Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

“ಪ್ರಜಾಪ್ರಭುತ್ವದ ಹಬ್ಬ” ವಿಷಯಧಾರಿತ ದಸರಾ ಫಲಪುಷ್ಪ ಪ್ರದರ್ಶನ


ಬಣ್ಣ, ಬಣ್ಣದ ಬಗೆ, ಬಗೆಯ ಪುಷ್ಪದಲ್ಲಿ ನಿರ್ಮಾಣಗೊಳ್ಳಲಿದೆ ವಿಧಾನಸೌಧ
ಮೈಸೂರು:
ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ “ಪ್ರಜಾಪ್ರಭುತ್ವದ ಹಬ್ಬ” ವಿಷಯಾಧರಿತ ಪರಿಕಲ್ಪನೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಅ. ೧೧ ರಿಂದ ೨೧ ರವರೆಗೆ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕಿ ರೂಪಶ್ರೀ ಕೆ.ಎನ್ ತಿಳಿಸಿದರು.
ಗುರುವಾರ ನಗರದ ಕರ್ಜನ್ ಪಾರ್ಕ್ ಡಾ. ಎಂ. ಹೆಚ್. ಮರೀಗೌಡ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅ. ೧೧ ರಂದು ಬೆಳಿಗ್ಗೆ ೧೨.೩೦ ಗಂಟೆಗೆ ಕುಪ್ಪಣ್ಣ ಪಾರ್ಕ್ನ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಫಲಪುಷ್ಪ ಪ್ರದರ್ಶನವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕುಪ್ಪಣ್ಣ ಪಾರ್ಕ್ ಗಾಜಿನ ಮನೆಯಲ್ಲಿ “ವಿಧಾನಸೌಧ” ಮಾದರಿಯ ಮುಖ್ಯ ಪುಷ್ಪ ಪರಿಕಲ್ಪನೆ ಪ್ರಮುಖ ಆಕರ್ಷಣೆಯಾಗಲಿದೆ. ಈ ಪ್ರತಿ ರೂಪವು ೫೭ ಅಡಿ ಅಗಲ, ೨೦ ಅಡಿ ಉದ್ದ ಹಾಗೂ ೩೭ ಅಡಿ ಎತ್ತರವಿದ್ದು ಸುಮಾರು ೨ ಲಕ್ಷ ಕೆಂಪು ಗುಲಾಬಿ, ೪ ಸಾವಿರ ಸೇವಂತಿಗೆ ಹೂವುಗಳು ಹಾಗೂ ೨೫ ಸಾವಿರ ವೈವಿಧ್ಯಮಯ ಗ್ರೀನ್ ಫೋಲಿಯೇಜ್‌ಗಳನ್ನು ಬಳಸಿ ನಿರ್ಮಿಸಲಾಗುತ್ತಿದೆ ಹಾಗೂ ವಿಧಾನ ಸೌಧದ ಭೂದೃಶ್ಯದ ಸೌಂದರ್ಯ ಹೆಚ್ಚಿಸಲು ಮೆಕ್ಸಿಕನ್ ಲಾನ್, ಆಂಥೋರಿಯಮ್, ಗ್ಲಾಡಿಯೋಲಸ್, ಲಿಲಿಯಮ್, ಕಾರ್ನೆಷನ್, ಬರ್ಡ್ ಆಫ್ ಪ್ಯಾರಡೈಸ್ ಸೇರಿದಂತೆ ವಿವಿಧ ಆಲಂಕಾರಿಕ ಪುಷ್ಪಗಳನ್ನು ಬಳಸಲಾಗುತ್ತಿದೆ. ಈ ಬೃಹತ್ ಪುಷ್ಪ ಪ್ರತಿರೂಪ ನಿರ್ಮಾಣಕ್ಕೆ ಸುಮಾರು ೧೦೦೦ ಕೆಜಿ ವೈರ್ ಮೆಷ್ ಹಾಗೂ ೯೦೦ ಫ್ಲೋರಲ್ ಫೋಮ್ ಬಾಕ್ಸ್ಗಳನ್ನು ಬಳಸಲಾಗುತ್ತಿದೆ, ಪ್ರದರ್ಶನದ ಅವಧಿಯಲ್ಲಿ ಒಟ್ಟಾರೆ ಎರಡು ಬಾರಿ ಹೂಗಳನ್ನು ಬದಲಿಸಲಾಗುವುದು ಎಂದು ಹೇಳಿದರು.
ಗಾಜಿನ ಮನೆಯ ಹೊರಾಂಗಣದಲ್ಲಿ ರಚನೆಯಾಗುವ “ಚಿಕ್ಕ ಗಡಿಯಾರ” ಮಾದರಿಯ ಪುಷ್ಪ ಪ್ರತಿರೂಪವು ಮೈಸೂರಿನ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಲಿದೆ. ಸಸ್ಕೋಧ್ಯಾನದ ಪ್ರವೇಶ ದ್ವಾರದಲ್ಲಿ ಗುಲಾಬಿ, ಸೇವಂತಿಗೆ ಹೂವುಗಳ ಮತ್ತು ಅಲಂಕಾರಿಕೆ ಎಲೆಗಳನ್ನು ಬಳಸಿ ರಚಿಸಲಾದ ಆನೆಗಳ ಬೃಹತ್ ಪ್ರತಿಕೃತಿ ಹಾಗೂ ಬಾಲಿ ಶೈಲಿಯ ಜಾನೂರ್ ಕಲೆಯ (ಇಂಡೋನೇಷಿಯನ್ ತೆಂಗಿನ ಎಲೆ ಕಲಾಕೃತಿ) ಸ್ವಾಗತ. ಕಮಾನು ವೀಕ್ಷಕರನ್ನು ಆದರಣೀಯವಾಗಿ ಸ್ವಾಗತಿಸಲಿವೆ ಎಂದು ಮಾಹಿತಿ ನೀಡಿದರು.
ಜಾನೂರ್ ತೆಂಗಿನ ಎಲೆಗಳ ನೇಯ್ದೆ ಹಾಗೂ ಸೆಣಬಿನಿಂದ ಕಂಬಗಳನ್ನು ಅಲಂಕರಿಸಿ ಹೂವಿನ ವಾಕ್ ಹೂ ನಿರ್ಮಿಸಿ ಹಾಗೂ ಮೇಲ್ಟಾವಣಿಯಲ್ಲಿ ಉಷ್ಣವಲಯದ ಹೂವಿನ ನೇತಾಡುವ ಅಲಂಕಾರಗಳು ಹಾಗೂ ಹೂವಿನ ವಿನ್ಯಾಸ ಆಳವಡಿಸಲಾಗುವುದು.
ಆರ್ಕಿಡ್, ಅಡಿಕೆ ತಾಳೆ ಎಲೆಗಳ ನೇಯ್ದೆ ಹಾಗೂ ತಾಳೆ ಹಾಳೆ / ಸ್ಪೇತ್‌ಗಳನ್ನು ಬಳಸಿ ಹಾರ್ಟ್ ಮಾದರಿಯ ಕಮಾನುಗಳನ್ನು ನಿರ್ಮಿಸಿ ಡೆಂಡೋಬಿಯA, ವಾಂಡಾ. ಮೊಕಾರಾ ಮತ್ತು ಫಲೇನೋಪ್ಪಿಸ್ ಆರ್ಕಿಡ್ ಗಳಿಂದ ಅಲಂಕರಿಸಿ ಉಷ್ಣವಲಯದ ಹೂವಿನ ಪ್ರದರ್ಶನ ರೂಪಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ಮೊದಲ ರಾಜ ಮನೆತನಗಳೊಲ್ಲೊಂದಾದ ಗಂಗ ಸಾಮ್ರಾಜ್ಯದ ಮಹಾ ದಂಡನಾಯಕ ಮತ್ತು ಮಂತ್ರಿ ಚಾವುಂಡರಾಯನ ಬಸದಿಯ ಪ್ರತಿಕೃತಿಯನ್ನು ಥರ್ಮೋಕೋಲ್ ಬಳಸಿ ನಿರ್ಮಿಸಿ, ನೈಸರ್ಗಿಕ ಕಲ್ಲಿನಂತೆ ಕಾಣುವಂತೆ ಕಲ್ಲಿನ ಫಿನಿಷ್ ಹಾಗೂ ಪುರಾತನ ರೂಪವನ್ನು ನೀಡಿ ಬಸದಿ ಸುತ್ತಲೂ ಮಿನಿ ಜರ್ಬೆರಾ ಹೂವಿನ ಪಟ್ಟಿಗಳಿಂದ ಅಲಂಕರಿಸಲಾಗುವುದು ಹಾಗೂ ಬಸದಿ ಪಕ್ಕದಲ್ಲಿ ಕಲ್ಲಿನ ಫಿನಿಷ್ ಹೊಂದಿರುವ ವೇದಿಕೆಯ ಮೇಲೆ ಶಾಂತಿ, ಅಹಿಂಸೆ, ಸರಳ ಜೀವನ ಹಾಗೂ ತ್ಯಾಗದ ಸಂದೇಶವನ್ನು ಭಗವಾನ್ ಬಾಹುಬಲಿಯ ಪ್ರತಿಮೆಯನ್ನು ಸ್ಥಾಪಿಸಲಾಗುವುದು.
