Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಭೋವಿ ಸಮಾಜದ ಜಮೀನು ಒತ್ತುವರಿ ತೆರವಿಗೆ ಒತ್ತಾಯಿಸಿ ಧರಣಿ 

ಎಚ್ .ಡಿ.ಕೋಟೆ : ಭೋವಿ ಸಮಾಜದ ಬಡ  ಮಕ್ಕಳ ವಿದ್ಯಾರ್ಥಿನಿಲಯಕ್ಕೆ  ಸರ್ಕಾರ ಮಂಜೂರು ಮಾಡಿಕೊಟ್ಟಿರುವ ಜಮೀನು ಒತ್ತುವರಿಯಾಗಿದ್ದು, ಈ ಸಂಬಂಧ ಅತಿಕ್ರಮ ಪ್ರವೇಶ ಮಾಡಿರುವವ ವಿರುದ್ಧ ಕಾನೂನು ಕ್ರಮಕೈಗೊಂಡು ನಮ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ಹಾಗು ತಾಲೂಕು ಮಟ್ಟದ ಭೋವಿ ಸಮಾಜದವರು ತಹಸೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು.  ಭೋವಿ ಸಮುದಾಯದ ಹೆಚ್ ಡಿ ಕೋಟೆ ಮತ್ತು ಸರಗೂರು ತಾಲೂಕು ಅಧ್ಯಕ್ಷ ಐಡಿಯಾ ವೆಂಕಟೇಶ್ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು,  ನಮ್ಮ ಸಮಾಜದ ಜಾಗವನ್ನು…

Read More

ಸಂವಿಧಾನ ದಿನಾಚರಣೆಯ ಅಂಗವಾಗಿ ನ.26 ಮತ್ತು 27ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜನೆ; ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಮೈಸೂರು: ಸಂವಿಧಾನ ದಿನಾಚರಣೆಯ ಅಂಗವಾಗಿ ನ.26 ಮತ್ತು 27ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನನಲ್ಲಿ ಎರಡು ದಿನಗಳ ರಾಷ್ಟಿçÃಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ , ಶಾಸಕ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಾಗದ ಐದಾರು ಜಿಲ್ಲೆಗಳ ಪ್ರಗತಿಪರ ಚಿಂತಕರು, ಸ್ನೇಹಿತರು, ಹೋರಾಟಗಾರರು, ಬುದ್ಧಿಜೀವಿಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಆಗುತ್ತಿರುವ ಆಡಳಿತಾತ್ಮಕ ದೋಷಗಳು, ಪ್ರಜಾಸತ್ತಾತ್ಮಕ ನಿಲುವುಗಳು, ಸಂವಿಧಾನದ ಆಶಯಗಳು ಹಾಗೂ ಜನರ…

Read More

ಶ್ರೀರಂಗಪಟ್ಟಣ ದಸರಾಗೆ ಧನಂಜಯ, ಲಕ್ಷ್ಮಿ, ರೂಪ ಆನೆಗಳ ಆಯ್ಕೆ; ಸಿಸಿಎಫ್ ಡಾ. ಎಸ್. ಎಸ್. ರವಿಶಂಕರ್

ಮೈಸೂರು: “ಸಾಂಪ್ರದಾಯಿಕ ಶ್ರೀರಂಗಪಟ್ಟಣ ದಸರಾದ ಮೆರವಣಿಗೆಯಲ್ಲಿ ಭಾಗವಹಿಸಲು ಧನಂಜಯ ಗಂಡು ಆನೆಯಾಗಿ, ಹೆಣ್ಣು ಆನೆಗಳಾಗಿ ಲಕ್ಷಿ÷್ಮ ಮತ್ತು ರೂಪ ಆನೆಗಳನ್ನು ಆಯ್ಕೆ ಮಾಡಲಾಗಿದೆ” ಎಂದು ಸಿಸಿಎಫ್ ಡಾ. ಎಸ್. ಎಸ್. ರವಿಶಂಕರ್ ತಿಳಿಸಿದರು.ಸೋಮವಾರ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ದಸರಾ ಗಜಪಡೆ ಹಾಗೂ ಅಶ್ವದಳಕ್ಕೆ ನಡೆದ ಅಂತಿಮ ಹಾಗೂ ಮೂರನೇ ಹಂತದ ಸಿಡಿಮದ್ದು ತಾಲೀಮಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಧನಂಜಯ ಹಾಗೂ ಲಕ್ಷಿ÷್ಮ, ರೂಪಾ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ…

