Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಚಿನ್ನದ ಅಂಬಾರಿಯನ್ನು ಹೊತ್ತ ಪ್ರಶಾಂತ ಜಂಬೂಸವಾರಿ ಯಶಸ್ವಿಗೊಳಿಸಿದ್ದಕ್ಕೆ ಮಾವುತ , ಕಾವಾಡಿ ದಿಲ್ ಖುಷ್

ಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನವಾದ ಬುಧವಾರ ನಡೆದ ವಿಜೃಂಭಣೆಯ ಜಂಬೂ ಸವಾರಿಯಲ್ಲಿ ನಾಡ ಶಕ್ತಿ ದೇವತೆ ತಾಯಿ ಚಾಮುಂಡೇಶ್ವರಿ ವಿರಾಜಮಾನರಾಗಿದ್ದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಗುರಿ ಮುಟ್ಟುವ ಮೂಲಕ ಯಶಸ್ವಿಗೊಳಿಸಿದ ಗಜಪಡೆಯ ಕ್ಯಾಪ್ಟನ್ ಪ್ರಶಾಂತ ಕೆಲಸಕ್ಕೆ ಅದರ ಮಾವುತ ಮಾವುತ ಚಿನ್ನಪ್ಪ ಹಾಗೂ ಕಾವಾಡಿ ಚಂದ್ರ ಸಂತೋಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾವುತ ಚಿನ್ನಪ್ಪ, ಮೊದಲ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತು ಎರಡು ಗಂಟೆ ಸಮಯದಲ್ಲಿ…

Read More

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:ಬಲರಾಮ್ 

ಪಿರಿಯಾಪಟ್ಟಣ : ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪಿರಿಯಾಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಬಲರಾಮ್ ತಿಳಿಸಿದರು.  ಪಿರಿಯಾಪಟ್ಟಣ ರೋಟರಿ ಕ್ಲಬ್ ವತಿಯಿಂದ ಜಿಲ್ಲಾ ಕಾರ್ಯಕ್ರಮ ನಮ್ಮ ಹಬ್ಬ ನಮ್ಮ ಹೆಮ್ಮೆ ಅಂಗವಾಗಿ ತಾಲೂಕಿನ ರಾವಂದೂರಿನಲ್ಲಿ ವೃದ್ಧಾಶ್ರಮದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ವಿವಿಧ ರೂಪದಲ್ಲಿ ಮಾಲಿನ್ಯಗೊಳಿಸುತ್ತಿದ್ದಾನೆ. ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ಪದಾರ್ಥಗಳನ್ನು ಪರಿಸರದಿಂದ ಮುಕ್ತಗೊಳಿಸಲು ನಾವೆಲ್ಲಾ ಶ್ರಮಿಸಬೇಕು. ಪರಿಸರ ಉತ್ತಮವಾಗಿದ್ದಲ್ಲಿ ಮಾತ್ರ ಮಾನವ…

Read More

ವಿವಿಧ ಕ್ಷೇತ್ರಗಳ 10 ಸಾಧಕರನ್ನು ಸನ್ಮಾನಿಸಲು ನಿರ್ಧಾರ- ತಹಸೀಲ್ದಾರ್ ಶ್ರೀನಿವಾಸ್ 

ಎಚ್ ಡಿ ಕೋಟೆ : ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ  ಕನ್ನಡ ಭಾಷೆ, ನಾಡು-ನುಡಿಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಹಶೀಲ್ದಾರ್ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಆಡಳಿತ ಭವನದ ಸಭಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,  ಗಡಿ ಭಾಗದಲ್ಲಿರುವ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಕನ್ನಡದ ಅಭಿಮಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಾಜ್ಯೋತ್ಸವದ ಅಂಗವಾಗಿ…

Read More

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ !

ಹುಣಸೂರು ; ಅನೈತಿಕ ಸಂಬAದ ಬಯಲಾಗುವ ಆತಂಕದಿAದ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಆಹಾರದಲ್ಲಿ ದತ್ತೂರಿ ಬೀಜದ ಪುಡಿ ಸೇರಿಸಿ ಕೊಲೆ ಮಾಡಿರುವ ಘಟನೆ ಹುಣಸೂರು ತಾಲೂಕಿನ ವಿನೋಬಾ ಕಾಲೋನಿಯಲ್ಲಿ ನಡೆದಿದೆ.ಗ್ರಾಮದ ನಿವಾಸಿ ನಾಗಯ್ಯರ ಪುತ್ರ ಗಾರೆ ಕೆಲಸಗಾರ ರಾಮಪ್ರಸಾದ್(೩೫)ಕೊಲೆಯಾದಾತ, ಈತನ ಪತ್ನಿ ಪವಿತ್ರ, ಪ್ರಿಯಕರ ಸುನಿಲ್ ಬಂದಿತ ಆರೋಪಿಗಳು. ಈತನ ಇಬ್ಬರು ಮಕ್ಕಳು ಅನಾಥವಾಗಿದ್ದಾರೆ.ಕಳೆದ ೧೨ ವರ್ಷಗಳ ಹಿಂದೆ ರಾಮಪ್ರಸಾದ್ ಮೈಸೂರಿನ ಕೆಸರೆಯ ರವಣಯ್ಯರ ಪುತ್ರಿ ಪವಿತ್ರಳನ್ನು ವಿವಾಹನವಾಗಿದ್ದರು. ದಂಪತಿಗೆ ೧೧ವರ್ಷದ ಮೋಕ್ಷಿತ್, ೯ವರ್ಷದ ಸಮೀಕ್ಷಾ ಇಬ್ಬರು…

Read More

ಮೈಸೂರಿನಲ್ಲಿ ನ್ಯಾಯರಥ ಅಭಿಯಾನಕ್ಕೆ ಚಾಲನೆ

ಮೈಸೂರು: ನಾಡಹಬ್ಬ ದಸರಾದ ಶುಭ ಸಂದರ್ಭದಲ್ಲಿ ಮೈಸೂರು ಜಿಲ್ಲೆಗೆ ಆಗಮಿಸಿರುವ ನ್ಯಾಯರಥ – ಚಕ್ರಗಳ ಮೇಲಿನ ಕಾನೂನು ಸಲಹಾ ಕೇಂದ್ರ ಬಹುಉಪಯೋಗಿ ವಾಹನದ ಮೂಲಕ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು.ಈ ನ್ಯಾಯರಥ ವಾಹನವು ಅ. ೨೫ ರವರೆಗೆ ಮೈಸೂರು ಅರಮನೆ ಬಳಿಯ ವಸ್ತುಪ್ರದರ್ಶನ ಮೈದಾನದಲ್ಲಿ ಕಾರ್ಯನಿರ್ವಹಿಸಲಿದೆ. ವಾಹನದಲ್ಲಿ ಪ್ಯಾನೆಲ್ ವಕೀಲರು, ಅರೆಕಾಲಿಕ ಕಾನೂನು ಸ್ವಯಂಸೇವಕರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಲಭ್ಯವಿದ್ದು, ಸಾರ್ವಜನಿಕರಿಗೆ ಕಾನೂನು ವಿಷಯಗಳಿಗೆ ಸಂಬAಧಿಸಿದAತೆ ಸಂಪೂರ್ಣ…

Read More

ದಸರಾ ಸಂಭ್ರಮದ ಬಳಿಕ ಸ್ವಚ್ಛತೆಗೆ ಕೈಜೋಡಿಸಿದ ಯುವಪಡೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಕ್ಕೆ ಸಾಕ್ಷಿಯಾದ ಅರಮನೆ ಆವರಣದಲ್ಲಿ, ಸಂಭ್ರಮದ ಬಳಿಕ ಸ್ವಚ್ಛತೆಯ ಜವಾಬ್ದಾರಿಯನ್ನು ಯುವಜನರು ಹೊತ್ತುಕೊಂಡರು. ಕಾವೇರಿ ಕಾಲೇಜ್ ಆಫ್ ಎಂಜಿನಿಯರಿAಗ್‌ನ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗುರುವಾರ ಅರಮನೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಸಾರ್ವಜನಿಕ ಸ್ಥಳಗಳ ಸಂರಕ್ಷಣೆ ಹಾಗೂ ಪರಿಸರ ಕಾಳಜಿಯ ಸಂದೇಶ ಸಾರಿದರು.ದಸರಾ ಕಾರ್ಯಕ್ರಮದ ಬಳಿಕ ಅರಮನೆ ಆವರಣದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ವಿದ್ಯಾರ್ಥಿಗಳು ಸ್ವತಃ ತೆರವುಗೊಳಿಸಿದರು. ಕೈಗವಸು ಧರಿಸಿ, ಕಸದ ಚೀಲಗಳನ್ನು ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ವಿದ್ಯಾರ್ಥಿಗಳು ಪ್ಲಾಸ್ಟಿಕ್…

Read More

ದಸರಾ ಸಂದರ್ಭದಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ಮೈಸೂರು ರೈಲ್ವೆ ವಿಭಾಗದ ಐತಿಹಾಸಿಕ ಸಾಧನೆ

ನಿರ್ಗಮಿಸುವ ಶೇ. ೫೩ಕ್ಕೂ ಹೆಚ್ಚು ಪ್ರಯಾಣಿಕರಿಂದ ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳ ಬಳಕೆಮೈಸೂರು; ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ಅಕ್ಟೋಬರ್ ೨೧ರಂದು, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ರೈಲು ನಿಲ್ದಾಣದಲ್ಲಿ ಉಂಟಾದ ಭಾರಿ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅಂದು ನಿಲ್ದಾಣದ ಮೂಲಕ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಡಿಜಿಟಲ್ ಟಿಕೆಟ್ ವ್ಯವಸ್ಥೆಯಲ್ಲಿ ಮೈಸೂರು ರೈಲ್ವೆ ವಿಭಾಗದ ಐತಿಹಾಸಿಕ ಸಾಧನೆ ಮಾಡಿದೆ.ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಬಳಕೆ ಶೇ. ೩೩.೨೩ರಷ್ಟು…

