
ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ 2026 ಅಂಗವಾಗಿ ಶುಕ್ರವಾರ ನಗರದಲ್ಲಿ ಪಾರಂಪರಿಕ ಸೈಕಲ್ ಸವಾರಿ ನಡೆಯಿತು. ನಗರದ ರಂಗಾಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಖ್ಯಾತ ಟ್ರೆöÊಕಿಂಗ್ ಸಾಧಕಿ ಪ್ರೀತಿ ಅಪ್ಪಯ್ಯ ಚಾಲನೆ ನೀಡಿದರು.
ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಆಯುಕ್ತ ಡಾ.ಪಿ.ಶಿವರಾಜ್ ಸೇರಿದಂತೆ ಅಧಿಕಾರಿಗಳು ಸೈಕಲ್ ಸವಾರಿ ನಡೆಸುವ ಮೂಲಕ ಭಾಗವಹಿಸಿದ್ದವರಿಗೆ ಸಾಥ್ ನೀಡಿದರು.
ಕರ್ನಾಟಕ ರಾಜ್ಯವು ಸುಸಂಸ್ಕöÈತ ಹಾಗೂ ಪರಂಪರೆಗೆ ಹೆಸರಾದ ರಾಜ್ಯವಾಗಿದ್ದು, ಮೈಸೂರು ಜಿಲ್ಲೆಯು ಸಾಂಸ್ಕöÈತಿಕ ರಾಜಧಾನಿಯಾಗಿ ಮಾತ್ರವಲ್ಲದೆ ಸ್ವರ್ಗ ಸದೃಶ್ಯವಾದ ಇತಿಹಾಸ ವಿದೆ ಆದರಿಂದ ನಮ್ಮ ಸಂಸ್ಕöÈತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಹಿರಿಯ ನ್ಯಾಯಾಧೀಶರಾದ ನಾಗರಾಜ್ ಸಿದ್ದಪ್ಪ ಅಂಕಸದೊಡ್ಡಿ ಮಾತನಾಡಿ, ದಿನನಿತ್ಯದ ಕೆಲಸಗಳಿಗೆ ಸೈಕಲ್ ಬಳಸುವುದರಿಂದ ಪರಿಸರ ಸಂರಕ್ಷಣೆ ಮಾತ್ರವಲ್ಲದೆ, ಹೃದಯದ ಬಡಿತ ಸೇರಿದಂತೆ ನಮ್ಮ ಆರೋಗ್ಯವು ಉತ್ತಮಗೊಳ್ಳುತ್ತದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮತ್ತು ಪ್ರತಿಯೊಬ್ಬ ನಾಗರಿಕರು ನಮ್ಮ ಸ್ಮಾರಕಗಳು ಹಾಗೂ ಪ್ರಾಚೀನ ಕಟ್ಟಡಗಳನ್ನು ಸಂರಕ್ಷಿಸುವುದು ಕರ್ತವ್ಯವಾಗಿದೆ ಎಂದರು. ಪಾರಂಪರಿಕ ಕಟ್ಟಡಗಳನ್ನು ವಿರೂಪಗೊಳಿಸುವುದು ಅಥವಾ ಹಾಳುಮಾಡುವುದು ಅಪರಾಧವಾಗಿದ್ದು, ಅವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಪ್ರೊಫೆಸರ್ ಡಾ.ಎನ್.ಎಸ್.ರಂಗರಾಜು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ತರು ಡಾ.ಶಲ್ಪಪಿಳ್ಳೆ ಅಯ್ಯಂಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.