
ಮೈಸೂರು: ಪಾತಿ ಫೌಂಡೇಶನ್ ವತಿಯಿಂದ ಚಿತ್ರ ನಟ ಸಾಹಸಸಿಂಹ ಡಾ, ವಿಷ್ಣುವರ್ಧನ್ ರವರ 76ನೇ ಜನ್ಮದಿನ ಅಂಗವಾಗಿ ಕುವೆಂಪು ನಗರದ ರಮಣಶ್ರೀ ಜ್ಞಾನ ಕೇಂದ್ರದ ಆವರಣದಲ್ಲಿ ವಿಷ್ಣುವರ್ಧನ್ ಅಭಿನಯಿಸಿರುವ ಚಿತ್ರಗಳ ಸಂಗೀತ ಸಂಜೆ ಹಾಗೂ ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರಿಗೆ ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು
ವಿಜಯಲಕ್ಷಿ÷್ಮ ಅಯ್ಯಂಗಾರ್ (ಸಾಮಾಜಿಕ ಕ್ಷೇತ್ರ), ಅಲೋಕ್ ಆರ್ ಜೈನ್ (ಕ್ರೀಡಾ ಕ್ಷೇತ್ರ), ಮಧುಸೂದನ್ (ಧಾರ್ಮಿಕ ಕ್ಷೇತ್ರ), ಕುಮಾರ ಆರಾಧ್ಯ (ಸಹಕಾರಿ ಕ್ಷೇತ್ರ), ಕುಮಾರ್ (ಸಾಮಾಜಿಕ ಕ್ಷೇತ್ರ), ಗಗನ್ ಗೌಡ (ಸಂಘಟನಾ ಕ್ಷೇತ್ರ), ಅರ್ಜುನ್ (ಕಲಾ ಕ್ಷೇತ್ರ), ಕು. ಅಮೃತಾ ಸತೀಶ್ (ಕ್ರೀಡೆ ಹಾಗೂ ಸಂಗೀತ ಕ್ಷೇತ್ರ) ರವರಿಗೆ ವಿಷ್ಣುವರ್ಧನ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ವೇಳೆ ನಗರಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಮಾತನಾಡಿ ಸಾಹಸಸಿಂಹ ವಿಷ್ಣುವರ್ಧನ್ ರವರು ಮೂಲತಃ ಮೈಸೂರಿನವರಾದರೂ ಕೂಡ ವಿಶ್ವದೆಲ್ಲಡೆ ಜನಪ್ರಿಯರಾಗಿದ್ದಾರೆ, ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜೊತೆಯಲ್ಲೆ ಚಿತ್ರರಂಗದಲ್ಲಿ ಹೊಸ ಆಯಾಮ ಸೃಷ್ಟಿಸುವಲ್ಲಿ ಕಲಾವಿದರಿಗೆ ಮಾದರಿಯಾಗಿತ್ತು, ಕನ್ನಡ ನೆಲ ಜಲ ಭಾಷೆಯ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತುತ್ತಿದ್ದ ಮಹಾನ್ ವ್ಯಕ್ತಿ ಡಾ. ವಿಷ್ಣುವರ್ಧನ ರವರು ಎಂದು ತಿಳಿಸಿದರು.
ಹಿರಿಯ ಸಮಾಜ ಸೇವಕ ಕೆ ರಘುರಾಮ ವಾಜಪಾಯಿ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಕಲಾವಿದ ವಿಷ್ಣುವರ್ಧನ್ ಯುವಜನರಲ್ಲಿ ಭಾಷಾಭಿಮಾನ ಮತ್ತು ದೇಶಾಭಿಮಾನ ಮೂಡಿಸುವಂತಹ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಅವರ ಜೀವನ, ಕಿರಿಯ ನಟರಿಗೆ ಮಾದರಿ ಎಂದರು
ಇದೇ ಸಂದರ್ಭದಲ್ಲಿ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ನಗರಪಾಲಿಕೆಯ ಮಾಜಿ ಸದಸ್ಯ ಜಗದೀಶ್,ವಕೀಲರಾದ ಮಧ್ವರಾಜ್,ಶಶಿಕುಮಾರ್,ಕೃಷ್ಣಮೂರ್ತಿ, ಮಹಾದೇವ್, ಗಾಯಕರಾದ ರೇವಣ್ಣ, ಕೃಷ್ಣಮೂರ್ತಿ, ಭಾವನಾ ,ಮಹೇಶ್,
ಮಂಜುನಾಥ್, ಬಾಲು, ವಕೀಲರಾದ ಶಿವರಾಜ್ ಹಾಗೂ ಇನ್ನಿತರರು ಹಾಜರಿದ್ದರು.