Read More

ದಸರಾ ಪುಸ್ತಕ ಮೇಳ, ಛಾಯಾಚಿತ್ರ ಪ್ರದರ್ಶನ, ಲಲಿತಾ ಕಲೆ ಪ್ರದರ್ಶನ ವೀಕ್ಷಿಸಿದ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ

ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಉದ್ಘಾಟನೆಮಾಡಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಸೋಮವಾರ ವಿವಿಧೆಡೆ ಭೇಟಿ ನೀಡಿದರು.ದಸರಾ ಪುಸ್ತಕ ಮೇಳದಲ್ಲಿ ವಿವಿಧ ಪುಸ್ತಕಗಳನ್ನು ವೀಕ್ಷಣೆ ಮಾಡಿದರು.ನಗರದ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅ.11 ರಿಂದ 20ರವರೆಗೆ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ದಸರಾ ಪುಸ್ತಕ ಮೇಳದ ಮಳಿಗೆಗಳಿಗೆ ಭೇಟಿಕೊಟ್ಟ ಶ್ರೀಗಳು , ಹಲವಾರು ಪುಸ್ತಕಗಳನ್ನು ವೀಕ್ಷಣೆ…

Read More

ಯುವ ದಸರಾ ಉದ್ಘಾಟಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ:ಚಿತ್ರ ನಟ ಪ್ರಭುದೇವ್

ಮೈಸೂರು: ದಸರಾದಲ್ಲಿ ಆಯೋಜಿಸಲಾಗಿರುವ ಯುವ ದಸರಾವನ್ನು ನಾನು ಉದ್ಘಾಟಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಖ್ಯಾತ ಚಿತ್ರ ನಟ ಪ್ರಭುದೇವ್ ಹೇಳಿದರು.ಸಾಂಸ್ಕöÈತಿಕ ನಗರಿ ಮೈಸೂರಲ್ಲಿ ಅದ್ಧೂರಿಯಾಗಿ ನಡೆಯಲಿರುವ ಯುವ ದಸರಾ 2026ಕ್ಕೆ ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ಅಕ್ಟೋಬರ್ 13ರಂದು ಚಾಲನೆ ನೀಡಲಿದ್ದಾರೆ. ಈ ಹಿನ್ನಲೆ ಮೈಸೂರಿಗೆ ಆಗಮಿಸಿದ ಅವರನ್ನು ಯುವ ದಸರಾ ಸಮಿತಿಯು ಅದ್ದೂರಿಯಾಗಿ ಸ್ವಾಗತಿಸಿದೆ. ಈ ವೇಳೆ ದಸರಾವನ್ನು ಉದ್ಘಾಟಿಸಿದ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿ ಸಿದ್ದೇಶ್ವರ ಸ್ವಾಮೀಜಿ ಅವರು ಪ್ರಭುದೇವ್ ಅವರನ್ನು…

Read More

ದಸರಾ ಕನ್ನಡ ಪುಸ್ತಕ ಮಾರಾಟ ಮೇಳಕ್ಕೆ ಚಾಲನೆ: ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಿ :ಶಿವರಾಜ್ ಎಸ್ ತಂಗಡಗಿ

ಮೈಸೂರು: ಇತ್ತೀಚೆಗೆ ಮಕ್ಕಳು ಪುಸ್ತಕ ಓದುವುದನ್ನು ಬಿಟ್ಟು ಮೊಬೈಲ್, ವಾಟ್ಸ್‌ಆ್ಯಪ್ ಹಾಗೂ ಫೇಸ್‌ಬುಕ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಿಂದ ಅವರ ಜೀವನ ಮೊಬೈಲ್‌ಮಯವಾಗುತ್ತಿದೆ. ಪೋಷಕರು ಮಕ್ಕಳಿಗೆ ಕೇವಲ ಮಳಿಗೆಗಳನ್ನು ತೋರಿಸುವುದಷ್ಟೇ ಅಲ್ಲದೆ, ಅವರಲ್ಲಿ ಪುಸ್ತಕ ಓದುವ ಹವ್ಯಾಸ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೆಳೆಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ಹೇಳಿದರು. ಇಂದು ನಗರದ ಭಾರತ್ ಸ್ಕೌಟ್ಸ್ & ಗೈಡ್ಸ್ ಮೈದಾನಲ್ಲಿ ಕನ್ನಡ ಪುಸ್ತಕ ಮಾರಾಟ…

