Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಕವಿಗೋಷ್ಠಿಯಲ್ಲಿ ಮೊಳಗಿದ ಜನಪದ ಕಲೆಯ ವೈಭೋಗ


ಮೈಸೂರು : ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ 6 ನೇ ದಿನವಾದ ಶುಕ್ರವಾರ ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಬಹುರೂಪಿ ದಸರಾ ಕವಿಗೋಷ್ಠಿಯಲ್ಲಿ ನಾಡಿನ ಜನಪದ ಕಲೆಯ ವೈಭೋಗ ಮೊಳಗಿತು.
ಮೊಳಗಿತು. ಡಾ. ಗುರುರಾಜು ಮೈಸೂರು ಅವರು ಪವಾಡ ಪುರುಷ ಸಿದ್ದಪ್ಪಾಜಿ ಕುರಿತ ಆದಿ ಒಳಗಲ ಜ್ಯೋತಿ.. ಬೀದಿ ಒಳಗಲ ಜ್ಯೋತಿ…ಅರಮನೆಯ ಜ್ಯೋತಿ… ಗುರುಮನೆಯ ಜ್ಯೋತಿ ಹಾಗೂ ಸಿದ್ದಯ್ಯ ಸ್ವಾಮಿ ಬನ್ನಿ… ಲಿಂಗಯ್ಯ ದಯಾಮಾಡೋ… ಕಂಡಾಯದ ಒಡಯ… ಹಾಡುಗಳು ಸಭಿಕರು ಶಿಳ್ಳೆ ಮತ್ತು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಹುಬ್ಬಳಿ ಮೂಲದ ಡಾ. ಜ್ಯೋತಿರ್ಲಿಂಗ ಚಂ. ಹೊನಕಟ್ಟಿ ಅವರು ವೃತ್ತಿಯಲ್ಲಿ ಪೊಲೀಸ್ ಇನ್ಸೆ÷್ಪಕ್ಟರ್ ಆಗಿದ್ದು, ತಮ್ಮ ಮಗಳೊಡನೆ ಉತ್ತರ ಕರ್ನಾಟಕ ಭಾಗದ ಜನಪದ ಸೊಗಡಿನ ತವರು ಮನೆಗೆ ಹೋಗಲು ಗಂಡನ ಬಳಿ ಹಂಡಿತಿ ಅನುಮತಿ ಕೇಳುವ ನಾನು ಹೋಗಿ ಬರ್ತೀನಿ… ತವರೂರಿಗೆ ಅಪ್ಪಣ ಕೊಡು ರಾಯ ನನ ಮಾತಿಗೆ… ನೀನು ಒಪ್ಪಿಗೆ ಕೊಡು ರಾಯ ನನ ಮಾತಿಗೆ… ಅವರ ಮಗಳು ಹುಂಜಾ ಬಂದೈತೆ ತಂಗಿ ಹುಂಜಾ ಬಂದೈತೆ ಅಂಗಾಳಾದ ಹಾಡಿ ಹಾಡಿ ಕೂಗುತಾದವ್ವ ಹಾಡನ್ನು ಹಾಡಿದರು.
ಮಂಡ್ಯ ಜಿಲ್ಲೆಯ ಬಸವರಾಜು ಮತ್ತು ತಂಡದವರು ಪಿ.ಕೆ.ರಾಜಶೇಖರ ಅವರ ರಚಿತ ಪಿರಿಯಾಪಟ್ಟಣ ಕಾಳಗದ ಲಿಂಗರಾಜಮ್ಮ ಕುರಿತ ಪ್ರಸಂಗದ ಹಾಡು, ಉತ್ತರ ಕರ್ನಾಟಕ ಮೂಲದ ಮಲ್ಲಯ್ಯ ಸ್ವಾಮಿ ತೋಟಗಂಟಿ ಕಲಘಟಗಿ ಅವರು ಗೀಗಿ ಮತ್ತು ಲಾವಣ್ಯ ಪದ್ಯ ಹಾಡಿದರು.ಡಾ.ಮಳವಳ್ಳಿ ಮಹದೇವಸ್ವಾಮಿ ಅವರು,ಮಹದೇಶ್ವರರ ಕಥಾ ಪ್ರಸಂಗವನ್ನು ಕಥೆ ಹಾಡುಗಳ ಮೂಲಕ ಕಟ್ಟಿಕೊಟ್ಟರು ಸಭೀಕರು ಕಥೆಯನ್ನು ಆಲಿಸಿ ಆನಂದಿಸಿದರು.
