ಗಾಯಕ ಶಾನ್ ಹಾಡಿಗೆ ಕುಣಿದು ಸಂಭ್ರಮಿಸಿದ ಸಂಗೀತ ಪ್ರಿಯರು
ಹಾಡಿ, ಕುಣಿದು, ಕುಣಿಸಿ ಸಂಭ್ರಮಿಸಿದ ಗಾಯಕ ಶಾನ್ ಮೈಸೂರು; ಕುಡಿನೋಟವೆ ಮನಮೋಹಕ…ಚಾರ್ ಕದಮ್ ಬಸ್ ಚಾರ್ ಕದಮ್… ಕನ್ನಡ, ಹಿಂದೆ ಚಿತ್ರಗೀತೆಗಳನ್ನು ಹಾಡಿ, ಕುಣಿದು ಗಾಯಕ ಶಾನ್ ಅವರು ಪ್ರೇಕ್ಷಕರನ್ನು ತಮ್ಮೊಂದಿಗೆ ಕುಣಿಸಿ ಸಂಭ್ರಮಿಸುವಂತೆ ಮಾಡಿದರು. ದಸರಾ ಮಹೋತ್ಸವ ಅಂಗವಾಗಿ ಶನಿವಾರ ಅರಮನೆ ಆವರಣದಲ್ಲಿ ನಡೆದ “ಮುಂಬೈ ಶಾನ್ ಮತ್ತು ತಂಡ”ದವರ ಸಂಗೀತ ಸಂಜೆ ಕಾರ್ಯಕ್ರಮವು ಸಂಗೀತ ರಸಿಕರನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿತು. ಹುಡುಗಾಟ ಸಿನಿಮಾದ ಏನೋ ಒಂಥರಾ, ಏನೋ ಒಂಥರಾ… ಮಾಣಿಕ್ಯ ಸಿನಿಮಾದ ಜೀನಾ…