Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಗಿನ್ನಿಸ್ ದಾಖಲೆಯ ಡ್ರೋನ್ ಪ್ರದರ್ಶನ, ದಸರಾ ದೀಪಾಲಂಕಾರಕ್ಕೆ ಸಚಿವ ಕೆ.ಜೆ. ಜಾರ್ಜ್ ಮೆಚ್ಚುಗೆ

  • ದಸರಾ ವೈಭವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡ್ರೋನ್ ಪ್ರದರ್ಶನ, ದೀಪಾಲಂಕಾರ
  • ಇಂಧನ ಇಲಾಖೆ, ಸೆಸ್ಕ್ ಅಧಿಕಾರಿಗಳು, ಸಿಬ್ಬಂದಿ ಪರಿಶ್ರಮವನ್ನು ಶ್ಲಾಘಿಸಿದ ಸಚಿವರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಡ್ರೋನ್ ಪ್ರದರ್ಶನದಲ್ಲಿ ಮತ್ತೊಂದು ಗಿನ್ನಿಸ್ ದಾಖಲೆ ನಿರ್ಮಿಸಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಸಾಧನೆಯನ್ನು ಶ್ಲಾಘಿಸಿರುವ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ದೀಪಾಲಂಕಾರ ವ್ಯವಸ್ಥೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಸರಾ ಜಂಬೂಸವಾರಿ ಮೆರವಣಿಗೆಯ ವೈಭವ, ಆಕರ್ಷಕ ಡ್ರೋನ್ ಪ್ರರ್ಶನವನ್ನು ವೀಕ್ಷಿಸಿದ ಇಂಧನ ಸಚಿವರು, “ಈ ಬಾರಿ ೩,೪೭೩ ಡ್ರೋನ್ ಗಳ ಮೂಲಕ ಆಕರ್ಷಕ ನವಿಲಿನ ಕಲಾಕೃತಿ ರಚಿಸಿ ಗಿನ್ನಿಸ್ ದಾಖಲೆ ಮಾಡುವ ಮೂಲಕ ದಸರಾ ವೈಭವವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರಚುರ ಪಡಿಸುವಲ್ಲಿ ಇಂಧನ ಇಲಾಖೆ ಮತ್ತು ಸೆಸ್ಕ್ ಪ್ರಮುಖ ಪಾತ್ರ ವಹಿಸಿವೆ,” ಎಂದರು.
“ದಸರಾ ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರವು ವಿಶಿಷ್ಟ ಮೆರುಗು ನೀಡಿದ್ದು, ನಗರದ ೧೪೬ ಕಿ.ಮೀ ರಸ್ತೆಗಳು, ೧೨೩ ವೃತ್ತಗಳು, ಪ್ರಮುಖ ಸ್ಥಳಗಳಲ್ಲಿ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ನಿರ್ಮಿಸಿರುವ ೮೦ ಕಲಾಕೃತಿಗಳು ಮೈಸೂರಿನ ಅಂದವನ್ನು ಹೆಚ್ಚಿಸಿದೆ. ದಸರಾ ವೇಳೆ ವಿದ್ಯುತ್ ದೀಪಾಲಂಕಾರವನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ತಂತ್ರಜ್ಞಾನದ ಆಕರ್ಷಕ ಡ್ರೋನ್ ಪ್ರದರ್ಶನವನ್ನು ಆಯೋಜಿಸಿರುವುದು ಇಂಧನ ಇಲಾಖೆಯ ಕಾರ್ಯಕ್ಷಮತೆ ಹಾಗೂ ಸೆಸ್ಕ್ನ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ,” ಎಂದು ಹೇಳಿದರು.
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಡ್ರೋನ್ ಪ್ರದರ್ಶನ ನಡೆದಿದ್ದು, ವಿವಿಧ ಬಣ್ಣಗಳು ಹಾಗೂ ವಿನ್ಯಾಸಗಳ ಮೂಲಕ ರೂಪುಗೊಂಡ ೧೨ ಆಕರ್ಷಕ ದೃಶ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಇದರಲ್ಲಿ ೩,೪೭೩ ಡ್ರೋನ್‌ಗಳು ಆಕಾಶದಲ್ಲಿ ಮೂಡಿಸಿದ ನವಿಲಿನ ಕಲಾಕೃತಿ ವಿಶೇಷ ಆಕರ್ಷಣೆಯಾಗಿತ್ತು ಮಾತ್ರವಲ್ಲದೆ, ಗಿನ್ನಿಸ್ ದಾಖಲೆಗೆ ಪಾತ್ರವಾಗಿರುವುದು ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ,” ಎಂದು ಶ್ಲಾಘಿಸಿದರು.
ಕಳೆದ ವರ್ಷ ಹುಲಿಯ ಆಕೃತಿಯನ್ನು ಡ್ರೋನ್‌ಗಳ ಮೂಲಕ ರೂಪಿಸಿ ದಾಖಲೆ ನಿರ್ಮಿಸಿದ್ದ ಸೆಸ್ಕ್, ಈ ಬಾರಿ ನವಿಲಿನ ಕಲಾಕೃತಿ ರಚಿಸಿ ಹೊಸ ದಾಖಲೆ ಬರೆಯುವ ಮೂಲಕ ತನ್ನ ಸಾಧನೆಯ ಹಾದಿಯನ್ನು ಮುಂದುವರಿಸಿದೆ. ಅಲ್ಲದೇ ದಸರಾವನ್ನು ಜಾಗತಿಕ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಪ್ರದರ್ಶನ ಮಹತ್ವದ ಕೊಡುಗೆ ನೀಡಿದೆ,” ಎಂದು ಹೇಳಿದರು.
ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನ ಯಶಸ್ವಿಯಾಗಿ ಮೂಡಿಬರಲು ಕಾರಣರಾದ ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸೇರಿದಂತೆ ಈ ಸಾಧನೆಯ ಹಿಂದೆ ಶ್ರಮಿಸಿದ ಸೆಸ್ಕ್ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಇಂಧನ ಇಲಾಖೆಯ ಎಲ್ಲ ಸಂಬAಧಪಟ್ಟ ಅಧಿಕಾರಿಗಳ ಕಾರ್ಯವನ್ನು ಸಚಿವ ಕೆ.ಜೆ. ಜಾರ್ಜ್ ಅವರು ಅಭಿನಂದಿಸಿದರು.

