3,473 ಡ್ರೋನ್ಗಳಿಂದ ಆಗಸದಲ್ಲಿ ಅರಳಿನಿಂತ ನವಿಲು ಪಕ್ಷಿಯ ವಿನ್ಯಾಸಕ್ಕೆ ಗಿನ್ನಿಸ್ ದಾಖಲೆಯ ಗರಿ
*ಎರಡನೇ ದಿನವೂ ಜನಮನಗೆದ್ದ ಡ್ರೋಣ್ ಪ್ರದರ್ಶನಮೈಸೂರು; ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ವತಿಯಿಂದ ಭಾನುವಾರ ನಡೆಸಿದ ಡ್ರೋನ್ ಪ್ರದರ್ಶನ ಮತ್ತೊಮ್ಮೆ ಜಾಗತಿಕ ದಾಖಲೆ ನಿರ್ಮಿಸುವ ಮೂಲಕ ಗಮನ ಸೆಳೆದಿದೆ. ಕಳೆದ ವರ್ಷ ಡ್ರೋನ್ಗಳ ಮೂಲಕ ಹುಲಿಯ ಚಿತ್ರವನ್ನು ರಚಿಸಿ ಗಿನ್ನಿಸ್ ದಾಖಲೆ ಬರೆದಿದ್ದ ಸೆಸ್ಕ್, ಈ ಬಾರಿ 3,473 ಡ್ರೋನ್ಗಳ ಮೂಲಕ ಪಕ್ಷಿ(ನವಿಲು)ಯ ವಿನ್ಯಾಸ ಮೂಡಿಸುವ ಮೂಲಕ ಮತ್ತೊಂದು ಗಿನ್ನಿಸ್ ದಾಖಲೆಯ ಗರಿಯನ್ನು ತನ್ನ ಮುಕುಟಕ್ಕೆ…