Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅರಮನೆಯ ಮಟ್ಟಿ ಮಣ್ಣಿನಲ್ಲಿ ರಣರೋಚಕವಾಗಿ ನಡೆಯಲಿದೆ ವಜ್ರ ಮುಷ್ಠಿ ಕಾಳಗ

(file photo )


ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಬುಧವಾರ ಅಂಬಾವಿಲಾಸ ಅರಮನೆಯಲ್ಲಿ ರಣ ರೋಚಕ ವಜ್ರಮುಷ್ಠಿ ಕಾಳಗ ನಡೆಯಲಿದೆ. ಇದಕ್ಕಾಗಿ ಅಖಾಡವನ್ನು ಸಿದ್ದಗೊಳಿಸಲಾಗಿದ್ದು, ಕಾಳಗಕ್ಕೆ ಜಟ್ಟಿಗಳನ್ನು ಆಯ್ಕೆ ಮಾಡಲಾಗಿದೆ.
ಯದುವಂಶದ ರಾಜರಿಗೆಂದು ವಿಜಯ ದಶಮಿಯ ದಿನ ಅರಮನೆಯಲ್ಲಿ ಜಟ್ಟಿಗಳು ವಜ್ರಮುಷ್ಠಿ ಕಾಳಗವನ್ನು ನಡೆಸುವುದು ಸಂಪ್ರದಾಯ. ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಗರಡಿಯಿಂದ ನಾಲ್ವರು ಜಟ್ಟಿಗಳನ್ನು ಆಯ್ಕೆ ಮಾಡಲಾಗಿದೆ. ವಜ್ರಮುಷ್ಠಿ ಕಾಳಕದ ಬಗ್ಗೆ ಗೊತ್ತಿರುವ ಯಜಮಾನರು ಸೇರಿಕೊಂಡು ವಜ್ರಮುಷ್ಠಿಕಾಳಗಕ್ಕೆ ಪೈಲ್ವಾನರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಎತ್ತರ, ತೂಕ ಹಾಗೂ ವಯಸ್ಸು ನೋಡಿಕೊಂಡು ಜಟ್ಟಿಗಳನ್ನು ಆಯ್ಕೆ ಮಾಡಲಾಗುತ್ತದೆ. ವಜ್ರಮುಷ್ಠಿ ಕಾಳಗದ ಮೂಲಕ ತಾಯಿ ಚಾಮುಂಡೇಶ್ವರಿ ದೇವಿಗೆ ಶಾಂತಿ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಉತ್ತಮ ಮಳೆ ಬೆಳೆ ಹಾಗೂ ಜಂಬೂಸವಾರಿ ಮೆರವಣಿಗೆ ಯಶ್ವಸಿಯಾಗಲಿದೆ ಎಂಬ ನಂಬಿಕೆ”.
ಈ ಹಿನ್ನೆಲೆಯಲ್ಲಿ ಭಾನುವಾರ ಅರಮನೆ ಆವರಣದಲ್ಲಿ ಕಾಳಗಕ್ಕೆ ಜಟ್ಟಿಗಳನ್ನು ಆಯ್ಕೆ ಮಾಡಲಾಯಿತು. ಈ ಬಾರಿ ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ಚಾಮರಾಜನಗರ ಜಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ.
ಮೈಸೂರಿನ ಮಹೇಶ್ ಜಟ್ಟಿ, ಬೆಂಗಳೂರಿನ ಚೇತನ್ ಜಟ್ಟಿ, ಚಾಮರಾಜನಗರದ ಸತೀಶ್ ಜಟ್ಟಿ, ಚನ್ನಪಟ್ಟಣದ ತೇಜಸ್ ಶೆಟ್ಟಿ ಅವರ ಹೆಸರನ್ನು ವಜ್ರಮುಷ್ಠಿ ಕಾಳಗಕ್ಕೆ ಉಸ್ತಾದಗಳು ಅಂತಿಮಗೊಳಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪೈಲ್ವಾನ್ ಮಹೇಶ್ ಜಟ್ಟಿ, ”ಜಂಬೂಸವಾರಿ ಮೆರವಣಿಗೆ ದಿನ ಜಟ್ಟಿ ಕಾಳಗ ಮಾಡುವುದು ತಲಾತಲಾಂತರದಿAದ ನಡೆದುಕೊಂಡು ಬಂದಿದೆ. ಈ ಕುಸ್ತಿಗಾಗಿ ಆರು ತಿಂಗಳಿನಿAದ ಗರಡಿಯಲ್ಲಿ ತಯಾರಿ ಮಾಡಿರುವೆ” ಎಂದರು.
ಬೆAಗಳೂರಿನ ಪೈಲ್ವಾನ ಲೋಕೇಶ್ ಜಟ್ಟಿ ಮಾತನಾಡಿ, ”ಜಟ್ಟಿ ಕಾಳಗ ಮೈಸೂರು ಸಂಸ್ಥಾನದ ಪಾರಂಪರಿಕ ಕಲೆಗಳಲ್ಲಿ ಒಂದು. ಅನೇಕ ವರ್ಷಗಳಿಂದ ಈ ಕಾಳಗವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅರಮನೆಗೆ ಸ್ವಾಮಿನಿಷ್ಠೆ ತೋರಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅಂತಹದಲ್ಲಿ ಪೈಲ್ವಾನರಿಗೆ ಸಿಗುತ್ತಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇವೆ ಎಂದರು.
ಚಾಮರಾಜನಗರ ಗರಡಿಯ ಗಿರೀಶ್ ಜಟ್ಟಿ ಮಾತನಾಡಿ, ”ಕೃಷ್ಣದೇವರಾಯ ಕಾಲದಿಂದಲ್ಲೂ, ತಾತ ಮುತ್ತಾತರ ಕಾಲದಿಂದಲ್ಲೂ ವಜ್ರಮುಷ್ಠಿ ಕಾಳಗ ನಡೆದುಕೊಂಡು ಬಂದಿದೆ. ಶ್ರವಣ ಮಾಸದಲ್ಲಿ ನಿಂಬುಜಾದೇವಿ ಅಮ್ಮನವರಿಗೆ ಪೂಜೆ ಮಾಡಿಸಿ, 15 ದಿವಸ ಸಾಧನೆ ಮಾಡಿ, ಗರಡಿ ವಜ್ರಮುಷ್ಠಿಯಲ್ಲಿ ಕಲಿತು, ಕುಸ್ತಿ ತಯಾರು ಮಾಡುತ್ತೇವೆ ಎಂದು ತಿಳಿಸಿದರು.

