸಾಲಿಗ್ರಾಮ ತಾಲೂಕು ಹೊಸೂರು ಗ್ರಾಮದ ಬಳಿ ಇದ್ದು ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ವಿದ್ಯುತ್ ಕೆಲಸದಲ್ಲಿ ನಿರತನಾಗಿದ್ದ ಸಂಧರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮದನ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಹಲವು ಹೊತ್ತು ಕಳೆದರೂ ವಾಪಸ್ ಬಾರದ ಮದನ್‌ನನ್ನು ಹುಡುಕಿ ಹೊರಟ ಸಹಚರರಿಗೆ ಮದನ್ ಉಸಿರಾಟವಿಲ್ಲದೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಗುತ್ತಿಗೆದಾರರಿಗೆ ಹಾಗೂ ಪೋಲೀಸರಿಗೆ ವಿಷಯ ತಿಳಿಸಿದ್ಧಾರೆ.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಗೆ ಸಂಬAಧಪಟ್ಟAತೆ ಮೃತಪಟ್ಟ ಯುವಕನ ಪೋಷಕರು ಹಾಗೂ ಗುತ್ತಿಗೆದಾರರ ನಡುವೆ ರಾಜಿ ಸಂಧಾನ ನಡೆಯುತ್ತಿದ್ದ ಕಾರಣ ಸಂಜೆಯಾದರೂ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ.