
ಮೈಸೂರು; ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವಧಿ ನವೆಂಬರ್‌ಗೆ ಮುಗಿಯುತ್ತೆ. ಹೊಸ ಅಧ್ಯಕ್ಷರ ಆಯ್ಕೆ ಆಗತ್ತೆ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿಗೆ ಶೇ 99.9 ಹೊಸ ಅಧ್ಯಕ್ಷರು ಬರುತ್ತಾರೆ
ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸುವುದು ಬಿಡುವುದು ವರಿಷ್ಠರ ತೀರ್ಮಾನವಾಗಿದೆ.
ಅವರನ್ನೇ ಮುಂದುವರೆಸಿದರೆ ಕಾರ್ಯಕರ್ತರಾಗಿ ನಾವು ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಸಚಿವ ಸೋಮಣ್ಣ ಬಿಜೆಪಿ ಅಧ್ಯಕ್ಷರಾಗುತ್ತರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಆಗ್ತಾರೆ ಅಂತ ನಾನು ಹೇಳೋದಿಕ್ಕೆ ಬರಲ್ಲ, ನಮ್ಮ ಹೈ ಕಮಾಂಡ್ ಸೀನಿಯರ್ಸ್, ಜೂನಿಯರ್ಸ್ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಒಳ್ಳೆ ಸಂಘಟನೆ ಮಾಡೋರನ್ನ ಅಧ್ಯಕ್ಷರಾಗಿ ಆಯ್ಕೆ ಮಾಡ್ತಾರೆ. ಅಧ್ಯಕ್ಷ ಸ್ಥಾನ ಮತ್ತೆ ಲಿಂಗಾಯತ ಸಮುದಾಯಕ್ಕೆ ಸಿಗತ್ತೆ ಅಂತಲ್ಲ, ಇತರೆ ಸಮುದಾಯದ ನಾಯಕರಿಗೂ ಅಧ್ಯಕ್ಷ ಗಾದಿ ಸಿಗಬಹುದು. ನಿತಿನ್ ನಬಿನ್ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಅಂತ ಯಾರಿಗೂ ಗೊತ್ತಿರಲಿಲ್ಲ
ಅದೇ ರೀತಿ ರಾಜ್ಯದಲ್ಲಿ ಆಗತ್ತೆ ಎಂದು ಹೇಳಿದರು.
ಶಾಸಕ ಯತ್ನಾಳ್ ಅವರನ್ನು ಬಿ.ವೈ. ವಿಜಯೇಂದ್ರ ಅವರು ಭೇಟಿ ಮಾಡಿರುವುದು
ಅಕಸ್ಮಿಕ. ಇಬ್ಬರು ಒಂದು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದಾರೆ, ರಾಜಕೀಯವಾಗಿ ಇಬ್ಬರು ಸರಿಯಾದರೆ ಒಳ್ಳೆಯದು, ಒಗ್ಗೂಡೊದು ಸರಿ
ಯತ್ನಾಳ್ ರನ್ನು ಪಕ್ಷಕ್ಕೆ ಮರಳಿ ತಗೋಬೇಕು, ಈ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಸಂಘಟನೆ ಬಗ್ಗೆ ಈಗಾಗಲೇ ಹೈ ಕಮಾಂಡ್ ಗೆ ವರದಿ ಕೊಟ್ಟಿದ್ದೇವೆ,
ಅದನ್ನು ಮತ್ತೆ ಹೇಳಲ್ಲ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಆಗಬೇಕು. ಗ್ರಾಮ ಪಂಚಾಯಿತಿ ಚುನಾವಣೆ ಈಗಾಗಲೇ 6 ತಿಂಗಳು ಮುಂದೆ ಹೋಯ್ತು, ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ, ಒಂದು ಕೋಟಿ ಮತಗಳು ಡಿಲೀಟ್ ಆಗಿವೆ. ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿಗೆ ನಮ್ಮ ತಕರಾರು ಇಲ್ಲ. ಡಿ ಲಿಮಿಟೇಷನ್ ಆಗಬೇಕು. ಜನಸಂಖ್ಯೆ ಆಧಾರದ ಮೇಲೆ ಚುನಾವಣೆ ಆಗಬೇಕು ಎಂದು ಹೇಳಿದರು.
ಮೈಸೂರಿನಲ್ಲಿ ಕುಮಾರ್ ಬಂಗಾರಪ್ಪ ಹೇಳಿಕೆ
ಹಾಲು, ಮೊಸರು ದರ ಏರಿಕೆ ಸಾಮಾನ್ಯ. ರೈತರಿಗೆ ಕೊಡುವ ಉದ್ದೇಶದಿಂದ ಬೆಲೆ ಏರಿಕ್ ಮಾಡಿದರೆ ಸ್ವಾಗತ. ಗ್ಯಾರೆಂಟಿಗೆ ಕೊಡಲು ಹಣವಿಲ್ಲ, ರಾಜ್ಯ ಸರ್ಕಾರ ದಿವಾಳಿ ಹಂತಕ್ಕೆ ತಲುಪಿದೆ. ಇದೇ ರೀತಿ ಮುಂದುವರೆದರೆ 10ಲಕ್ಷ ಕೋಟಿ ಸಾಲದ ಗಡಿಯನ್ನು ದಾಟುತ್ತದೆ.
ರಾಜ್ಯ ಸರ್ಕಾರ ಆರ್ಥಿಕತೆ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.