Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸೇನೆ ಸೇರಬಯಸುವ ಯುವಕರಿಗೆ ಶಿವು ಸೈನಿಕ್ ಅಕಾಡೆಮಿಯಿಂದ ಉಚಿತ ದೈಹಿಕ ಸಾಮರ್ಥ್ಯ ಪರೀಕ್ಷೆ

ಪಿರಿಯಾಪಟ್ಟಣ: ದೇಶದ ಸೇನೆಯಲ್ಲಿ ಈ ಭಾಗದ ಯುವಕರು ಹೆಚ್ಚಾಗಿ ಸೇವೆ ಸಲ್ಲಿಸಬೇಕು. ದೇಶಭಕ್ತಿ ಹೆಚ್ಚಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಯುವಕ- ಯುವತಿಯರಿಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಶಿವು ಸೈನಿಕ್ ಅಕಾಡೆಮಿ ಸಂಚಾಲಕ ರಾವಂದೂರು ಶಿವು ತಿಳಿಸಿದರು.

ತಾಲೂಕಿನ ರಾವಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಮ್ಮಿಕೊಂಡಿದ್ದ ದೈಹಿಕ ಸಾಮರ್ಥ್ಯ ಪರೀಕ್ಷೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸದ್ಯದಲ್ಲೇ ಚಿತ್ರದುರ್ಗದಲ್ಲಿ ನಡೆಯುವ ಭಾರತೀಯ ಸೇನೆಯ ನೇಮಕಾತಿಯಲ್ಲಿ ಈ ಭಾಗದ ಅನೇಕ ಯುವಕ-ಯುವತಿಯರು ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಅವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುತ್ತದೆ ಹಾಗಾಗಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಅನುಕೂಲವಾಗುವಂತೆ ದೈಹಿಕ ಸಾಮರ್ಥ್ಯ ತರಬೇತಿ ನೀಡುವುದರ ಜೊತೆಗೆ ಅವರಿಗೆ ಮಾನಸಿಕ ಸಾಮರ್ಥ್ಯ ಹೆಚ್ಚಿಸುವ ಸಲಹೆ ಸಹಕಾರ ಹಾಗೂ ಅರಿವು ಮೂಡಿಸಲಾಗುತ್ತಿದೆ

 ಈ ಪೂರ್ವಭಾವಿ ಪರೀಕ್ಷೆಗೆ ಪಿರಿಯಾಪಟ್ಟಣ ಮಾತ್ರವಲ್ಲದೇ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಳಗಾವಿ, ವಿಜಯಪುರ, ಕೊಡಗು ಭಾಗದ ಯುವಕ ಯುವತಿಯರು ತರಬೇತಿಗಾಗಿ ಬರುತ್ತಿದ್ದು, ಇವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಅವರನ್ನು ಸೇನೆಗೆ ಸೇರ್ಪಡೆಗೊಳ್ಳಲು ಅಗತ್ಯ ಸಹಕಾವನ್ನು ನೀಡುತ್ತೇನೆ ಅಲ್ಲದೇ ಸೇನೆಗೆ ಸೇರಬಯಸುವವರಿಗೆ ತರಬೇತಿ ನೀಡುವುದರ ಜತೆಗೆ ಯುವಕರಲ್ಲಿ ದೇಶಭಕ್ತಿ ಮೂಡಿಸುವುದು, ದುಶ್ಟಟಗಳಿಗೆ ಬಲಿಯಾಗದಂತೆ ತಡೆಯುವುದು ಮಾನಸಿಕ ಒತ್ತಡಗಳಿಗೆ ಗುರಿಯಾಗದಂತೆ ಸೂಕ್ತ ತರಬೇತಿ ನೀಡುತ್ತಿದ್ದೇವೆ.

ಪಿರಿಯಾಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಶಿವು ಸೈನಿಕ್ ಅಕಾಡೆಮಿಯಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದು ನೂರಾರು ಯುವಕ ಯುವತಿಯರು ಭಾರತೀಯ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತರಬೇತಿಗಾಗಿ ಆಗಮಿಸಿದ್ದ ನೂರಾರು ಯುವಕ ಯುವತಿಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.