
ಮೈಸೂರು; ನಗರದ ಚಾಮುಂಡಿಬೆಟ್ಟದಲ್ಲಿ ಅ. 24 ರಂದು ಬೆಳಿಗ್ಗೆ 7:55 ರಿಂದ 8:15 ಕ್ಕೆ ರಥೋತ್ಸವವು ಜರುಗಲಿದೆ. ಅ. 26 ರಂದು ಸಾಯಂಕಾಲ 7:00 ಗಂಟೆಗೆ ದೇವಿಕರೆಯಲ್ಲಿ ತೆಪ್ಪೋತ್ಸವವು ನಡೆಯಲಿದೆ. ಅಕ್ಟೋಬರ್ 28 ರಂದು ಸಂಜೆ 7 ಗಂಟೆಗೆ ಮುಡಿಉತ್ಸವಗಳು (ಜವಾಹರಿ) ಜರುಗಲಿವೆ. ಸಾರ್ವಜನಿಕ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ಚಾಮುಂಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.