
ಮೈಸೂರು; ಇಲ್ಲಿನ ಸಿದ್ಧಾರ್ಥನಗರದಲ್ಲಿರುವ ಕಾವ ಕಾಲೇಜಿನಲ್ಲಿ ದಸರಾ ಲಲಿತ ಕಲೆ ಹಾಗೂ ಕರಕುಶಲ ಉಪಸಮಿತಿ ಹಾಗೂ ಕಾವ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಲಾ ಜಾತ್ರೆಯನ್ನು ಆಯೋಜಿಸಲಾಗಿತ್ತು. ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ರವರು ಚಾಲನೆ ನೀಡಿದರು. ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಟ್ ಸಾಥ್ ನೀಡಿದರು. ಬಳಿಕ ಕಲಾವಿದರ ಕುಂಚದಲ್ಲಿ ಮೂಡಿ ಬಂದಿರುವ ಕಲಾಕೃತಿಗಳನ್ನು ವೀಕ್ಷಿಸಿದರು.
ಈ ಕಲಾ ಜಾತ್ರೆಯಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ 80ಕ್ಕೂ ಹೆಚ್ಚು ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಮಾರಾಟಕ್ಕೆ ಇಡಲಾಗಿತ್ತು.
ಚಿತ್ರಕಲೆ, ಶಿಲ್ಪ ಕಲೆ, ಗ್ರಾಫಿಕ್ಸ್ ಕಲೆ, ಕರಕುಶಲ ಕಲೆ ಹಾಗೂ ಇನ್ನಿತರ ಮಾಧ್ಯಮದ ಪ್ರಕಾರಗಳ ನೂರಾರು ಕಲಾ ಕೃತಿಗಳು ನೋಡಗರ ಗಮನ ಸೆಳೆದವು
ಕಲಾವಿದನ ಕಲ್ಪನೆ ಹಾಗೂ ಕೈಚಳಕದಲ್ಲಿ ಮೂಡಿ ಬಂದಿದ್ದ ಒಂದೊAದು ಕಲಾ ಕೃತಿಗಳು ನೋಡುಗರ ಕಣ್ಮನ ತಣಿಸಿದವು.
ಕಲಾ ಜಾತ್ರೆಗೆ ಚಾಲನೆ ನೀಡಿದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಮೈಸೂರಿನ ಕಲಾವಿದರಿಗೆ ವರ್ಷಪೂರ್ತಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಶಾಶ್ವತ ಕಲಾ ಕೇಂದ್ರ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ದಸರಾ ಹಾಗೂ ಸಾಂಸ್ಕöÈತಿಕ ಪರಂಪರೆಯಲ್ಲಿ ಕಲಾವಿದರ ಕೊಡುಗೆ ಅಪಾರವಾಗಿದೆ. ಕಲಾವಿದರ ಕಲೆಗಳು ಕೇವಲ ಕೆಲ ದಿನಗಳ ಕಾರ್ಯಕ್ರಮಕ್ಕೆ ಸೀಮಿತವಾಗದೆ, ವರ್ಷವಿಡೀ ಅವಕಾಶ ಕಲ್ಪಿಸಬೇಕು. ಹವ್ಯಾಸಿ ಕಲಾವಿದರಿಗೆ ತರಬೇತಿ ಹಾಗೂ ಕಲಾ ತರಗತಿಗಳನ್ನು ಆಯೋಜಿಸಲು ಅವಕಾಶ ನೀಡಬೇಕು. ಪ್ರವಾಸಿಗರು ಕಲಾಕೃತಿಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅನುಕೂಲವಾಗುವ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ಹಿಂದಿನ ಮೈಸೂರು ಮಹಾರಾಜರು ಕಲಾವಿದರಿಗೆ ನೀಡಿದ ಆಶ್ರಯದಂತೆ ಇಂದಿನ ಸರ್ಕಾರವೂ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಮೈಸೂರಿನ ಕಲಾ ಪರಂಪರೆಯ ಉಳಿವು ಹಾಗೂ ಕಲಾವಿದರ ಬದುಕಿಗೆ ಸರ್ಕಾರ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಾತನಾಡಿದ ಶಾಸಕ ತನ್ವೀರ್ ಸೇಠ್, ಕಳೆದ ವರ್ಷದಿಂದ ಆರಂಭವಾದ ಕಲಾ ಜಾತ್ರೆಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಪಾಲ್ಗೊಂಡಿದ್ದಾರೆ. ಕಾವಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕಲೆ ಮತ್ತು ಸಂಸ್ಕöÈತಿಯ ಪೋಷಣೆಗೆ ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಕಾವಾ ಸಂಸ್ಥೆಗೆ ಪ್ರತಿವರ್ಷ ಶಾಶ್ವತ ಮಳಿಗೆ ಮೀಸಲಿಡಬೇಕು. ಹಳೆಯ ವಿದ್ಯಾರ್ಥಿಗಳ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲೂ ಕಲಾಕೃತಿಗಳ ಮಾರಾಟಕ್ಕೆ ವೇದಿಕೆ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ಕಲಾವಿದರು ತಮ್ಮ ಚಿತ್ರಗಳನ್ನು ಫ್ರಿಜ್ ಮ್ಯಾಗ್ನೆಟ್, ಕೀಚೈನ್ ಸೇರಿದಂತೆ ವಿವಿಧ ಉತ್ಪನ್ನಗಳ ರೂಪದಲ್ಲಿ ಸಿದ್ಧಪಡಿಸುತ್ತಿರುವುದು ಸಂತಸದ ವಿಚಾರ. ಕೈಗಾರಿಕೋದ್ಯಮಿಗಳು ನೀಡುವ ಉಡುಗೊರೆಗಳಲ್ಲಿ ಕಲಾವಿದರ ಉತ್ಪನ್ನಗಳಿಗೂ ಆದ್ಯತೆ ನೀಡುವಂತೆ ಪ್ರೋತ್ಸಾಹಿಸಬೇಕು, ಅಲ್ಲದೆ ಕಲಾವಿದರ ಆದಾಯ ಹೆಚ್ಚಿಸಲು ಸರ್ಕಾರ ಸೂಕ್ತ ನೀತಿ ರೂಪಿಸಬೇಕು ಎಂದು ಸಲಹೆ ನೀಡಿದರು
ಇದೇ ಸಂದರ್ಭ ನಿಕಟಪೂರ್ವ ಕಾವಾ ಡೀನ್ ದೇವರಾಜು ಕಾವಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಪ್ರಸಾದ್ ಆರ್ ಎಚ್, ಉಪಾಧ್ಯಕ್ಷ ಮಧುಸೂದನ್ ಎಸ್ಆರ್, ಕಾರ್ಯದರ್ಶಿ ಸೂರ್ಯ, ಖಜಾಂಚಿ ಹರೀಶ್ ಗಂಗಾಧರ ಹೆಗಡೆ, ನಿರ್ದೇಶಕರಾದ ರಮೇಶ್, ಶ್ವೇತಾ, ಇನ್ಷಾ ಉಮ್ಮೆಹಾನಿ., ಸೈಯದ್ ಮುಜಾಯಿದ್ ಹಾಗೂ ಪವನ್ ಹಾಜರಿದ್ದರು.