
ಮೈಸೂರು: ಮಳೆ, ಬೆಳೆ ಚೆನ್ನಾಗಿ ಆಗಿ ಈ ನಾಡು ಸಮೃದ್ಧಿಯಾಗಬೇಕು ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬುಧವಾರ ನಗರದ ಅಂಬಾವಿಲಾಸ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಅಗ್ರ ಪ್ರಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು ನನ್ನ ಬದುಕಿನ ಅಮೂಲ್ಯ ಕ್ಷಣ. ನನಗೆ ಮರೆಯಲಾಗದ ದಿನ ಇವತ್ತು. ಪ್ರಜಾ ಸೇವಕನಾಗಿ ಯಾವತ್ತೂ ಮರೆಯಲಾಗದ ದಿನ. ಇಡೀ ಜನರ ಆಶೀರ್ವಾದಿಂದ ತಾಯಿ ಚಾಮುಂಡಿ ಭವ್ಯ ಮೆರಣಿಗೆಯಲ್ಲಿ ನಾಡಿನ ಪ್ರತಿನಿಧಿಯಾಗಿ ಭಾಗವಹಿಸುವ ಅವಕಾಶ ದೊರೆತಿದೆ. ತಾಯಿ ಆಶೀರ್ವಾದವೇ ನಮಗೆ ದೊಡ್ಡ ಶಕ್ತಿ. ಮಳೆ ಬೆಳೆ ಚೆನ್ನಾಗಿ ಆಗಬೇಕು ಅಂತಾ ಚಾಮುಂಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಪ್ರತಿ ದಿನ ಲಕ್ಷಾಂತರ ಮಂದಿ ದಸರಾದ ಕಾರ್ಯಕ್ರಮಗಳು, ದಸರಾದ ವೈಭವವನ್ನು ನೋಡಿ ಸಂತೋಷಪಟ್ಟಿದ್ದಾರೆ. ಚಾಮುಂಡೇಶ್ವರಿಯ ಮೆರವಣಿಗೆ ಭಾಗ್ಯ ನನಗೆ ಸಿಕ್ಕಿದೆ. ದ್ವೇಷ ದೂರವಾಗಬೇಕು, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿಯೊಬ್ಬರ ಮನೆ, ಮನವನ್ನು ತಲುಪಬೇಕು. ಅನ್ಯಾಯ, ದುಃಖ ದೂರವಾಗಬೇಕು, ಕಷ್ಟಗಳು ಕರಗಬೇಕು, ಸಮಾನತೆ ಬೆಳೆಯಬೇಕು. ರೈತರ ಬದುಕು ಹಸನಾಗಬೇಕು, ಯುವಕರ ಬದುಕು ಬೆಳಗಬೇಕು, ಬೆಳೆಯಬೇಕು, ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಯಬೇಕು ಎಂದು ಹೇಳಿದರು.
ವಿಜಯನಗರ ಅರಸರಿಂದ ಬಳುವಳಿಯಾಗಿ ಬಂದ ದಸರಾಯನ್ನು ಉಳಿಸಿಕೊಂಡು ಹೋಗುತ್ತಿದ್ದೇವೆ, ಚಲನಚಿತ್ರ ನಟರು, ಸೈನಿಕರು ಕೂಡ ಭಾಗವಹಿಸಿದ್ದಾರೆ. ಹೊಸ ಆನೆ ಪ್ರಶಾಂತ ಚಿನ್ನದ ಸಂಬಾರಿಯನ್ನು ಹೊರುತ್ತಿದ್ದಾನೆ. ಹೊಸ ಹುರುಪು, ಹೊಸ ಶಕ್ತಿ ಸಿಗಲಿ, ತಾಯಿ ಚಾಮುಂಡೇಶ್ವಿಯ ಆಶೀರ್ವಾದವೇ ನಮಗೆ ಶಕ್ತಿಯಾಗಿದೆ ಎಂದರು.
ಹೊಸ ಆನೆ ಮೇಲೆ ತಾಯಿ ಚಾಮುಂಡಿ ಮೆರವಣಿಗೆ ಸಾಗಲಿದೆ, ಲಕ್ಷಾಂತರ ಜನ ಈ ದಸರಾ ನೋಡಿದ್ದಾರೆ. ಈ ದಸರೆಯಿಂದ ದ್ವೇಷ ದೂರವಾಗಲಿ. ಸಾಮರಸ್ಯ ನಿರ್ಮಾಣ ಆಗಲಿ, ಅನ್ಯಾಯ ಅಳಿಯಬೇಕು. ರಾಜ್ಯದಲ್ಲಿ ಪ್ರತಿ ವ್ಯವಸ್ಥೆಯಲ್ಲಿ ಅನ್ಯಾಯವಿದೆ, ಈ ಅನ್ಯಾಯ ದೂರವಾಗಬೇಕು. ಯುವಕರ ಭವಿಷ್ಯ ಬೆಳಗಬೇಕು. ಎಲ್ಲದಕ್ಕೂ ತಾಯಿ ಕೃಪೆ ಇರಬೇಕು. ಕಾವೇರಿ ನೀರು ಎಲ್ಲ ರಾಜ್ಯಕ್ಕೂ ತಲುಪುತ್ತಿದೆ. ಹಾಗಾಗಿ ರಾಜ್ಯಗಳ ನಡುವೆ ಸಾಮರಸ್ಯ ಬೆಳೆಯಬೇಕು ಎಂದು ನುಡಿದರು.