Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಆಚಾರ್ಯ ಮಧ್ವರ ತತ್ವಜ್ಞಾನ ಲೋಕದ ಎಲ್ಲ ವಿಚಾರಗಳನ್ನು ಒಳಗೊಂಡಿದೆ; ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ


ಮೈಸೂರು : ಮಾಧ್ವ ತತ್ವಜ್ಞಾನವು ಜೀವನದ ಹಲವು ಸಮಸ್ಯೆ ಮತ್ತು ಸವಾಲುಗಳಿಗೆ ಸಮರ್ಥವಾದ
ಪರಿಹಾರಗಳನ್ನು ಸೂಚಿಸಿದ್ದು, ಇದು ಬಹು ಮಾಧ್ಯಮಗಳ ಮೂಲಕ ಹೆಚ್ಚಿನ ಜನರನ್ನು ತಲುಪಬೇಕಿದೆ ಎಂದು ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ಸೋಸಲೆ ವ್ಯಾಸರಾಜ ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ` ಶ್ರೀ ವಾದಿರಾಜ ತೀರ್ಥ ವಿರಚಿತ ಪಂಜೀಕರಣ’ ಆಟದ ವಿಶೇಷ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದ ಅವರು, ಆಚಾರ್ಯ ಮಧ್ವರ ತತ್ವಜ್ಞಾನ ಲೋಕದ ಎಲ್ಲ ವಿಚಾರಗಳನ್ನು ಒಳಗೊಂಡಿದೆ. ಮೋಕ್ಷದ ಮಾರ್ಗವನ್ನೂ ಸಮರ್ಥವಾಗಿ ಪ್ರತಿಪಾದಿಸಿದೆ. ಪಂಚೀಕರಣ ಆಟವು ಸೃಷ್ಟಿ, ಸ್ಥಿತಿ ಮತ್ತು ಲಯ ಮೊದಲಾದ ಗಹನ ತಾತ್ವಿಕ ವಿಚಾರಗಳನ್ನು ಸರಳವಾಗಿ ಅರ್ಥಮಾಡಿಸಲಿದೆ. ಇಂತಹ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು. ಆ ಮೂಲಕ ಜೀವನ ಸಾಧನೆಗೆ ಪ್ರೇರಕವಾಗಬೇಕು ಎಂದರು
ಮುಖ್ಯ ಅತಿಥಿಗಳಾಗಿದ್ದ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ. ಡಿ.ಪಿ. ಮಧು ಸೂದನಾಚಾರ್ಯ ಮಾತನಾಡಿ, ಮಾಧ್ವ ಸಂಪ್ರದಾಯದ ತತ್ವಜ್ಞಾನವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವಲ್ಲಿ ಪಂಚೀಕರಣ ಆಟದಂತಹ ಸಾಂಪ್ರದಾಯಿಕ ಕಲಾಪ್ರಕಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ವಿಶೇಷವಾಗಿ ಮಹಿಳೆಯರೂ ಇಂತಹ ಪ್ರಾತ್ಯಕ್ಷಿಕೆಗಳ ಮೂಲಕ ಮಾಧ್ವ ತತ್ವವನ್ನು ಸುಲಭವಾಗಿ ಗ್ರಹಿಸಬಹುದು. ಶ್ರೀಮದ್ ಭಾಗವತ ಮೊದಲಾದ ಶಾಸ್ತç ಗ್ರಂಥಗಳಲ್ಲಿ ವಿವರಿಸಿರುವ ಸೃಷ್ಟಿ, ಸ್ಥಿತಿ ಮತ್ತು ಲಯ ಪ್ರಕ್ರಿಯೆಗಳನ್ನು ಪಂಚೀಕರಣ ಆಟದ ಮೂಲಕ ಸರಳವಾಗಿ ಅರಿಯಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಸ್ಕöÈತ ವಿವಿಯಿಂದ ಮಾನ್ಯತೆ ಪಡೆದಿರುವ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನವು ವ್ಯಾಸರಾಜರ ಮಠದ ಗುರು ಪರಂಪರೆಗೆ ಸಂಬAಧಿಸಿದ ಸಂಶೋಧನೆ, ಗ್ರಂಥ ಸಂರಕ್ಷಣೆ ಮತ್ತು ಜ್ಞಾನಪ್ರಸಾರದ ಬಹುವಿಧ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ವ್ಯಾಸತೀರ್ಥ ವಿದ್ಯಾಪೀಠದ ಅಧ್ಯಾಪಕ ಶ್ರೀಕಾಂತಾಚಾರ್ಯ ಕಾರ್ಯಾಗಾರದಲ್ಲಿ ಪಂಚೀಕರಣ ಆಟದ ತರಬೇತಿ ನೀಡಿದರು. ಸಮಾರೋಪ ಸಂದರ್ಭದಲ್ಲಿ ಶ್ರೀಗಳ ಸಮ್ಮುಖ ವಿದ್ಯಾರ್ಥಿಗಳು ತಾವು ಕಲಿತ ಆಟದ ಪ್ರಾತ್ಯಕ್ಷಿಕೆ ನೀಡಿ ಸೈ ಎನಿಸಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದವರಿಗೆ ಅತಿಥಿಗಳು ಪ್ರಮಾಣಪತ್ರ ವಿತರಿಸಿದರು. ಪ್ರತಿಷ್ಠಾನದ ಉಪ ನಿರ್ದೇಶಕ ಸುಘೋಷ ಆಚಾರ್ಯ ಹಾಜರಿದ್ದರು.