———-ಕೋಟ್ —–

“ಮುಖ್ಯಮಂತ್ರಿಗಳು ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ಮಾರ್ಗದರ್ಶನದಲ್ಲಿ ದಸರಾ ವಿದ್ಯುತ್ ದೀಪಾಲಂಕಾರ ಮತ್ತು ಡ್ರೋನ್ ಶೋ ಅತ್ಯಂತ ಯಶಸ್ವಿಯಾಗಿ ಜನಮೆಚ್ಚುಗೆ ಗಳಿಸಿತು. ದಸರಾ ವಿದ್ಯುತ್ ದೀಪಾಲಂಕಾರ ಮುಂದಿನ ಹತ್ತು(ಅ.೩೧) ದಿನಗಳವರೆಗೆ ಇರಲಿದ್ದು. ಪ್ರವಾಸಿಗರು ಹಾಗೂ ಸಾರ್ವಜನಿಕರು ಅಗತ್ಯ ಸುರಕ್ಷತಾ ನಿಯಮಗಳನ್ನು ಪಾಲಿಸಿ, ಆಕರ್ಷಕ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಿ.”

  • ಎಂ.ಎಸ್. ಅರ್ಚನಾ,
    ವ್ಯವಸ್ಥಾಪಕ ನಿರ್ದೇಶಕರು, ಚಾವಿಸನಿನಿ