Read More

ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಡ್ರೋನ್ ಪ್ರದರ್ಶನದಲ್ಲಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಾಧನೆಯನ್ನು ಶ್ಲಾಘಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ದೀಪಾಲಂಕಾರ ವ್ಯವಸ್ಥೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ದಸರಾ ಜಂಬೂಸವಾರಿ ಮೆರವಣಿಗೆಯ ವೈಭವ, ಆಕರ್ಷಕ ಡ್ರೋನ್ ಪ್ರರ್ಶನವನ್ನು ವೀಕ್ಷಿಸಿದ ಇಂಧನ ಸಚಿವರು, “ಈ ಬಾರಿ ೩,೪೭೩ ಡ್ರೋನ್ ಗಳ ಮೂಲಕ ಆಕರ್ಷಕ ನವಿಲಿನ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ದಸರಾ ವೈಭವವನ್ನು ಜಾಗತಿಕ ಮಟ್ಟದಲ್ಲಿ…

Read More

ಬೀಳ್ಕೊಡುಗೆ ದಿನವೂ ಆನೆಗಳನ್ನು ನೋಡಲು ಜನಸಾಗರ

ಮೈಸೂರು: ದಸರಾ ಗಜಪಡೆಯನ್ನು ಬೀಳ್ಕೊಡುವ ದಿನವೂ ಆನೆಗಳನ್ನು ಕಣ್ತುಂಬಿಕೊಳ್ಳಲು ಅರಮನೆ ಆವರಣದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.ಗುರುವಾರ ಬೆಳಗ್ಗೆಯಿಂದಲೇ ಮಾಜಿ ಕ್ಯಾಪ್ಟನ್ ಅಭಿಮನ್ಯು, ನೂತನ ಕ್ಯಾಪ್ಟನ್ ಪ್ರಶಾಂತ ಸೇರಿದಂತೆ ದಸರಾ ಆನೆಗಳನ್ನು ವೀಕ್ಷಿಸಲು ಸಾರ್ವಜನಿಕರು ಆಗಮಿಸುತ್ತಿದ್ದರು. ಹಿರಿಯರು, ಮಕ್ಕಳು ಎನ್ನದೆ ಸಾವಿರಾರು ಮಂದಿ ಆನೆಗಳ ಬಳಿ ತೆರಳಿ ಅವುಗಳನ್ನು ಹತ್ತಿರದಿಂದ ವೀಕ್ಷಿಸಿ, ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು.ಕೆಲವರು ಆನೆಗಳ ಮಜ್ಜನವನ್ನು ವೀಕ್ಷಿಸಿದರೆ, ಇನ್ನು ಕೆಲವರು ತಾವು ತಂದಿದ್ದ ಬಾಳೆಹಣ್ಣುಗಳನ್ನು ವಾವುತರ ಮೂಲಕ ಆನೆಗಳಿಗೆ ತಿನ್ನಿಸಿ ಸಂತಸಪಟ್ಟರು. ದಸರಾ ಮೆರವಣಿಗೆಯಲ್ಲಿ…

Read More

ದಸರಾ ಆನೆಗಳಲ್ಲಿ ಸುಗ್ರೀವವೇ ತೂಕದಲ್ಲಿ ಬಲ ಭೀಮ*ಹೆಣ್ಣಾನೆಗಳ ತೂಕದಲ್ಲೂ ಹೆಚ್ಚಳ

ಮೈಸೂರು: ಈ ಬಾರಿ ಅದ್ಧೂರಿಯಾಗಿ ವೈಭವದಿಂದ ಜರುಗಿದ ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಯನ್ನು ಯಶಸ್ವಿಗೊಳಿಸಿ, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿರುವ ದಸರಾ ಗಜಪಡೆಯನ್ನು ಗುರುವಾರ ತೂಕಕ್ಕೆ ಹಾಕಲಾಯಿತು. ಗಜಪಡೆಯ ಆನೆಗಳು ಕಾಡಿನಲ್ಲಿರುವ ತಮ್ಮ ಸ್ವಸ್ಥಾನಕ್ಕೆ ಮರಳುವ ಮುನ್ನ ನಡೆದ ತೂಕದ ಪರೀಕ್ಷೆಯಲ್ಲಿ ದಸರಾಕ್ಕೂ ಮುನ್ನ 5,850 ಕೆ.ಜಿ. ತೂಕ ಹೊಂದಿದ್ದ ಸುಗ್ರೀವ ಆನೆ ಇದೀಗ 6,105 ಕೆ.ಜಿ. ತೂಗುವ ಮೂಲಕ ಗಜಪಡೆಯಲ್ಲೇ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರ ಹೊಮ್ಮಿದದಸರಾ ಅವಧಿಯಲ್ಲಿ…

Read More