Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕೆ.ಆರ್.ನಗರದಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ


ಕೆ.ಆರ್.ನಗರ; ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸತತ ಮಳೆಯಿಂದ ಕೃಷಿಕ ವರ್ಗ ಒಂದೆಡೆ ಸಂತಸÀಗೊAಡಿದ್ದರೆ, ಮತ್ತೊಂದೆಡೆ ಅದೇಕೃಷಿಕ ವರ್ಗ ಸಂಕಟಪಡುವAತೆ ಮಾಡಿದೆ.
ಇಡೀ ರಾತ್ರಿ ಸುರಿದ ಮಳೆ ಭಾನುವಾರ ಬೆಳಿಗ್ಗೆ 8ಗಂಟೆಯವರೆವಿಗೂ ಎಡೆಬಿಡದೆ ಸುರಿದ ಕಾರಣ ಪಟ್ಟಣದ ಹಲವೆಡೆ ಎಲ್ಲೆಂದರಲ್ಲಿ ನೀರಿನ ಹೊಂಡ ನಿರ್ಮಾಣವಾಗಿದ್ದು ಪಟ್ಟಣದಲ್ಲಿ ತುಂಬಿದ್ದ ಕೊಳೆ ಹೊರಹೋಗುವಂತಾಯಿತು.
ಮಳೆಯಿಂದ ಒಂದೆ ಕೃಷಿಕವರ್ಗ ಹೊಲಗಳಲ್ಲಿ ಬೆಳದಿರುವ ಜೋಳ, ರಾಗಿ ಇನ್ನಿತರೆ ಬೆಳೆಗಳಿಗೆ ಹಾಗೂ ಒಂದಷ್ಟು ಮೇವಿಗೆ ಸಹಕಾರಿಯಾಯಿತು ಎಂದು ಸಂತಸಪಡುವಾಗಲೇ ಈಗಾಗಲೆ ಗದ್ದೆಗಳಲ್ಲಿ ಹೊಡೆ ಕಡೆಯುತ್ತಿರುವ ಭತ್ತದ ಕೃಷಿಗೆ ಮಳೆಯಿಂದ ತೊಂದರೆಯಾಗುವುದರಿAದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಈ ನಡುವೆ ಕೆಲವು ಗ್ರಾಮಗಳಲ್ಲಿ ಕುಡಿಯುವನೀರಿಗೂ ಅಭಾವ ಎದುರಾಗಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿಹೋಗಿ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಕೆರೆಕಟ್ಟೆಗಳಲ್ಲಿ ನೀರು ನಿಂತು ಒಂದಷ್ಟು ನೀರಿನ ಶೇಖರಣೆಗೆ ಅವಕಾಶವಾಗಿರುವುದು ನಿಟ್ಟುಸಿರುಬಿಡುವಂತೆ ಮಾಡಿದೆ.
ಈ ನಡುವೆ ಸತತ ಮಳೆಯಿಂದ ಪಟ್ಟಣದ ಎಲ್ಲೆಡೆ ರಸ್ತೆಗಳಲ್ಲಿ ನೀರುನಿಂತು ಸಾರ್ವಜನಿಕರ ಸುಗಮಸಂಚಾರಕ್ಕೆ ಅಡಚಣೆಯಾಯಿತಲ್ಲದೆ ಹಾಸನ-ಮೈಸೂರು ರಾಷ್ಟಿçÃಯ ಹೆದ್ದಾರಿಯಲ್ಲಿರುವ ಪುರಸಭೆ ಮುಂದೆ ದಿನಗಟ್ಟಲೆ ನೀರುನಿಂತು ದೊಡ್ಡ ಕೆರೆನಿರ್ಮಾಣವಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ಸವಾರರು ಕೆಸರಿನ ಸ್ನಾನ ಮಾಡಿ ಮುಂದೆ ಸಾಗಬೇಕಾಯಿತು.
ಪೋಟೋ-2-ಕೆ.ಆರ್.ನಗರ ಪಟ್ಟಣದ ಪುರಸಭೆ ಮುಂದಿರುವ ರಾಷ್ಟಿçÃಯ ಹೆದ್ದಾರಿಯಲ್ಲಿ ಕೆರೆ ನಿರ್ಮಾಣವಾಗಿ ಜನತೆ ಕೆಸರಿನ ಸ್ನಾನ ಮಾಡಿಯೇ ಸಾಗುವಂತಾಯಿತು.