
ಮೈಸೂರು; ಕಬಿನಿ ಜಲಾಶಯದಿಂದ ನಾಲೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ಆಗ್ರಹಿಸಿ ಸೋಮವಾರ ನಗರದಲ್ಲಿ ರೈತರು ಕಾಡಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಮಣಿದ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಕಬಿನಿ ನಾಲೆಗಳಿಗೆ ಸೆ.27 ರಿಂದ ನೀರು ಹರಿಸುವುದಾಗಿ ಭರವಸೆ ನೀಡಿದರು.
ಕಬಿನಿ ಅಚ್ಚುಕಟ್ಟು ಭಾಗದ ರೈತರು, ಮೈಸೂರಿನ ಗನ್ ಹೌಸ್ ಸರ್ಕಲ್ ಬಳಿ ಜಮಾಯಿಸಿ, ಮೆರವಣಿಗೆಯ ಮೂಲಕ ಸಾಗಿ ಕಾಡ ಕಚೇರಿಗೆ ಮುತ್ತಿಗೆ ಹಾಕಿದರು. ಬೇಕೇ ಬೇಕು ನಾಲೆಗಳಿಗೆ ನೀರು ಬಿಡಬೇಕು. ತಮಿಳುನಾಡಿಗೆ ನೀರು ನಿಲ್ಲಿಸಬೇಕು. ರೈತ ದ್ರೋಹಿ ಸರ್ಕಾರಕ್ಕೆ ಧಿಕ್ಕಾರ. ನಾಟಕೀಯ ಸರ್ಕಾರಕ್ಕೆ ಧಿಕ್ಕಾರ ಎಂಬತ್ಯಾದಿ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು ಪ್ರತಿಭಟನೆಯ ನೇತೃತ್ವ ವಹಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬಿನಿ ಜಲಾಶಯ ಎರಡು ತಿಂಗಳ ಹಿಂದೆ ಭರ್ತಿಯಾಗಿದ್ದರೂ, ರೈತರಿಗೆ ಮೋಸ ಮಾಡಿ, ರಾಜ್ಯ ಸರ್ಕಾರ ತಮಿಳುನಾಡಿನ ಮುಖ್ಯಮಂತ್ರಿಗಳ ಸ್ನೇಹಕ್ಕಾಗಿ ನೀರು ಹರಿಸಿ ಜಲಾಶಯ ಖಾಲಿ ಮಾಡಿ ಕಾವೇರಿ ಅಚ್ಚು ಕಟ್ಟು ರೈತರನ್ನು ಬಲಿ ಕೊಟ್ಟಿದೆ . ಈಗ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನ ಬರಪೀಡಿತ ಪ್ರದೇಶ ಎಂದೂ ಘೋಷಣೆ ಮಾಡಿ. ರೈತರ ಕಣ್ಣಿಗೆ ಮಣೆರೆಚುತಿದೆ. ನೀರಾವರಿ ಅಧಿಕಾರಿಗಳು ವಾಸ್ತವ ಸ್ಥಿತಿ ಅರಿತಿದ್ದರೂ, ಮಂತ್ರಿಗಳ, ಸರ್ಕಾರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕಷ್ಟ ಪಟ್ಟು, ಸಾಲ ಮಾಡಿ ಬೆಳೆದಿರುವ ಬೆಳೆ ರಕ್ಷಣೆಗಾಗಿ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಬೇಕು ಇಲ್ಲದಿದ್ದರೆ ಅಧಿಕಾರಿಗಳು ಇಲ್ಲೇ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು — P ಪ್ರತಿಭಟನೆ ಸ್ಥಳಕ್ಕೆ ಬಂದ ಕಾಡ ಕಚೇರಿಯ ಅಧೀಕ್ಷಕ ಅಭಿಯಂತರ ರಘು ಮೂರ್ತಿ ಮಾತನಾಡಿ, ಕಬಿನಿ ಜಲಾಶಯದಲ್ಲಿ ನೀರು 68 ಅಡಿಗೆ ಇಳಿಕೆಯಾಗಿದೆ, ಕುಡಿಯೋ ನೀರಿಗೆ ಮಾತ್ರ ಉಪಯೋಗವಾಗುತ್ತದೆ ಎಂದಾಗ, ಕಬಿನಿ ಜಲಾಶಯದಲ್ಲಿ ಭರ್ತಿಯಾಗಿದ ನೀರನ್ನು ಖಾಲಿ ಮಾಡಿ ರೈತರ ಕಣ್ಣಿಗೆ ಮಣ್ಣು ಎರಚುತ್ತಿದ್ದೀರಿ ಎಂದು ತರಾಟೆ ತೆಗೆದುಕೊಂಡರು. ನದಿಯ ಮೂಲಕ ಬಿಡುವ ನೀರನ್ನ ನಿಲ್ಲಿಸಲೇಬೇಕು ಎಂದು ರೈತರು ಹಠ ಹಿಡಿದು ಕುಳಿತರು. ಮಧ್ಯಾಹ್ನದ ನಂತರ ಮುಖ್ಯ ಇಂಜಿನಿಯರ್ ಗಣೇಶ್, ಅಧಿಕ್ಷಕ ಅಭಿಯಂತರ ರಘುಮೂರ್ತಿ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಸಿ, ನದಿ ಮೂಲಕ 900 ಕ್ಯೂಸಸ್ ಬಿಡಲಾಗುತ್ತಿತ್ತು, 400 ಕ್ಯೂಸೆಸ್ ಗೆ ನಿಲ್ಲಿಸಿ, 500 ಕ್ಯೂಸೆಸ್ನ್ನು ಕುಡಿಯುವ ನೀರಿಗಾಗಿ ಬಿಡಲಾಗುವುದು. ನಾಲೆಗಳಿಗೆ ಸೆ. 27ರಿಂದ ಎರಡನೇ ಕಟ್ಟು ನೀರು ಹರಿಸಲಾಗುವುದು . ಈಗ ಉಳಿಕೆ ಮಾಡಿದ ನೀರೆನ್ನ ಮೂರನೇ ಕಟ್ಟು ನೀರಿಗೆ ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ, ನಂತರ ಚಳುವಳಿಯನ್ನು ಕೈಬಿಡಲಾಯಿತು
ಪ್ರತಿಭಟನೆಯಲ್ಲಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷಿ÷್ಮÃಪುರ ವೆಂಕಟೇಶ್, ಕೆ.ಜಿ.ಗುರುಸ್ವಾಮಿ, ಕಬಿನಿ ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ ಗೌರಿಶಂಕರ್, ಸಿದ್ದೇಶ್, , ದೇವನೂರು ವಿಜಯೇಂದ್ರ, ಉಡಿಗಾಲ ರೇವಣ್ಣ, ಪಟೇಲ್ ಶಿವಮೂರ್ತಿ, ಕುರುಬೂರು ಪ್ರದೀಪ್, ರಾಜೇಶ್, ಅಂಬಳೆ ಮಂಜುನಾಥ್, ಕೋಟೆ ಸುನೀಲ್, ಕೆಂಡಗಣಪ್ಪ, ಕಾಟೂರು ನಾಗೇಶ್, ಉಮೇಶ್, ಕೆಂಡಗಣ್ಣಸ್ವಾಮಿ, ಗಿರೀಶ್, ವಾಜಮಂಗಲ ಮಹಾದೇವು, ಶಿವಣ್ಣ, ಡಿ ಪಿ ಪರಸಿವಮೂರ್ತಿ ಮಹೇಶ್, ಸತೀಶ್, ಬಾಲು, ಸಿದ್ಧರಾಮ, ವಾಚ್ ಕುಮಾರ್, ಪ್ರಭಾಕರ್, ರಂಗರಾಜು, ಮಿಲಿಟರಿ ಕುಮಾರ್, ಕೂಡನಹಳ್ಳಿ ಸೋಮಣ್ಣ, ಸಿದ್ದರಾಜು, ಬಸವರಾಜು, ಶಿವಪ್ರಸಾದ್, ರೂಪ, ಪ್ರಭಾಮಣಿ ಸೇರಿದಂತೆ 500 ಕ್ಕೂ ಹೆಚ್ಚು ರೈತರು ಇದ್ದರು.