Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಹವಾಮಾನ ವೈಪರಿತ್ಯದಿಂದ ಅರ್ಧಕ್ಕೆ ಮೊಟಕುಗೊಂಡ ಏರ್ ಶೋ ; ನಿರಾಶೆಗೊಂಡ ಸಾವಿರಾರು ಮಂದಿ ವೀಕ್ಷಕರು


ಮೈಸೂರು: ನಗರದ ಬನ್ನಿಮಂಟಪದ ಮೈದಾನದ ಭಾನಂಗಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ದಸರಾ ವೈಮಾನಿಕ ಪ್ರದರ್ಶನವು ಹವಾಮಾನ ವೈಪರೀತ್ಯದ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿತು.
ಭಾರತೀಯ ವಾಯುಸೇನೆಯ ಸೂರ್ಯಕಿರಣ್ ತಂಡವು ವೈಮಾನಿಕ ಪ್ರದರ್ಶನ ಹಮ್ಮಿಕೊಂಡಿತ್ತು. ಬೆಂಗಳೂರಿನ ಯಲಹಂಕದಿAದ ವಿಂಗ್ ಕಮಾಂಡರ್ ಅಭಿಮನ್ಯ ಚಾಗಿ ನೇತೃತ್ವದಲ್ಲಿ ಆಗಮಿಸಿದ ಸೂರ್ಯಕಿರಣ್ ತಂಡವು, ನಿಗದಿಯಾದಂತೆ ಬೆಳಿಗ್ಗೆ 11ಕ್ಕೆ ನಾಲ್ಕು ತಂಡಗಳಾಗಿ ಒಟ್ಟು ಒಂಭತ್ತು ವಿಮಾನಗಳು ಭೋರ್ಗರೆಯುತ್ತ ಬನ್ನಿಮಂಟಪ ಸಮೀಪ ಆಗಸದಲ್ಲಿ ಹಾರಾಟ ಕೈಗೊಂಡವು. ಸುಮಾರು ಐದು ನಿಮಿಷ ಕಾಲ ಕಸರತ್ತು ಪ್ರದರ್ಶನ ನಡೆಯಿತು. ಆದರೆ ಮೋಡ ಕವಿದ ವಾತಾವರಣದ ಕಾರಣಕ್ಕೆ ಸೂರ್ಯಕಿರಣ್ ತಂಡವು ಪ್ರದರ್ಶನ ಮೊಟಕುಗೊಳಿಸಿ ವಾಪಸ್ ಆಯಿತು.
ಪ್ರತಿಕೂಲ ಹವಾಮಾನದ ಕಾರಣಕ್ಕೆ ಇಂದಿನ ಪ್ರದರ್ಶನವನ್ನು ಸೀಮಿತ ಅವಧಿಗೆ ನಿಲ್ಲಿಸಲಾಗಿದೆ. ಸೋಮವಾರ ವಾತಾವರಣ ತಿಳಿಯಾದಲ್ಲಿ ಎಂದಿನAತೆ ಬೆಳಿಗ್ಗೆ 11ಕ್ಕೆ ಪ್ರದರ್ಶನ ನಡೆಯಲಿದೆ’ ಎಂದು ಆಯೋಜಕರು ಘೋಷಿಸಿದರು.
ಏರ್ ಶೋ ನೋಡಲೆಂದು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದು. ಕೆಲವೇ ನಿಮಿಷ ಕಾಲ ವಿಮಾನಗಳ ಹಾರಾಟ ಮೊಟಕುಗೊಂಡಿರುವ ವಿಷಯ ತಿಳಿದು ನಿರಾಸೆಯಿಂದ ಹಿಂತಿರುಗಿದರು.