ಜನಪದ ಹಾಡುಗಳನ್ನು ಪ್ರಸ್ತುತಪಡಿಸಿದವರು: ಡಾ. ಗುರುರಾಜು ಮೈಸೂರು, ಡಾ. ಜ್ಯೋತಿರ್ಲಿಂಗ ಚಂ. ಹೊನಕಟ್ಟಿ, ಪುಟ್ಟಮ್ಮ ಮತ್ತು ತಂಡ, ಬಸವರಾಜು ಮತ್ತು ತಂಡ, ಬಸವರಾಜು ಶಿಗ್ಗಾವಿ, ಮಲ್ಲಯ್ಯ ಸ್ವಾಮಿ ತೋಟಗಂಟಿ ಕಲಘಟಗಿ, ಡಾ.ಮಳವಳ್ಳಿ ಮಹದೇವಸ್ವಾಮಿ, ಡಾ.ಎಂ.ಮಹೇಶ ಚಿಕ್ಕಲ್ಲೂರು,ಯೋಗೇಂದ್ರ ದುದ್ದ, ಕೆ.ಆರ್. ರಮೇಶ್ ಮತ್ತು ತಂಡ, ರಾಜೇಶ್ವರಿ ಕೃಷ್ಣ ಸಿದ್ಧಿ,ಲಿಂಗಪ್ಪಗೌಡ, ವಿಶ್ವನಾಥ್, ಶೇಷಣ್ಣ, ಮಣಿಕಂಠ ಮತ್ತು ತಂಡ, ವೀರಣ್ಣ ಅಂಗಡಿ, ಸ್ವಾಮಿ ಗಾಮನಹಳ್ಳಿ ಮತ್ತು ಆರ್. ರೂಪ, ಸಿದ್ದು ಜಂಗಮ ಲೋಕೇಶ್ ಮತ್ತು ತಂಡ, ಸಿದ್ದು ಮೋಟೆ ಅವರಾದಿ ಶಿವಪೇಟೆ ಹಾಗೂ ಹೊನ್ನಮ್ಮ ಮತ್ತು ತಂಡದವರು ಜನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.
ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮತಿ ವತಿಯಿಂದ ನಡೆದ “ಜನಪದ” ಕವಿಗೋಷ್ಠಿಯನ್ನು ಉದ್ಘಾಟಿಸಿದ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಮಾತನಾಡಿ, ನೀವು ನಾವು ಜನಪದರಾಗಿರುವುದರಿಂದ ನಾವೆಲ್ಲರು ಕಷ್ಟ-ಸುಖಗಳನ್ನು ಅಭಿನಾಮದಿಂದ ಅನುಭವಿಸುತ್ತೇವೆ ಎಂದರು.
ಜನಪದಗಳು ಕವಿಗಳು ಅನಕ್ಷರಸ್ಥರು, ಶಿಷ್ಠ ಕವಿಗಳು ಅಕ್ಷರಸ್ಥರು ಆದರೆ ಶಿಷ್ಠ ಕವಿಗಳು ತಮ್ಮ ಕೃತಿಗಳ ಮೂಲಕ ಪ್ರಚಾರ ಪಡೆಯುತ್ತಾರೆ. ಆದರೆ ಜನಪದ ಕವಿಗಳು ಪ್ರಚಾರದ ಗೋಜಿಗೆ ಹೋಗದೆ ಅವರ ಹೆಸರಿನ ಬಗ್ಗೆ ಜನರೇ ಮಾತನಾಡುವ ಹಾಗೆ ಮಾಡುತ್ತಾರೆ ಅದಕ್ಕಾಗಿಯೇ ಜನಪದರನ್ನು ಅನಾಮಧೆಯ ಅಮರ ಕವಿಗಳು ಎಂದು ಕರೆಯಲಾಗುವುದು ಎಂದು ಹೇಳಿದರು.
ಜನಪದ ಗಾಯಕರರು ಶತ ಶತಮಾನಗಳಿಂದ ಮೌಖಿಕ ಪರಂಪರೆಯಲ್ಲೇ ನಿರಂತರವಾಗಿ ಜನಪದ ಸಾಹಿತ್ಯವನ್ನು ಕೇವಲ ಹಾಡುಗಳಲ್ಲದೆ, ಕಥೆ, ಪುರಾಣ, ಐಕ್ಯತೆ, ಆಚಾರ ವಿಚಾರ ನಂಬಿಕೆಗಳಿAದ ಕೂಡಿರುವುದನ್ನು ಹಾಡುತ್ತಾ ಬರುತ್ತಿದ್ದಾರೆ ಕೇಳುಗ ಸಹೃದಯಿಗಳಿಂದ ಜನಪದ ಕಲೆಯೂ ಇಂದಿಗೂ ಜೀವಂತವಾಗಿ ಉಳಿದಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ವಿದ್ವಾಂಸರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ರಾಜಪ್ಪ ದಳವಾಯಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಹಾಗೂ ದಸರಾ ಕವಿಗೋಷ್ಠಿ ಕಾರ್ಯಾಧ್ಯಕ್ಷ ಪ್ರೊ.ಎಂ.ನAಜಯ್ಯ ಹೊಂಗನೂರು ಸೇರಿದಂತೆ ಇತರರು ಇದ್ದರು