
ಮೈಸೂರು; ನಗರದ ಬನ್ನಿಮಂಟಪದಲ್ಲಿ ಅ.18 ಮತ್ತು 19 ರಂದು ಏರ್ ಶೋ ಆಯೋಜಿಸಲಾಗಿದ್ದು, ಈ ಹಿನ್ನಲೆಯಲ್ಲಿ ಶನಿವಾರ ಏರ್ ಶೋ ತಾಲೀಮು ಸೂರ್ಯಕಿರಣ್ ತಂಡದಿAದ ನಡೆಯಿತು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬನ್ನಿಮಂಟಪದ ಆಕಾಶಕ್ಕೆ ಬಂದ ನಾಲ್ಕು ಸೂರ್ಯಕಿರಣ್ ಜೆಟ್‌ಗಳು ವಿವಿಧ ಬಗೆಯ ಪ್ರರ್ದಶನ ನಡೆಸಿ, ನೋಡುಗರ ಮೈ ರೋಮಾಂಚನಗೊಳಿಸಿದವು.
ಕೆಲಹೊತ್ತು ವಿವಿಧ ಪ್ರದರ್ಶನದ ತಾಲೀಮನ್ನು ಯಶಸ್ವಿಯಾಗಿ ನಡೆಸಿದ ಸೂರ್ಯಕಿರಣ್ ಅಕ್ರೋಬ್ಯಾಟಿಕ್ಸ್ ತಂಡದಿAದ ಅ.18 ಮತ್ತು 19 ರಂದು ಅಧಿಕೃತವಾಗಿ ಏರ್ ಶೋ ನಡೆಸಲಿದ್ದು, ಬಾನಂಗಳದಲ್ಲಿ ತಮ್ಮ ಚಮತ್ಕಾರವನ್ನು ಪ್ರದರ್ಶಿಸಲಿವೆ.
