
ಎಚ್ ಡಿ ಕೋಟೆ : ವಿದ್ಯಾಸಂಸ್ಥೆಗಳು ಕೇವಲ ಶಿಕ್ಷಣ ನೀಡುವುದಲ್ಲ. ಜೊತೆಗೆ ಮಕ್ಕಳಿಗೆ ಹಂಚಿ ತಿನ್ನುವ ಮೂಲಕ ನಾವೆಲ್ಲರೂ ಒಂದೇ, ಒಂದೇ ಕುಟುಂಬದವರು ಎಂಬ ಭಾವನೆ ಮಕ್ಕಳಲ್ಲಿ ಮೂಡಬೇಕು ಎಂಬ ದೃಷ್ಟಿಯಿಂದ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಸೇಂಟ್ ಮೇರಿಸ್- ಸೇಂಟ್ ಜೋಸೆಫ್ಸ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಡಾ. ಬರ್ನಾಡ್ ಪ್ರಕಾಶ್ ಹೇಳಿದರು.
ಪಟ್ಟಣದ ಸೇಂಟ್ ಮೇರಿಸ್- ಸೇಂಟ್ ಜೋಸೆಫ್ಸ್ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಡಾ. ಬರ್ನಾಡ್ ಪ್ರಕಾಶ್, ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ಭಾವನೆ ಹೆಚ್ಚಾಗುತ್ತಿದೆ. ನಾನು, ನನ್ನ ಕುಟುಂಬ ಎಂಬಷ್ಟೇ ಭಾವನೆ ಮೂಡಿದೆ. ಇದು ಮಕ್ಕಳ ತಲೆಗೆ ಹೋಗಬಾರದು, ಹಂಚಿ ತಿನ್ನುವುದರಲ್ಲಿ ಸಿಗುವ ಸುಖ ಮತ್ತೊಂದರಲ್ಲಿ ಸಿಗುವುದರಿಲ್ಲ. ಶಾಲೆಗಳಲ್ಲಿ ಆಹಾರ ಮೇಳ ಸೇರಿದಂತೆ ಕೆಲವೊಂದು ಸಣ್ಣಪುಟ್ಟ ಚಟುವಟಿಕೆಗಳನ್ನು ಏರ್ಪಡಿಸುವ ಉದ್ದೇಶ, ಮಕ್ಕಳಲ್ಲಿ ಜವಾಬ್ದಾರಿ ಬರಬೇಕು. ಅವರಿಗೆ ಈಗಿನಿಂದಲೇ ಪರಸ್ಪರ ಸಹಕಾರ ಮನೋಭಾವನೆ ಬೆಳೆಯಬೇಕು. ನಾವೆಲ್ಲರೂ ಒಂದೇ ಎಂಬ ಐಕ್ಯತೆ ಸಂದೇಶ ಸಾರುವುದೇ ಇದರ ಉದ್ದೇಶವಾಗಿದೆ ಎಂದು ಡಾ. ಬರ್ನಾಡ್ ಪ್ರಕಾಶ್ ಹೇಳಿದರು.
ಮುಖ್ಯ ಶಿಕ್ಷಕಿ ಎಂ.ಪಿ ಸವಿತಾ ಮಾತನಾಡಿ, ನಮ್ಮದು ಚಟುವಟಿಕೆ ಆಧಾರಿತ ವಿದ್ಯಾಸಂಸ್ಥೆ.ಕೆಲ ಚಟುವಟಿಕೆಗಳ ಮೂಲಕ ಪಾಠ ಪ್ರವಚನ ನೀಡಿ, ಮಕ್ಕಳ ಸ್ವಕಲಿಕೆಗೆ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ. ಆಹಾರ ಮೇಳ ಮಕ್ಕಳ ಶೈಕ್ಷಣಿಕಾಭಿವೃದ್ದಿ ಜೊತೆಗೆ ಸಹಕಾರ ಮನೋಭಾವ, ಆತ್ಮವಿಶ್ವಾಸ, ಸಾಮಾಜಿಕ ಬೆಳವಣಿಗೆ ಸೇರಿದಂತೆ ಮೌಲ್ಯಾಧಾರಿತ ಶಿಕ್ಶಣ ನೀಡಲಾಗುತ್ತೆ ಎಂದರು. ಪೋಷಕರು ಸಹಕಾರದಿಂದಲೇ ಇವತ್ತು ನಮ್ಮ ವಿದ್ಯಾಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.
ಆಹಾರ ಮೇಳದಲ್ಲಿ ವೆಜಿಟೇಬಲ್ಸ್ ಪಲಾವ್, ಪಾನಿಪುರಿ, ಬಜ್ಜಿ, ಸಮೋಸ, ಪ್ರೂಟ್ ಸಲಾಡ್, ಮಜ್ಜಿಗೆ, ಜ್ಯೂಸ್, ಚಿಕನ್ ಬಿರಿಯಾನಿ, ಎಗ್ ಬಿರಿಯಾನಿ, ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಪೋಷಕರು ಮತ್ತು ಸಾರ್ವಜನಿಕರು ಖರೀದಿ ಮಾಡಿ ರುಚಿ ಸವಿದರು.
ಕಾರ್ಯಕ್ರಮದಲ್ಲಿ ಸೈಂಟ್ ಮೇರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಕುಮಾರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಮರಿಯ ಸುನಿತಾ ಸೇಇದಂತೆ ಬೋಧಕ ಮತ್ತು ಬೋಧಕೇತರ ವರ್ಗದವರು, ಪೋಷಕರು ಇದ್ದರು.