Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅರಮನೆ ನಗರಿ ಮೈಸೂರಿನಲ್ಲಿ ರೈತರ ಮೆರವಣಿಗೆ; ರೈತ ದಸರಾಗೆ ಅದ್ದೂರಿ ಚಾಲನೆ


ಮೈಸೂರು: ನಾಡ ಹಬ್ಬ ಮೈಸೂರು ದಸರಾದ 6 ನೇ ದಿನವಾದ ಶುಕ್ರವಾರ ರೈತ ದಸರಾ ಅದ್ಧೂರಿಯಾಗಿ ನಡೆಯಿತು. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರೈತ ದಸರಾ ಮೆರವಣಿಗೆಗೆ ಕೃಷಿ ಸಚಿವರಾದ ಪಿ.ಎಂ ನರೇಂದ್ರ ಸ್ವಾಮಿ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮೆರವಣಿಗೆಯಲ್ಲಿ ವಿವಿಧ ತಳಿಯ ರಾಸುಗಳು, ಬಂಡೂರು ಕುರಿ, ಪೂಜಾ ಕುಣಿತ, ಡೊಳ್ಳು ಕುಣಿತ, ಕೊಡವ ರೈತರ ನೃತ್ಯ, ಎತ್ತಿನ ಗಾಡಿಗಳು, ಕೃಷಿ ಯಂತ್ರಗಳು ಸೇರಿದಂತೆ ಹಲವಾರು ರೈತರು ಉಡುಗೆ ತೊಡುಗೆ ತೊಟ್ಟು ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ಕೋಟೆ ಆಂಜನೇಯಸ್ವಾಮಿ ದೇವಸ್ಥಾದಿಂದ ಜೆ.ಕೆ.ಗ್ರೌಂಡ್ ಆವರಣದವರೆಗೂ ಸಾಗಿತು.
ನಗರದ ಜೆ.ಕೆ ಗ್ರೌಂಡ್ ಆವರಣದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಎಷ್ಟೇ ಮುಂದುವರಿದ ದೇಶವಾದರೂ ಕೃಷಿ ನಿರ್ಲಕ್ಷಿಸಿದರೆ, ಆ ದೇಶ ಅಭಿವೃದ್ಧಿ ಹೊಂದುವುದಿಲ್ಲ ಏಕೆಂದರೆ ಮಾನವ ಸಂಕುಲ ಬದುಕಬೇಕೆಂದರೆ ಆಹಾರ ಬೇಕು ಹಾಗಾಗಿ ರೈತನೇ ನಾಡಿನ ಜೀವಾಳ ಎಂದು ಹೇಳಿದರು.
ನಮ್ಮ ದೇಶದಲ್ಲಿ ಶೇ.46% ರಷ್ಟು ಉದ್ಯೋಗ ಸೃಷ್ಟಿಯಾಗುವುದೇ ಕೃಷಿ ವಲಯದಲ್ಲಿ ಭಾರತದಲ್ಲಿ ಈಗಲೂ ಹಳ್ಳಿಗಳೇ ಹೆಚ್ಚಾಗಿವೆ ಇದರಿಂದಲೇ ಕೃಷಿ ವಲಯ ಇನ್ನೂ ಗಟ್ಟಿಯಾಗಿದೆ ಎಂದರು.
ಬರದ ಪರಿಸ್ಥಿತಿಯಲ್ಲೂ ರೈತರಿಗೆ ನಮ್ಮ ಸರಕಾರ ನೆರವಾಗಿದೆ ಈಗಾಗಲೇ 1250 ಕೋಟಿ ರೂ. ಪರಿಹಾರ ಘೋಷಣೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ಸಹಕಾರ ನೀಡಿದರೆ, ಕೃಷಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ, ಹಾಗಾಗಿ ರೈತರು ಭಯ ಪಡುವ ಅಗತ್ಯವಿಲ್ಲ. ನೀವು ನಿಜವಾದ ಕಾಯಕ ಯೋಗಿ, ಎಲ್ಲರೂ ದಸರಾದಲ್ಲಿ ಭಾಗವಹಿಸಿ ಸಂಭ್ರಮಿಸಿ ಎಂದು ಶುಭಕೋರಿದರು.
ಕೃಷಿ ಸಚಿವ ಎಂ.ಪಿ ನರೇಂದ್ರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ಮಧ್ಯೆಯೂ ರೈತ ದಸರಾವನ್ನು ವಿಜೃಂಭಣೆಯಿAದ ಮಾಡುತ್ತಿದ್ದೇವೆ. ಏಕೆಂದರೆ ಇದು ರೈತರ ಬೆವರಿನ ಪ್ರತಿಫಲದ ಸಂಭ್ರಮ. ಹಾಗಾಗಿ ಬರವಿದೆ ಎಂದು ಭಯಪಡಬೇಡಿ, ನಮ್ಮ ಸರಕಾರ ನಿಮ್ಮ ಜೊತೆ ಇರಲಿದೆ. ಈಗಾಗಲೇ ಮೊದಲ ಹಂತದ ಬರ ಪರಿಹಾರ ನೀಡಿದ್ದೇವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ನೀಡಲಿದ್ದೇವೆ ಎಂದು ಹೇಳಿದರು.
ಬರದ ಸಂಕಷ್ಟದಲ್ಲಿರುವ ರೈತರಿಗಾಗಿ ಈಗಾಗಲೇ ನೇಗಿಲಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಿಲ್ಲೆಗೆ 2 ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿದ್ದು, ಮುಂದಿನ ವರ್ಷ ಎಲ್ಲಾ ತಾಲ್ಲೂಕುಗಳಲ್ಲೂ ಜಾರಿಯಾಗಲಿದೆ. ಈ ಯೋಜನೆಯಿಂದ 3 ಎಕರೆ ಒಳಗಡೆ ಕೃಷಿ ಭೂಮಿ ಹೊಂದಿರುವ ರೈತರಿಗೆ ನೆರವಾಗಲಿದೆ. ಹಾಗೂ ಬರದಲ್ಲಿ ಅಲ್ಪಾವಧಿ ಬೆಳೆಗಳ ಬೀಜೋತ್ಪಾದನೆ ಸಂಶೋಧನೆಗಾಗಿ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಮಾಡಿಸಲಾಗುತ್ತಿದೆ. ಆಧುನಿಕ ಕೃಷಿ ಪದ್ದತಿಯಿಂದ ಬದಲಾವಣೆ ತರುವುದು ನನ್ನ ಉದ್ದೇಶ ಎಂದು ಹೇಳಿದರು.
ರೈತರಿಗೆ ಸನ್ಮಾನ : ಈ ವೇಳೆ ಹೊನ್ನಾರು ಸ್ಮರಣೆ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಜಿಲ್ಲೆಯಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಶ್ರೇಷ್ಠ ಕೃಷಿಕ ರೈತ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಪ್ರಗತಿಪರ ರೈತ ಮಹಿಳೆಯರಿಗೆ ಸೇರಿ ಒಟ್ಟು 10 ರೈತರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಸಿ. ಪುಟ್ಟರಂಗಶೆಟ್ಟಿ, ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಸಚಿವ ಬಸವಂತಪ್ಪ, ಅಬಕಾರಿ ಸಚಿವ ಕೆ.ಎಂ ಶಿವಲಿಂಗೇಗೌಡ, ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ, ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷಿ÷್ಮಕಾಂತ ರೆಡ್ಡಿ, ಕೃಷಿ ಇಲಾಖೆ ಆಯುಕ್ತ ಸತೀಶ್, ರೈತ ದಸರಾ ಉಪಸಮಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು ಇದ್ದರು.