Read More

ದಸರಾ ಕುಸ್ತಿಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ನಾಡಕುಸ್ತಿ ಪಂದ್ಯಾವಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಕುಸ್ತಿಪಟುಗಳಿಗೆ ಭುಜ ತಟ್ಟುವ ಮೂಲಕ ಉದ್ಘಾಟಿಸಿದರು. ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣದ ಶ್ರೀ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ದಸರಾ ನಾಡಕುಸ್ತಿ ಪಂದ್ಯಾವಳಿಯಲ್ಲಿ ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳಾರತಿ ನೆರವೇರಿಸಿ,ಮೊದಲ ಮಾರ್ಫಿಟ್ ಕುಸ್ತಿಯನ್ನು ಕೆಲ ಸಮಯ ವೀಕ್ಷಿಸಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು. 2025ನೇ ದಸರಾ ಕಂಠೀರವ…

Read More

ದಸರಾ ದೀಪಾಲಂಕಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಂದ ಚಾಲನೆ : ಝಗಮಗಿಸಲಾರಂಭಿಸಿದ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲಾರ0ಭಿಸಿದ ಜನರು

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಭಾನುವಾರ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಚಾಲನೆ ನೀಡಿದರು.ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸ್ವೀಚ್ ಆನ್ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಸ್ವೀಚ್ ಆನ್ ಮಾಡುತ್ತಿದ್ದಂತೆ ಇಡೀ ಮೈಸೂರು ನಗರಾದ್ಯಾಂತ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರದಿAದ ಮೈಸೂರು ಝಗಮಗಿಸತೊಡಗಿದ್ದು, ಜನರು ಕಣ್ತುಂಬಿಕೊAಡು ಖುಷಿ ವ್ಯಕ್ತಪಡಿಸಿದರು.ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡಿದ ಬಳಿಕ…

Read More

ದಸರಾ ಕ್ರೀಡಾಕೂಟ ವಿಜೇತರಿಗೆ ನಗದ ಬಹುಮಾನ ಹೆಚ್ಚಳ: ಡಿಸಿಎಂ ಡಾ.ಜಿ.ಪರಮೇಶ್ವರ

ದಸರಾ ಕ್ರೀಡಾಕೂಟ ಸಿಎಂ ಕಪ್-2026ಗೆ ಚಾಲನೆಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ “ದಸರಾ ಕ್ರೀಡಾಕೂಟ ಸಿಎಂ ಕಪ್ ಗೆ ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾನುವಾರ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ದಸರಾ ಉತ್ಸವದಲ್ಲಿ ಕ್ರೀಡೆಗೆ ಅಂದಿನ ವಿಜಯನಗರದ ಅರಸರೂ ಸೇರಿದಂತೆ ಮೈಸೂರಿನ ಅರಸರು ಪ್ರೋತ್ಸಾಹ ನೀಡುತ್ತಾ ಬಂದಿದ್ದರು. ಅದರಂತೆ ದಸರಾ…

Read More

ಅ.28ರಂದು ಬಸವಜಯಂತಿ ಕಾರ್ಯಕ್ರಮ; ಶ್ರೀನಟರಾಜಸ್ವಾಮೀಜಿ

ಕೆ.ಆರ್.ನಗರ; ಇದೇ ಅ.28ರಂದು ನಡೆಯಲಿರುವ ಬಸವಜಯಂತಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆದು ಜನಮನ್ನಣೆ ಗಳಿಸಲಿ ಎಂದು ಗಾವಡಗೆರೆ ಮಠದ ಶ್ರೀನಟರಾಜಸ್ವಾಮೀಜಿ ಹೇಳಿದರು.ಪಟ್ಟಣದ ಶ್ರೀಮಲೈಮಹದೇಶ್ವರ ದೇವಾಲಯದ ಆವರಣದಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಸವಜಯಂತಿ ಕಾರ್ಯಕ್ರಮದ ಪ್ರಚಾರರಥಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೆ ಉತ್ಸವಕ್ಕೆ ಸಕಲ ತಯಾರಿ ನಡೆಸಲಾಗಿದ್ದು ಹಲವು ಪೀಠಾಧಿಪತಿಗಳು, ಗಣ್ಯರು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳನ್ನು ಸಮಾಜದ ಮುಖಂಡರು ತೆರಳಿ ಆಹ್ವಾನಿಸಿದ್ದು ಎಲ್ಲರೂ ಕಾರ್ಯಕ್ರಮಕ್ಕೆ ಬರುವುದಾಗಿ ಸಕಾರಾತ್ಮಕವಾಗಿ ಒಪ್ಪಿಗೆ ಸೂಚಿಸಿರುವುದು ಕಾರ್ಯಕ್ರಮ ಯಶಸ್ಸು ಕಾಣಲಿದೆ ಎಂದರು.ಪ್ರತಿವರ್ಷವೂ…

Read More