Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೋಷಿಯಲ್ ಮಿಡಿಯಾ ಎನ್ನುವ ರಾಕ್ಷಸ ಕವಿಗಳನ್ನು ಉರಿದು ಮುಕ್ಕಿ, ಚಿಂದಿ ಚಿತ್ರಾನ್ನ ಮಾಡುಬಿಡುತ್ತಿದೆ !


*ಪ್ರಧಾನ ಕವಿಗೋಷ್ಠಿಯಲ್ಲಿ ಹಲವು ಕವಿಗಳಿಂದ ಕವನ ವಾಚನ
ಮೈಸೂರು:
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ 7 ನೇ ದಿನವಾದ ಶನಿವಾರ ನಗರದ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ನಡೆದ “ಪ್ರಧಾನ” ಕವಿಗೋಷ್ಠಿಯಲ್ಲಿ ಕವಿಗಳು ತಾವು ರಚಿಸಿ ತಂದಿದ್ದ ಕವನಗಳನ್ನು ವಾಚಿಸಿದರು.
ಡಾ.ಮಾನಸ ಕೀಳಂಬಿ ಅವರು ವಾಚಿಸಿದ ದ್ವೀಪಗಳಾಗಿರುವವರನ್ನ ದೀಪವನ್ನಾಗಿ ಮಾಡುವರಾರು, ಚಂದ್ರಶೇಖರಯ್ಯ ವಾಚಿಸಿದ ಬಿಳಿಗಿರಿ ರಂಗನ ಲೀಲಾ ಪ್ರಸಂಗ, ಕೃಷ್ಣ ಜನಮನ ವಾಚಿಸಿದ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯವರ ಕುರಿತ ಸಮಾನತೆಯ ಕವಿತೆ, ಐತಿಚಂಡ ರಮೇಶ್ ಉತ್ತಮ ವಾಚಿಸಿದ ಮಹಿಷಾಸುರ ಹಾಗೂ ಚಾಮುಂಡೇಶ್ವರಿ ಕುರಿತ ಕವನ ಹಾಗೂ ಪ್ರಭು ಚನ್ನಬಸಪ್ಪ ಸ್ವಾಮೀಜಿ ವಾಚಿಸಿದ ದೇವರೆಲ್ಲಿದ್ದಾನೆ ಕವನ ಎಲ್ಲರ ಗಮನ ಸೆಳೆಯಿತು.
ಪ್ರಧಾನ ಕವಿತೆ ವಾಚಿಸಿದವರು: ಅಮರೇಶ್ ಕುಂಬಾರ, ಅಶ್ವಿನಿ ಜಿ.ಮಂಡ್ಯ, ಆರ್ ಜಿ ಹಳ್ಳಿ ನಾಗಾರಾಜ, ಇಸ್ಮಾಯಿಲ್ ಸಾಹೇಬ್ ಯಲಿಗಾರ, ಉಗಮ ಶ್ರೀನಿವಾಸ್, ಐತಿಚಂಡ ರಮೇಶ್ ಉತ್ತಪ್ಪ, ಕೃಷ್ಣ ಜನಮನ, ಎಸ್ಕೆ.ಕೊನೆಸಾಗರ, ಚಂದ್ರಶೇಖರ ವಸ್ರದ, ಚಂದ್ರಶೇಖರಯ್ಯ, ಡಾ. ಜಯದೇವಿ ಗಾಯಕ್ವಾಡ್, ಡಾ.ಜಾಜಿ ದೇವೆಂದ್ರಪ್ಪ, ಮಹದೇವನಾಯಕ, ಡಾ.ಮಾನಸ ಕೀಳಂಬಿ, ಮಂಜುಳಾ ಶಿವಾನಂದ, ಕೆ.ನರಸಿಂಹ ಮೂರ್ತಿ, ಪ್ರಮೀಳ ಮಹದೇವ, ಬಸವರಾಜ ಜಲವಾದಿ, ಭೇರ್ಯ ರಾಮಕುಮಾರ್, ಯಲ್ಲಪ್ಪ, ಡಾ.ಎಸ್ ಪಿ ಯೋಗಣ್ಣ, ಪ್ರಭು ಚನ್ನಬಸವ ಸ್ವಾಮೀಜಿ, ಶ್ರೀದೇವಿ ಕೆರೆಮನೆ, ಶೋಭಾ ಶಂಕರಾನAದ, ಶಂಕರ ಅಂಕನಶೆಟ್ಟಿಪುರ, ಸತೀಶ್ ಜವರೇಗೌಡ, ಸತ್ಯನಾರಾಯಣ ಹಾಗೂ ಲವಕುಮಾರ್ ವಿವಿಧ ಕವಿತೆಗಳನ್ನು ವಾಚಿಸಿದರು.
