
ಮೈಸೂರು; ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲೆಂದು ಬಂದಿರುವ ಗಜಪಡೆಗೆ ಎರಡನೇ ಬಾರಿ ಕುಶಾಲತೋಪು ಸಿಡಿಸುವ ತಾಲೀಮುನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಲಾಯಿತು.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಎರಡನೇ ಬಾರಿಗೆ ನಗರ ಸಶಸ್ತç ಮೀಸಲು ಪಡೆಯಿಂದ ಕುಶಾಲತೋಪು ಸಿಡಿ ಮದ್ದು ಸಿಡಿಸುವಿಕೆ ನಡೆಯಿತು.
7ಪಿರಂಗಿ ಗಾಡಿಗಳನ್ನು ಸಾಲಾಗಿ ನಿಲ್ಲಿಸಿ, ಅವುಗಳಿಗೆ ಮದ್ದು ತುಂಬಿ, ಬೆಂಕಿ ಕೊಡುವ ಮೂಲಕ 21ಭಾರೀ ಸಿಡಿ ಮದ್ದಿನ ತಾಲೀಮು ನಡೆಸಲಾಯಿತು.
ಸಾಲಾಗಿ ನಿಂತಿದ್ದ ಅಶ್ವದಳದ 45 ಕುದುರೆಗಳು ಗಜಪಡೆಯ ಆನೆಗಳಾದ
ಅಭಿಮನ್ಯು, ಧನಂಜಯ, ಮಹೇಂದ್ರ,ಪ್ರಶಾAತ, ಸುಗ್ರೀವಾ, ಏಕಲವ್ಯ, ಶ್ರೀರಾಮ, ಗೋಪಿ, ಕಾವೇರಿ, ಲಕ್ಷಿ÷್ಮ, ಚೈತ್ರಾ,ರೂಪ, ಶ್ರೀಕಂಠ ಸೇರಿದಂತೆ ಎಲ್ಲಾ ಆನೆಗಳು ಫಿರಂಗಿಗಳಿAದ ಸಿಡಿಯುತ್ತಿದ್ದ ಢಂ… ಢಂ ಎಂಬ ಭಾರೀ ಶಬ್ದಕ್ಕೆ ಅಂಜದೆ, ಅಳುಕದೆ, ಬೆಚ್ಚದೆ ಇದಕ್ಕೆಲ್ಲಾ ನಾವು ಹೆದರುವುದಿಲ್ಲ ಎಂಬAತೆ ಆರಾಮವಾಗಿ ನಿಂತಿದ್ದವು.
ಮೊದಲ ಹಂತದ ಕುಶಾಲತೋಪಿನ ತಾಲೀಮಿನಲ್ಲಿ ಶ್ರೀಕಂಠ, ಶ್ರೀರಾಮ ಆನೆ ವಿಚಲಿತವಾಗಿತ್ತು. ಆದರೆ
ಎರಡನೇ ಹಂತದ ತಾಲೀಮಿನಲ್ಲಿ ಈ ಎರಡು ಆನೆಗಳು ಕೂಡ ಯಾವುದೇ ಭಯವಿಲ್ಲದೆ ನಿಂತಿದ್ದವು.
ಎರಡನೇ ಹಂತದ ತಾಲೀಮು ಯಶಸ್ವಿಯಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಫ್ ಡಾ. ಪ್ರಭುಗೌಡ, ಎರಡನೇ ಹಂತದ ಸಿಡಿಮದ್ದು ಸಿಡಿಸುವ ತಾಲಿಮು ಯಶಸ್ವಿಯಾಗಿದೆ.
ಯಾವುದೇ ಆನೆಗಳು ಶಬ್ದಕ್ಕೆ ಬೆದರಿಲ್ಲ, ಸಿಡಿಮದ್ದು ಶಬ್ದಕ್ಕೆ ಶಬ್ದಕ್ಕೆ ಎಲ್ಲಾ ಆನೆಗಳು ಹೊಂದಿಕೊAಡಿವೆ.
ಆನೆಗಳ ಆರೋಗ್ಯ ಉತ್ತಮವಾಗಿದೆ. ಮಹೇಂದ್ರ ಆನೆ ಭಾರ ಹೊರಲು ಹಿಂದೇಟು ಹಾಕ್ತಿದ್ದಾನೆ
ಹೀಗಾಗಿ ಆತನನ್ನ ಅಂಬಾರಿ ಹೊರಲು ಪರಿಗಣಿಸಲ್ಲ. ಆತ ಈ ಹಿಂದೆಯೂ ನಾಲ್ಕು ಭಾರೀ ಶ್ರೀರಂಗಪಟ್ಟಣ ದಸರಾದಲ್ಲಿ ಭಾಗಿಯಾಗಿದ್ದಾನೆ, ಆದರೆ
ಆತನಿಗೆ ಈಗ ಭಾರ ಹೊರಲು ಆಗುತ್ತಿಲ್ಲ. ಹಾಗಾಗಿ
ಇನ್ನೆರಡು ದಿನಗಳಲ್ಲಿ ಶ್ರೀರಂಗಪಟ್ಟಣದ ದಸರಾದಲ್ಲಿ ಭಾಗಿಯಾಗೋ ಆನೆ ಯಾವ್ಯದೆಂದು ಫೈನಲ್ ಮಾಡ್ತೇವೆ
ಅಂಬಾರಿ ಹೊರುವ ರೇಸ್ ನಲ್ಲಿ ಧನಂಜಯ, ಪ್ರಶಾಂತ ಸುಗ್ರೀವ, ಏಕಲವ್ಯ ಆನೆಗಳು ಇದ್ದಾವೆ
ಈ ನಾಲ್ಕರಲ್ಲಿ ಒಂದು ಆನೆಯನ್ನ ಅಂಬಾರಿ ಹೊರೋ ಆನೆಯಾಗಿ ಫೈನಲ್ ಮಾಡುತ್ತೇವೆ ಎಂದು ಹೇಳಿದರು.