Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಯಾವುದೇ ಕಾರ್ಮಿಕರಿಗೆ ತೊಂದರೆಯಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ : ಸಿ. ಶಂಕರ್ ಅಂಕನ ಶೆಟ್ಟಿಪುರ

ಪಿರಿಯಾಪಟ್ಟಣ : ಸಫಾಯಿ ಕರ್ಮಚಾರಿ ಆಯೋಗವು ಕಟ್ಟುನಿಟ್ಟಿನ ಕಾನೂನನ್ನು ಒಳಗೊಂಡಿದೆ ಎಂದು ಸಫಾಯಿ ಕರ್ಮಚಾರಿ  ಆಯೋಗದ ರಾಜ್ಯ ಸಮಿತಿ ಸದಸ್ಯ ಸಿ. ಶಂಕರ್ ಅಂಕನ ಶೆಟ್ಟಿಪುರ ತಿಳಿಸಿದರು.

 ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಯೋಗವು ಯಾವುದೇ ಕಾರ್ಮಿಕರಿಗೂ ತೊಂದರೆ ಯಾದಲ್ಲಿ ಅಧಿಕಾರಿಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಮಿಕರು ಕೂಡ ತಮಗೆ ದೊರಕುವ ಸವಲತ್ತುಗಳ ಬಗ್ಗೆ ಪ್ರತಿನಿತ್ಯ ಅರಿವನ್ನು  ಹೊಂದಬೇಕು. ಸರ್ಕಾರವು ಕಾರ್ಮಿಕರ ಪರವಾಗಿದ್ದು ಅವರ ಹಿತವನ್ನು ಬಯಸುತ್ತದೆ ಹಾಗೂ ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತದೆ ಎಂದರು.

 ಪೌರಕಾರ್ಮಿಕ ಸಂಘದ ಅಧ್ಯಕ್ಷ ಕೆ. ಶ್ರೀನಿವಾಸ್ ಮಾತನಾಡಿ ಪುರಸಭೆಯಲ್ಲಿ ಕೆಲವು  ಪೌರಕಾರ್ಮಿಕರು ಖಾಯಂಮಾತಿಯಾಗಿದ್ದರು ನಿಗದಿತ ಸಮಯಕ್ಕೆ ವೇತನ ದೊರೆಯುತ್ತಿಲ್ಲ ಎಂದರು. ಚನ್ನಕೇಶವ ಮಾತನಾಡಿ ಪುರಸಭೆ ವತಿಯಿಂದ ನೀಡುವ ಬೆಳಗಿನ ಉಪಹಾರದ ವ್ಯವಸ್ಥೆ ಬದಲಾಗಬೇಕು ಉತ್ತಮ ಗುಣಮಟ್ಟವನ್ನು ಪಾಲಿಸಬೇಕು ಎಂದರು. ಸ್ವಚ್ಛತಾ ಸಿಬ್ಬಂದಿ ವಿಜಯ್ ಕುಮಾರ್ ಮಾತನಾಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಾನು ಹಲವು ವರ್ಷಗಳಿಂದ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದೆ ಆದರೆ ಹರಾಜು ಅಧೀಕ್ಷಕರು ನನ್ನನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ.ಇ ಎಸ್ ಐ ಮತ್ತು ಪಿ ಎಫ್ ಕೂಡ ನೀಡದೆ ನನಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.ಸೆಲ್ವಿ ಮಾತನಾಡಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ನನಗೆ ಕನಿಷ್ಠ ವೇತನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಜೀವನ ಭದ್ರತೆಗೆ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿ ಲವ ಮಾತನಾಡಿ ಪಂಚಾಯಿತಿಯಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚಾಗಿ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ ಕನಿಷ್ಠ ವೇತನ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್  ಶ್ರೀನಿವಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುನಿಲ್ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಮಧು ಎಚ್.ಪಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ಸಫಾಯಿ ಕರ್ಮಚಾರಿ ಸದಸ್ಯ ರಾಜೇಂದ್ರ, ಮಾಜಿ ಸದಸ್ಯ ಎಚ್.ಕೆ.ಮಹೇಶ್, ಇ  ಎಸ್ ಐ ಪಿ ಎಫ್ ಇಲಾಖೆಯ ದೀಪಕ್,ರವಿ ನಂದನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮುತ್ತುರಾಜ್ ಸೇರಿದಂತೆ  ಇತರರಿದ್ದರು.