ರಕ್ತ ಚಿಮ್ಮಿದಾಗ ವಜ್ರಮುಷ್ಠಿ ಕಾಳಗಕಕ್ಕೆ ಕೊನೆ: ವಿಜಯದಶಮಿಯಂದು ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಜಟ್ಟಿಗಳು ಭಾಗವಹಿಸುವರು. ವಿಜಯ ಯಾತ್ರೆ ಹೊರಡುವ ಮುನ್ನ ರಾಜರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ರಾಜರಿಗೆ ನಮಸ್ಕರಿಸಿ ಕೆಲವೇ ಸೆಕೆಂಡುಗಳಲ್ಲಿ ಎರಡು ಜೋಡಿ ಜಟ್ಟಿಗಳು ಕೈ ಬೆರಳುಗಳಲ್ಲಿ ಧರಿಸಿರುವ ಕಾಡಿನ ಕೋಣದ ಕೊಂಬಿನ ಆಯುಧದಿಂದ ಪೈಪೋಟಿ ನಡೆಸುವರು. ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಠಿ ಕಾಳಗ ಕೊನೆಗೊಳ್ಳುತ್ತದೆ. ಈ ಕಾಳಗದಲ್ಲಿ ರಕ್ತ ಚಿಮ್ಮಿದ ಜಟ್ಟಿಗಳು ರಾಜರಿಗೆ ನಮಸ್ಕರಿಸಿದ ಬಳಿಕ ರಾಜರು ಅರಮನೆಯಿಂದ ವಿಜಯ ಯಾತ್ರೆ ನಡೆಸಿ ಬನ್ನಿ ಪೂಜೆ ಸಲ್ಲಿಸಿ ವಾಪಸ್ ಅರಮನೆಗೆ ಆಗಮಿಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವರು.