Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನ ವಿರುದ್ಧ ಶಿಸ್ತು ಕ್ರಮ : ಮಾಜಿ ಶಾಸಕ ಕೆ. ಮಹದೇವ್

ಪಿರಿಯಾಪಟ್ಟಣ : ಪಕ್ಷದ ನಿಯಮವನ್ನು ಮೀರಿ ಪಕ್ಷದ ಚಿಹ್ನೆ ಬಳಸಿ ಪ್ರತಿಭಟನೆ ಯಾತ್ರೆ ಮಾಡಿರುವ ಪಿಎಂ ಪ್ರಸನ್ನ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮಾಜಿ ಶಾಸಕ ಕೆ. ಮಹದೇವ್ ಹೇಳಿದರು.

 ಪಟ್ಟಣದ ಕಾರ್ಯನಿರ್ವತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷವು ಉತ್ತಮ ಸಂಘಟನೆಯ ಮೂಲಕ ತನ್ನದೇ ಆದ ಆಡಳಿತವನ್ನು ಸಿದ್ಧಾಂತವನ್ನು ಹೊಂದಿದೆ. ಆದರೆ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ ಪ್ರಸನ್ನರವರು ಪಕ್ಷದ ಸಿದ್ಧಾಂತವನ್ನು ಗಾಳಿಗೆ ತೂರಿ ಪ್ರತಿಭಟನೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದರು. ಈ ಬಗ್ಗೆ ತಾಲೂಕು ಅಧ್ಯಕ್ಷರು ಅಣ್ಣಯ್ಯ ಶೆಟ್ಟಿರವರು ಪತ್ರಿಕಾಗೋಷ್ಠಿಯನ್ನು ನಡೆಸಿ ಪಕ್ಷದ ಚಿಹ್ನೆ ಬಳಸಿದಂತೆ ಪಿ.ಎಂ ಪ್ರಸನ್ನ ರವರಿಗೆ ಸೂಚಿಸಿದರು ಆದರೂ ಕೂಡ ಪಕ್ಷದ ನಿಯಮಗಳನ್ನು ಗಾಳಿಗೆ ತೂರಿರುವ ಪ್ರಸನ್ನ ರವರ ಮೇಲೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಹೇಳಿದರು 

 ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ವಕೀಲ ನಾಗರಾಜು ಮಾತನಾಡಿ ಜೆಡಿಎಸ್ ಪಕ್ಷದಲ್ಲಿ ಪಿ ಎಂ ಪ್ರಸನ್ನ ವರಿಷ್ಠರ ತೀರ್ಮಾನವನ್ನು ದಿಕ್ಕರಿಸುವ ಕೆಲಸ ಮಾಡಿದ್ದಾರೆ ವರಿಷ್ಠರ ಸಲಹೆ ಮತ್ತು ಮಾರ್ಗದರ್ಶನ ಪಡೆಯದೆ ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಕ್ಷದ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದಾರೆ ಆದ್ದರಿಂದ ಇವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಅವರಿಗೆ ಪಕ್ಷದಿಂದ ನೋಟೀಸ್ ನೀಡುತ್ತಿದ್ದು ಒಂದು ವಾರದ ಒಳಗೆ ನೀಡುವ ನೋಟಿಸ್ ಗೆ ಉತ್ತರವನ್ನು ಪಿ ಎಂ ಪ್ರಸನ್ನ ನೀಡಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

 ಪತ್ರಿಕಾಗೋಷ್ಠಿಯಲ್ಲಿ ಶಿಸ್ತು ಪಾಲನಾ ಸಮಿತಿಯ ಕಾರ್ಯಾಧ್ಯಕ್ಷ ವಕೀಲ ಗೋವಿಂದೇಗೌಡ, ಪುರಸಭಾ ಮಾಜಿ ಅಧ್ಯಕ್ಷ ಮಂಜುನಾಥ್ ಸಿಂಗ್, ವಕೀಲ ಸತೀಶ್ ಬಿ ಜಿ, ಮುಖಂಡರಾದ ರಾಜಣ್ಣ, ಬಸವರಾಜ್, ಅಶೋಕ್, ಕುಮಾರ್, ಸ್ವಾಮಿ, ತಿಮ್ಮನಾಯಕ ರೇಣುಕಸ್ವಾಮಿ ಭಾಗವಹಿಸಿದ್ದರು.