ಪ್ರಧಾನ ಕವಿಗೋಷ್ಠಿಯನ್ನು ಉದ್ಘಾಟಿಸಿದ ಹಿರಿಯ ಕವಯತ್ರಿ ಡಾ.ಪ್ರತಿಭಾ ನಂದಕುಮಾರ್ ಮಾತನಾಡಿ, ಹಿಂದೆ ದ್ವನಿ ಇಲ್ಲದವರ ಪರವಾಗಿ ದ್ವನಿ ಇದ್ದವರು ಬರೆಯುತ್ತಿದ್ದರು. ಆದರೆ, ಈಗ ಎಲ್ಲರೂ ತಮ್ಮ ದ್ವನಿಗಳನ್ನು ತಾವೇ ಕಂಡುಕೊAಡಿದ್ದಾರೆ. ಇದರಿಂದ ಕನ್ನಡ ಕಾವ್ಯ ಜಗತ್ತು ವೈವಿದ್ಯತೆಯಿಂದ ಅತ್ಯಂತ ಶ್ರೀಮಂತವಾಗಿದೆ ಎಂದು ಹೇಳಿದರು.
ಇವತ್ತಿನ ಕವಿಗಳು ಏನನ್ನೂ ಕುರಿತು ಬರೆಯುತ್ತಿದ್ದಾರೆ ಎನ್ನುವುದಕ್ಕಿಂತ ಯಾಕೆ ಬರೆಯುತ್ತಿದ್ದಾರೆ. ಯಾರ ಅನುಭವಗಳು ಕಾವ್ಯಾಭಿ ವ್ಯಕ್ತಿಯ ಸರಕಾಗಿವೆ. ಕಾವ್ಯ ಇಂದು ಸಮಾಜದೊಂದಿಗೆ ಹೊಂದಿರುವ ಸಂಬAದ ಏನೂ ಎಂಬ ಪ್ರಶ್ನೆಗಳು ಕಾಡುತ್ತವೆ ಎಂದು ಹೇಳಿದರು.
ಈಗ ಎಲ್ಲರ ಕೈ ಬೆರಳ ತುದಿಯಲ್ಲಿರುವ ಸೋಷಿಯಲ್ ಮಿಡಿಯಾ ಎನ್ನುವ ರಾಕ್ಷಸ ಕವಿಗಳನ್ನು ಉರಿದು ಮುಕ್ಕಿ ಚಿಂದಿ ಚಿತ್ರಾನ್ನ ಮಾಡುಬಿಡುತ್ತಿದೆ. ಇವತ್ತಿನ ಕಾವ್ಯ ಸಂದರ್ಭದಲ್ಲಿ ಕಾವ್ಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ ಎಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ಹಿರಿಯ ಕವಿ ಹಾಗೂ ಸಂಸ್ಕöÈತ ಚಿಂತಕರಾದ ಸುಬ್ಬು ಹೊಲೆಯಾರ್ ಮಾತನಾಡಿ, ಕವಿಗೋಷ್ಠಿಯನ್ನು ಜನಕಾವ್ಯ ಗೋಷ್ಠಿ ಎಂದು ನಾನು ಪರಿಗಣಿಸುತ್ತೇನೆ ಏಕೆಂದರೆ ಕವಿತೆಯಲ್ಲಿ ಜನರ ಬದುಕು ಜೀವವಾಗಿರುತ್ತದೆ, ಕಲೆಯ ವಿವಿಧ ಪ್ರಕಾರಗಳಲ್ಲಿ ಕಾವ್ಯಕ್ಕೆ ಹೆಚ್ಚಿನ ಮಹತ್ವ ಅದನ್ನು ಕವಿಗಳು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ಸಂವಿಧಾನ ಜಾರಿಯಾದ ಮೇಲೆ ಮಹಿಳೆಯರಿಗೆ ಸ್ವಲ್ಪ ಸ್ಥಾನ ಮಾನ ಸಿಕ್ಕಿದೆ ಆದರೂ ಈ ದೇಶದಲ್ಲಿ ಅಸ್ಪಶ್ಯತೆ, ಅಸಮಾನತೆ, ಜಾತಿ, ಧರ್ಮಗಳ ಕುರಿತು ಬೇಸರ ವ್ಯಕ್ತಪಡಿಸಿದ ಅವರು ಹಲವು ಉದಾಹರಣೆಗಳೊಂದಿಗೆ ವಿವರಿಸಿದರು, ಈ ಕುರಿತು ಪ್ರಬುದ್ಧ ಭಾರತ ಸಮಾನತೆಯ ಭಾರತ ನಿರ್ಮಿಸಲು ಕವನಗಳ ಮೂಲಕ ಮುಂದಿನ ಪೀಳಿಗೆಗೆ ಸಮಾನತೆಯ ದಾರಿ ತೋರಿಸಬೇಕು ಎಂದು ಹೇಳಿದರು.
ಪ್ರಖ್ಯಾತ ಹಿರಿಯ ಕವಿ ಡಾ.ಅಲ್ಲಮಪ್ರಭು ಬೆಟ್ಟದೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಹಾಗೂ ದಸರಾ ಕವಿಗೋಷ್ಠಿ ಕಾರ್ಯಾಧ್ಯಕ್ಷ ಪ್ರೊ.ಎಂ.ನAಜಯ್ಯ ಹೊಂಗನೂರು ಸೇರಿದಂತೆ ಇತರರು ಇದ್ದರು.