
ಮೈಸೂರು : ನಾಡ ಹಬ್ಬ ಮೈಸೂರು ದಸರಾದಲ್ಲಿ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ ರಥಕ್ಕೆ ಹಿರಿಯ ಸಾಹಿತಿ ಹಾಗೂ ರಾಜ್ಯ ಗುಪ್ತವಾರ್ತೆ ಡಿಐಜಿ ಡಾ.ಧರಣಿದೇವಿ ಮಾಲಗತ್ತಿ ಅವರು ಶುಕ್ರವಾರ ಚಾಲನೆ ನೀಡಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ,
ಮೈಸೂರು ದಸರಾ ಮಹೋತ್ಸವ ಸಮಿತಿ – ೨೦೨೬ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ಪುಸ್ತಕ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಕನ್ನಡ ಪುಸ್ತಕ ಪ್ರಾಧಿಕಾರವೇ ಒಂದು ರಥ, ಈ ರಥ ಎಲ್ಲಾ ಕಡೆ ಸಂಚರಿಸಿ ಸಾಹಿತ್ಯವನ್ನು ಪಸರಿಸಿ ಎಲ್ಲರಿಗೂ ಸಾಹಿತ್ಯದ ಸ್ಪರ್ಶವನ್ನು ನೀಡಲಿದೆ. ಪುಸ್ತಕ ಪೂಜೆಯೂ ನಮ್ಮ ಸಂಪ್ರದಾಯದ ಒಂದು ಭಾಗ, ಪುಸ್ತಕಗಳ ಮೂಲಕ ಮನುಷ್ಯನ ವ್ಯಕ್ತಿತ್ವ ಉನ್ನತವಾಗಲಿದೆ ಎಂದು ಹೇಳಿದರು.
ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಡಾ.ಪಿ ಶಿವರಾಜು ಮಾತನಾಡಿ, ಯುವ ಪೀಳಿಗೆ ಡಿಜಿಟಲ್ ಮಾಧ್ಯಮ ವ್ಯಾಮೋಹಕ್ಕೆ ಒಳಗಾಗಿದೆ. ಅದನ್ನು ಬಿಟ್ಟು ಪುಸ್ತಕ ಓದಿನ ಕಡೆಗೆ ಒಲವು ಬೆಳೆಸಿಕೊಂಡರೆ, ಸಮಾಜ ಹಾಗೂ ಯುವ ಸಮುದಾಯ ಉತ್ತಮ ಮಾರ್ಗದಲ್ಲಿ ಸಾಗಲು ಪುಸ್ತಕಗಳು ನೆರವಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಮಾನಸ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಜಂಟಿ ನಿರ್ದೇಶಕಿ ಎಸ್.ನಿರ್ಮಲ ಮಠಾಪತಿ, ಮೈಸೂರು ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಸಮ ಬಿ ಕೋಡಿಹಳ್ಳಿ, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಹಾಗೂ ಮಹಾರಾಜ ಕಾಲೇಜು ಪ್ರಾಧ್ಯಾಪಕ ಪರಶುರಾಮ್ ಸೇರಿದಂತೆ ಇತರರು ಇದ್ದರು.