ಸಸ್ಕೋದ್ಯಾನದಲ್ಲಿ ಸಾಲು ಸಾಲು ಪುಷ್ಪ ಹಾಸಿಗೆಗಳು, ಕಲ್ಲಿನ ದಾರಿಗಳು ಮತ್ತು ಕಲ್ಲಿನ ವೃತ್ತಗಳು, ಪುಷ್ಪ ತ್ರಿಕೋನಗಳು, ಬೋನ್ಸಾಯ್ ಉದ್ಯಾನ, ಪಕ್ಷಿ ವೀಕ್ಷಣಾ ಗೋಪುರ, ಕಮಲದ ಕೊಳ, ಬಿದಿರು ವನ ಹಾಗೂ ಸಂಗೀತ ಕಾರಂಜಿ ಸೇರಿದಂತೆ ವಿವಿಧ ಆಕರ್ಷಣೆಗಳನ್ನು ರೂಪಿಸಲಾಗಿದೆ. ವಿಶಿಷ್ಟ ಮರಗಳು, ನೈಸರ್ಗಿಕ ಕಲ್ಲು ಮತ್ತು ಹುಲ್ಲಿನ ಪರ್ಗೋಲಾಗಳು, ಜಲಕೊಳಗಳು ಹಾಗೂ ವಿವಿಧ ಸ್ಥಳೀಯ ಮತ್ತು ವಿದೇಶಿ ಸಸ್ಯ ಸಂಪತ್ತು ಉದ್ಯಾನವನದ ಸೌಂದರ್ಯವನ್ನು ಹೆಚ್ಚಿಸಲಿದೆ. ದೊಡ್ಡ ಕೆರೆ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುತ್ತುವರಿದಿರುವ ಈ ಸಸ್ಯತೋಟವು ಸಸ್ಯ, ಪಕ್ಷಿ ಹಾಗೂ ಪ್ರಾಣಿ ವೈವಿಧ್ಯವನ್ನು ಆಸ್ವಾದಿಸಲು ಉತ್ತಮ ತಾಣವಾಗಿದೆ.
ಸುಮಾರು ೩೫ ಸಾವಿರ ಸಂಖ್ಯೆಗಳಲ್ಲಿ ೪೯ ಬಗೆಯ ವಾರ್ಷಿಕ ಅಲಂಕಾರಿಕ ಪುಷ್ಪ ಕುಂಡಗಳನ್ನು ಪುಷ್ಪ ಮೇಳದಲ್ಲಿ ಜೋಡಿಸಲಾಗಿದೆ ಎಂದು ವಿವರಿಸಿದರು.
ಪುಷ್ಪ ಮೇಳ ಮತ್ತು ಸಸ್ಯತೋಟ: ನಗರದ ಲಿಂಗಾAಬುಧಿ ಸಸ್ಯ ಶಾಸ್ತಿçÃಯ ತೋಟದಲ್ಲಿಯೂ ಕೂಡ ನಾಡಹಬ್ಬ ಮೈಸೂರು ದಸರಾ ಆಚರಣೆ ಪ್ರಯುಕ್ತ “ಪುಷ್ಪ ಮೇಳ ಮತ್ತು ಸಸ್ಯತೋಟ ಭೇಟಿ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ನವೀನ್ ಸಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ್ ಆರ್, ರಂಗಸಮುದ್ರ ತೋಟಗಾರಿಕೆ ಉಪನಿರ್ದೇಶಕ ವಿಜಯೇಂದ್ರ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ,ಹಿರಿಯ ಸಹಾಯಕ ನಿರ್ದೇಶಕ ಗುರುಸ್ವಾಮಿ ಇತರರು ಇದ್ದರು.