
ಮೈಸೂರು; ನಗರದ ಚಾಮುಂಡಿ ಬೆಟ್ಟದಲ್ಲಿ ಅ. 11 ರಂದು ನಡೆಯಲಿರುವ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಳಿಗ್ಗೆ 9 ಗಂಟೆಯಿ0ದ ಮಧ್ಯಾಹ್ನ 1 ಗಂಟೆಯವರೆಗೆ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಭಂಧ ಹೇರಲು ಹೊರಟಿರುವ ಕ್ರಮವನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಶುಕ್ರವಾರ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಅಡಿ ನಿರ್ಮಾಣ ಮಾಡುತ್ತಿದ್ದ ಕ್ಯೂ ಮಂಟಪದ ಸ್ಥಳದಲ್ಲೇ, ಈಗ ದಸರಾ ಉದ್ಘಾಟನೆಗೆ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಅಂದರೆ ಪ್ರಸಾದ ಯೋಜನೆಗೆ ಖರ್ಚು ಮಾಡಿದ್ದ ಕೋಟ್ಯಾಂತರ ರೂ ಹಣ ವ್ಯರ್ಥವಾಗಿದೆ. ಅ. 11ರಂದು ಚಾಮುಂಡಿ ಬೆಟ್ಟಕ್ಕೆ ಬರೀ ಗಣ್ಯರಿಗೆ ಅವಕಾಶ ಎಂದು ಹೇಳಿರುವುದು ಹಾಗೂ ಅಂದು ಗಣ್ಯರು ಚಾಮುಂಡಿ ಬೆಟ್ಟಕ್ಕೆ ಬರಬೇಕಾದರೆ ಜಿಲ್ಲಾಡಳಿತದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯ ಎಂದಿರುವುದು, ಅತ್ಯಂತ ಖಂಡನೀಯ. ದಸರಾ ಸಾರ್ವಜನಿಕರ ದಸರಾ ಆಗಬೇಕೆ ವಿನಹ ರಾಜಕಾರಣಿಗಳ ದಸರಾ ಆಗಬಾರದು. ಪ್ರತಿ ವರ್ಷ ಸಾರ್ವಜನಿಕರಿಗೆ ಉದ್ಘಾಟನೆ ದಿನ ಬೆಟ್ಟಕ್ಕೆ ಅವಕಾಶ ಇತ್ತು.
ಆದರೆ ಈಗ ನಿರ್ಬಂಧ ಹೇರಿರುವುದು ಸರಿಲ್ಲ. ನಾಡದೇವತೆ ಚಾಮುಂಡೇಶ್ವರಿ ಬೆಟ್ಟಕ್ಕೆ, ದರ್ಶನಕ್ಕೆ ಸಾರ್ವಜನಿಕರಿಗೆ ಏಕೆ ನಿರ್ಬಂಧ ಮಾಡುತ್ತೀರಿ? ಭಕ್ತಾದಿಗಳು ದೇಶದ ಮೂಲೆ ಮೂಲೆಗಳಿಂದ ಬಂದAತವರಿಗೆ ಅಂದು ದರ್ಶನ ಸಿಗದಿದ್ದರೆ ಹೇಗೆ? ಇದಕ್ಕೆ ಮೈಸೂರಿನ ಸಾರ್ವಜನಿಕರ ಹಾಗೂ ಕೋಟ್ಯಾಂತರ ಭಕ್ತಾದಿಗಳ ವಿರೋಧವಿದೆ. ಈ ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕೆAದು ಹಾಗೂ ಅಂದು ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶ ನೀಡಬೇಕೆಂದು ನಿಮಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಂತೋಷ್, ಪ್ರಜೀಶ್ , ಸಿಂದುವಳ್ಳಿ ಶಿವಕುಮಾರ್ , ಶಿವಲಿಂಗಯ್ಯ, ಕೇಬಲ್ ರಮೇಶ್, ಮಧುವನ ಚಂದ್ರು, ಸೋಮೇಗೌಡ, ಹೊನ್ನೇಗೌಡ, ಬಸವರಾಜು, ಶಾಂತಕುಮಾರ,ವಿಜಯೇAದ್ರ, ಬೋಗಾದಿ ಸಿದ್ದೇಗೌಡ, ನಾಗರಾಜು, ದರ್ಶನ್ ಗೌಡ, ರಾಧಾಕೃಷ್ಣ, ಗಣೇಶ್ ಪ್ರಸಾದ್, ಪ್ರದೀಪ್ ಆರ್, ಆನಂದ್, ತ್ಯಾಗರಾಜ್, ನಾಗೇಶ್, ಕುಮಾರ್ ಗೌಡ, ಇನ್ನೂ ಇತರರು ಭಾಗವಹಿಸಿದ್ದರು.