Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಕಂಬಳದಲ್ಲಿ ಕೋಣಗಳ ಓಟ ಸ್ಪರ್ಧೆಗೆ ಚಾಲನೆ ; ಕಂಬಳ ಕ್ರೀಡೆಯಲ್ಲಿ 150 ಜೋಡಿ ಕೋಣಗಳು ಭಾಗಿ


ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಗರದ ಸಾತಗಳ್ಳಿ ವಿಟಿಯು ಕಾಲೇಜು ಸಮೀಪದ ವಿಶಾಲವಾದ ಆವರಣದಲ್ಲಿ ದಸರಾ ಕಂಬಳ ಉಪಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ದಸರಾ ಕಂಬಳ ಭಾನುವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆಗೊಂಡಿತು.
ಕರಾವಳಿ ಭಾಗದ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಕರೆಯನ್ನು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಉದ್ಘಾಟಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿ,ಕಂಬಳ ಕರಾವಳಿ ಪ್ರದೇಶದ ಗ್ರಾಮೀಣ ಜನಪ್ರಿಯ ಜಾನಪದ ಕ್ರೀಡೆಯಾಗಿದೆ. ಆ ಭಾಗದ ಕ್ರೀಡೆಯು ಆ ಭಾಗಕ್ಕೆ ಮಾತ್ರವೇ ಸೀಮಿತವಾಗಬಾರದು. ಈ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮೂಲಕ ಕಂಬಳ ಪ್ರಸಿದ್ಧಿ ಹೆಚ್ಚಬೇಕು. ಎಲ್ಲೆಡೆ ಜನರು ನೋಡುವಂತ್ತಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕAಬಳಕ್ಕೆ ಕೊಣಗಳನ್ನು ಕರೆ ತರಲು ಒಂದು ಜೋಡಿಗೆ ಸುಮಾರು ಐದು ಲಕ್ಷ ರೂ ವೆಚ್ಚ ತಗುಲಲಿದೆ. ಕೋಣಗಳ ನಿರ್ವಹಣೆಗೆ ಪೌಷ್ಟಿಕ ಆಹಾರ, ವೈದ್ಯಕೀಯ ಸೇರಿದಂತೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಪ್ಲಾಸ್ಟಿಕ್ ಫ್ರೀ ಕಂಬಳ ಆಯೋಜನೆಗೆ ನಿರ್ಧಾರ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ನಿಂದ ಹಿಡಿದು ಎಲ್ಲಾ ರೀತಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಕರಾವಳಿ ಭಾಗದ ಕ್ರೀಡೆಯನ್ನು ದೈವ-ದೇವರ ಯಾವುದೇ ಕಾರ್ಯಕ್ರಮವಾದರೂ ಕಂಬಳ ಕ್ರೀಡೆ ಆಯೋಜನೆ ಮಾಡುತ್ತೇವೆ.ರಾಜ್ಯಾದ್ಯಂತ 30-40 ಲಕ್ಷ ಜನರು ನೋಡುವಂತೆ ಮಾಡಿದ್ದೇವೆ.. ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಸಹಕಾರ ನೀಡಿದಕ್ಕೆ ಧನ್ಯವಾದಗಳು ಎಂದರು.
ಸಾಕಷ್ಟು ಪರ-ವಿರೋಧದ ನಡುವೆ ಕಂಬಳ ಆಯೋಜನೆ ಮಾಡಲಾಗಿದೆ. ಆದರೆ, ವಿರೋಧ ಮಾಡುತ್ತಿದ್ದವರಿಗೆ ಗೊಂದಲ ಇತ್ತು. ಇದಕ್ಕೆನು ದೊಡ್ಡ ಬಹುಮಾನ ಇಲ್ಲ. ಪ್ರತಿಷ್ಠೆಗಾಗಿ ಓಡಿಸುವುದು. ಇದನ್ನು ರೈತಾಪಿ ವರ್ಗ ನಡೆಸುವುದು. ಕಂಬಳ ನಡೆಸುವವರು ಯಾರು ಶ್ರೀಮಂತರಲ್ಲ. ವಿಜೇತರಿಗೆ ಸಿಗುವುದು ಕೂಡ ಕಡಿಮೆ ಮೊತ್ತ. ಆದರೆ, ಅಲ್ಲಿಂದ ಇಲ್ಲಿಗೆ ಕರೆತರಲು ಸಾಕಷ್ಟು ಖರ್ಚು ಆಗುತ್ತೆ. ಮಗುವನ್ನು ಸಾಕುವಂತೆ ಕೋಣವನ್ನು ಸಾಕುತ್ತಾರೆ ಎಂದರು.
ಜಿಲ್ಲಾಡಳಿತದ ಸಹಕಾರದಿಂದ ನಾವು ಇಂದು ಯಶಸ್ವಿಯಾಗಿ ಕಂಬಳ ಆಯೋಜನೆ ಮಾಡಲಾಗಿದೆ. 48 ಗಂಟೆ ಕಂಬಳ ನಡೆಯಲಿದ್ದು, ಎಲ್ಲರೂ ಕುಟುಂಬ ಸಮೇತ ಬಂದು ನೋಡಿ. ಇಡೀ ರಾಜ್ಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಕಂಬಳವನ್ನು ತೋರಿಸಬೇಕು ಎನ್ನುವ ಉದ್ದೇಶ ಈಡೇರಿಸಬೇಕಿದೆ ಎಂದು ಹೇಳಿದರು.
ಈ ವೇಳೆ ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ, ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಚಂದ್ರಹಾಸ್ ಸಾದು ಸನೀಲ್, ಡಾ.ರಕ್ಷಿತ್ ರಾಜ್, ಜಿಲ್ಲಾಧಿಕಾರಿ ಜಿ.ಲಕ್ಷಿ÷್ಮಕಾಂತ್ ರೆಡ್ಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾ ನಗರಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಇತರರು ಉಪಸ್ಥಿತರಿದ್ದರು.